ಅಸ್ಪೃಶ್ಯತೆ ಅಚರಣೆಗೆ ಶಿಕ್ಷಣ ಕೊರತೆ ಕಾರಣ

KannadaprabhaNewsNetwork |  
Published : May 19, 2024, 01:48 AM IST
ಪಂಕ್ತಿ | Kannada Prabha

ಸಾರಾಂಶ

ರೈತರಲ್ಲಿ ಒಗ್ಗಟು ಇಲ್ಲ ಅದಕ್ಕಾಗಿಯೇ ರೈತ ಅಭಿವೃದ್ಧಿ ಆಗುತ್ತಿಲ್ಲ ಎಲ್ಲಾ ಕುಲಗಳ ರೈತರು ಒಂದಾಗಿ ಹೋರಾಟ ಮಾಡಲಿ ರಾಯಚೂರಿನಲ್ಲಿ ಕೀಳದೆ ಬಿಟ್ಟ ಹತ್ತಿಗೂ ಬೆಲೆ ಬರುತ್ತೆ, ಕೋಲಾರದಲ್ಲಿ ಬೆಳೆಯುವ ರಾಗಿಗೂ ಬೆಲೆ ಬರುತ್ತೆ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಭಾರತಕ್ಕೆ ಸ್ವಾತಂತ್ರ‍್ಯ ಬಂದು ೭೫ ವರ್ಷ ಕಳೆದರೂ ಇನ್ನೂ ನಮ್ಮ ದೇಶದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿರುವುದು ಬೇಸರದ ಸಂಗತಿ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ವಿಷಾದ ವ್ಯಕ್ತಪಡಿಸಿದರು.

ತಾಲೂಕಿನ ಪ್ರಗತಿಪರ ರೈತ ಕುರುಟಹಳ್ಳಿಯ ರಾಧಾಕೃಷ್ಣರ ಮನೆಯಲ್ಲಿ ಅರಿವು ಭಾರತ - ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತ ದಡೆಗೆ ವತಿಯಿಂದ ನಡೆದ ಸಮಾನತೆಗಾಗಿ ಸಹಭೋಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಸ್ಪೃಶ್ಯತೆ ಆಚರಣೆ ನಿಂತಿಲ್ಲ

ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ನಿವಾರಣೆಯಾಗದಿರಲು ಶಿಕ್ಷಣದ ಕೊರತೆ, ಜಾತಿ ವ್ಯವಸ್ಥೆ, ಅಸಮಾನತೆ ಹಾಗೂ ಅಸ್ಪೃಶ್ಯತೆ ಕಾರಣ. ಇಂತಹ ವ್ಯವಸ್ಥೆಗಳನ್ನು ಡಾ. ಬಿ.ಆರ್ ಅಂಬೇಡ್ಕರ್ ಅನುಭವಿಸದಲ್ಲದೇ, ಆಳವಾಗಿ ಅಧ್ಯಯನ ಮಾಡಿ ಸಂವಿಧಾನವನ್ನು ರಚನೆ ಮಾಡುವುದರ ಮೂಲಕ ಅಸ್ಪೃಶ್ಯತೆ ನಿವಾರಣೆಗೆ ಮುಂದಾಗಿದ್ದರು ಎಂದರು.

ರೈತರಲ್ಲಿ ಒಗ್ಗಟು ಇಲ್ಲ ಅದಕ್ಕಾಗಿಯೇ ರೈತ ಅಭಿವೃದ್ಧಿ ಆಗುತ್ತಿಲ್ಲ ಎಲ್ಲಾ ಕುಲಗಳ ರೈತರು ಒಂದಾಗಿ ಹೋರಾಟ ಮಾಡಲಿ ರಾಯಚೂರಿನಲ್ಲಿ ಕೀಳದೆ ಬಿಟ್ಟ ಹತ್ತಿಗೂ ಬೆಲೆ ಬರುತ್ತೆ, ಕೋಲಾರದಲ್ಲಿ ಬೆಳೆಯುವ ರಾಗಿಗೂ ಬೆಲೆ ಬರುತ್ತೆ ರೈತರು ಸಾಮಾಜಿಕ ಹೋರಾಟಕ್ಕೆ ಮುಂದಾಗಬೇಕೆAದರು.

ಗ್ರಾಮ ರತ್ನ ಪುರಸ್ಕಾರ

ಕರ್ನಾಟಕ ಜಾನಪದ ಆಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅರಿವು ಭಾರತದಿಂದ ಕುರುಟಹಳ್ಳಿ ರಾಧಾಕೃಷ್ಣರಿಗೆ ಗ್ರಾಮ ರತ್ನ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಅರಿವು ಭಾರತದ ಡಾ. ಶಿವಪ್ಪಅರಿವು, ಪಂಡಿತ ಮುನಿವೆಂಕಟಪ್ಪ, ವಿಜಯಕುಮಾರ್, ಪ್ರಕಾಶಕ ರಾಜಶೇಖರ್, ಆರ್. ರಾಮಣ್ಣ, ಅಬ್ಬಣಿ ಶಿವಪ್ಪ, ಡಾ, ಪಾಪಿರೆಡ್ಡಿ, ಜಾನಪದ ಕಲಾವಿದ ಮುನಿರೆಡ್ಡಿ, ಪ್ರಗತಿಪರ ರೈತ ನಾಗನಾಳ ಮಂಜು, ಹಾಡುಗಾರ್ತಿ ಮಂಜುಳ ಮತಿತ್ತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ