ಕನ್ನಡಪ್ರಭ ವಾರ್ತೆ ಮಂಡ್ಯ
ದೇಶದಲ್ಲಿ ೧೫ ಕೋಟಿ ಜನರಲ್ಲಿ ಕಿಡ್ನಿ ತೊಂದರೆ ಎದುರಿಸುತ್ತಿದ್ದಾರೆ. ಕರ್ನಾಟಕದಲ್ಲಿ ಐದು ಸಾವಿರ ಜನರು ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರೆ ೧೫೦ ಮಂದಿ ಕಿಡ್ನಿ ದಾನ ಮಾಡುತ್ತಿದ್ದಾರೆ. ಹೀಗೆ ವಿವಿಧ ಅಂಗಾಂಗಗಳ ಅಭಾವ ಎದುರಾಗಿರುವುದರಿಂದ ಹೆಚ್ಚು ಜನರು ಅಂಗಾಂಗ ದಾನಕ್ಕೆ ಮುಂದಾಗುವಂತೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬ್ರೈನ್ ಡೆತ್ ಬಗ್ಗೆ ಜನರಲ್ಲಿ ಸರಿಯಾದ ಅರಿವು ಮೂಡಿಸುವುದು. ಅಂಗಾಂಗಗಳನ್ನು ಹೊರತೆಗೆಯುವ ಪ್ರಕ್ರಿಯೆಯಲ್ಲಿ ಸಮಯದ ಪ್ರಾಮುಖ್ಯತೆ ವಿವರಿಸುವುದು ಹಾಗೂ ಮರಣೋತ್ತರ ಅಂಗಾಗದಾನದ ಮಹತ್ವ ತಿಳಿಸುವುದು ಬಹಳ ಅವಶ್ಯವಾಗಿದೆ ಎಂದು ನುಡಿದರು.ಅಂಗಾಂಗ ದಾನದ ಬಗ್ಗೆ ಕೆಲವೊಂದು ತಪ್ಪು ಕಲ್ಪನೆಗಳಿವೆ. ವೆಂಟಿಲೇಟರ್ ಸಹಾಯದಿಂದ ಹೃದಯ ಬಡಿಯುತ್ತಿರುವುದರಿಂದ ಬ್ರೈನ್ ಡೆಡ್ ಆದ ವ್ಯಕ್ತಿಗೆ ಮತ್ತೆ ಜೀವ ಮರಳಿಸಬಹುದು ಎಂಬ ನಂಬಿಕೆ ಇದೆ. ಆದರೆ, ಬ್ರೈನ್‌ಡೆತ್ ಎಂದರೆ ವೈದ್ಯಕೀಯ, ಕಾನೂನುಬದ್ಧವಾಗಿ ಸಂಪೂರ್ಣ ಮರಣ ಎಂದರ್ಥ. ಅಂಗಾಂಗಗಳನ್ನು ಹೊರತೆಗೆಯುವುದರಿಂದ ದೇಹದ ರೂಪಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಗೌರವಪೂರ್ವಕ ಶಸ್ತ್ರಚಿಕಿತ್ಸೆ ಮೂಲಕವೇ ಪ್ರಕ್ರಿಯೆ ನಡೆದು ಅಂತಿಮ ಸಂಸ್ಕಾರಕ್ಕೆ ದೇಹವನ್ನು ಸಿದ್ಧಪಡಿಸಿಕೊಡಲಾಗುವುದು ಎಂದರು.
ಕಿಡ್ನಿಯನ್ನು ವಿಶೇಷ ಸಂರಕ್ಷಣಾ ತಂತ್ರಜ್ಞಾನದ ಸಹಾಯದಿಂದ ೨೪ ರಿಂದ ೩೬ ಗಂಟೆಗಳವರೆಗೆ ಸಂರಕ್ಷಿಸಬಹುದು. ಕಣ್ಣಿನ ಕಾರ್ನಿಯಾವನ್ನು ಹಲವು ದಿನಗಳವರೆಗೆ ಸಂರಕ್ಷಿಸಬಹುದು. ನೇತ್ರದಾನ ಹೆಚ್ಚಿನ ಪ್ರಮಾಣದಲ್ಲಿದ್ದು, ಹೃದಯ, ಶ್ವಾಸಕೋಶ, ಕಿಡ್ನಿಯಂತಹ ಪ್ರಮುಖ ಅಂಗಗಳ ವಿಷಯದಲ್ಲಿ ಪ್ರತಿಯೊಂದು ನಿಮಿಷವೂ ಮಹತ್ವದ್ದಾಗಿದೆ ಎಂದರು.
ಗೋಷ್ಠಿಯಲ್ಲಿ ಮಣಿಪಾಲ್ ಆಸ್ಪತ್ರೆ ನಿರ್ದೇಶಕ ಬಿ.ಜೆ.ಸಂದೀಪ್ ಪಟೇಲ್ ಇದ್ದರು.