ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ನಗರ, ಪುರಸಭೆ ಹಾಗೂ ಪಟ್ಟಣ ಭಾಗದಲ್ಲಿರುವ ಉದ್ಯಾವನಗಳು ಸ್ಥಳೀಯ ಸಂಸ್ಥೆಗಳಿಂದ ನಿರ್ವಹಣೆಯಿಲ್ಲದೆ ಸೋರಗುತ್ತಿವೆ. ಅಳವಡಿಸಲಾಗಿರುವ ಆಟೋಪಕರಣಗಳು ಹಾಳಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಜಿಲ್ಲೆಯಲ್ಲಿ ಕೋಲಾರ, ಮುಳಬಾಗಿಲು, ಕೆಜಿಎಫ್ ನಗರಸಭೆ, ಮಾಲೂರು, ಶ್ರೀನಿವಾಸಪುರ, ಬಂಗಾರಪೇಟೆ ಪುರಸಭೆ ಹಾಗೂ ಕುರಗಲ್, ವೇಮಗಲ್ ಪಟ್ಟಣ ಪಂಚಾಯಿತಿಗಳು ಇವೆ, ಜಿಲ್ಲಾ ಕೇಂದ್ರ ಕೋಲಾರ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿರುವ ಉದ್ಯಾನವನಗಳು ಉಪಯೋಗಕ್ಕೆ ಯೋಗ್ಯವಲ್ಲದಂತಾಗಿವೆ. ಇದರ ಪರಿಣಾಮ ಜನತೆ ಪಾರ್ಕ್‌ಗಳಿಗೆ ಹೋಗಲು ಹೆದರುವಂತ ಪರಿಸ್ಥಿತಿ ಎದುರಾಗಿದೆ. ಉದ್ಯಾನವನಗಳ ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗಳಿಂದ ಪ್ರತ್ಯೇಕ ಗಾರ್ಡನ್ ಸಿಬ್ಬಂದಿ, ಭದ್ರತಾ ಸಿಬ್ಬಂದಿಯನ್ನು ಸ್ಥಳೀಯ ಸಂಸ್ಥೆಗಳಿಂದಲೇ ನೇಮಕ ಮಾಡಲಾಗಿರುತ್ತದೆ. ಆದರೆ ಸರಿಯಾದ ಸಮಯಕ್ಕೆ ಸಬಂಳ ಆಗದ ಕಾರಣದಿಂದ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನು ಪೌರ ಕಾರ್ಮಿಕರು ವಾರಕ್ಕೆ ಒಂದೆರಡು ದಿನ ಸ್ವಚ್ಛತೆ ಮಾಡುತ್ತಾರೆ ಹೊರತು ನಿರ್ವಹಣೆ ಮಾಡುವವರು ಇಲ್ಲವಾಗಿದೆ.
ಪಾರ್ಕ್‌ನಲ್ಲಿ ಸ್ವಚ್ಛತೆ ಮರೀಚಿಕೆಪಾರ್ಕ್ಗಳಲ್ಲಿ ಅಂತೂ ಸ್ವಚ್ಛತೆ ಮರಿಚೀಕೆಯಾಗಿದೆ. ಸುತ್ತಮುತ್ತಲಿನ ನಿವಾಸಿಗಳು ಪಾರ್ಕ್‌ಗಳ ಸಮೀಪದಲ್ಲಿ ಕಸದ ರಾಶಿ ಹಾಕುತ್ತಾರೆ. ಅದನ್ನು ನಾಯಿಗಳು ತಂದು ಪಾರ್ಕ್‌ನಲ್ಲಿ ಹಾಕಿ ಅಸ್ವಚ್ಛತೆ ಉಂಟು ಮಾಡುತ್ತಿವೆ. ನಗರ ಸ್ವಚ್ಛ ಮಾಡು ಪೌರಕಾರ್ಮಿಕರು ಉದ್ಯಾನವನಗಳನ್ನು ಸ್ವಚ್ಛ ಮಾಡಲು ಮುಂದಾಗುತ್ತಿಲ್ಲ. ಇದರಿಂದಾಗಿ ಪಾರ್ಕ್‌ಗಳ ಅಂದ ಕೆಡಲು ಪ್ರಮುಖ ಕಾರಣವಾಗಿದೆ. ಗಣ್ಯರ ಹೆಸರಿಗೆ ಕಳಂಕ
ಪಾರ್ಕ್‌ಗಳಿಗೆ ಪ್ರತಿದಿನ ಮಕ್ಕಳು, ವೃದ್ಧರು ಆಗಮಿಸುತ್ತಾರೆ, ಸ್ವಚ್ಛತೆ ಮರೀಚಿಕೆಯಾಗಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು ಹುಲ್ಲು ಚಿಗುರು ಬಂದಿದೆ, ಅಸ್ವಚ್ಚತೆಯಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಡೆಂಘಿ, ಮಲೇರಿಯಾ ಜ್ವರ ಹಡರುವ ಆತಂಕ ಎದುರಾಗಿದೆ.
ಉದ್ಯಾನಗಳಲ್ಲಿ ಮಕ್ಕಳಿಗಾಗಿ ಅಟೀಪಕರಣ ಹಾಗೂ ವಾಯುವಿಹಾರಕ್ಕೆ ಬರುವವರಿಗಾಗಿ ಮಲ್ಟೀಜಿಮ್ ಸಮಾಗ್ರಿಗಳನ್ನು ಅಳಡಿಸಲಾಗಿದೆ. ಆರಂಭದಲ್ಲಿ ಕಳಪೆ ಸಾಮಾಗ್ರಿಗಳನ್ನು ಅಳಡಿಸಿರುವುದರಿಂದ ಕೆಲವೇ ದಿನಗಳಲ್ಲಿ ಹಾಳಾದವು. ಆದರೆ ಅಧಿಕಾರಿಗಳನ್ನು ಅವುಗಳನ್ನು ದುರಸ್ಥಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಕೋಟ್...........ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಉದ್ಯಾನವನಗಳ ಬಗ್ಗೆ ಕಾಳಜಿಯಿಲ್ಲದಂತೆ ಕಾಣುತ್ತಿದೆ. ಮಳೆ ಗಾಲ ಶುರುವಾಗಿದ್ದು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಪಾರ್ಕ್‌ಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾ ವ್ಯವಸ್ಥೆ ಮಾಡಬೇಕು.- ಹಾಬಿ ರಮೇಶ್, ಹಿರಿಯ ಕ್ರೀಡಾಪಟು.