ಮಂಗಳೂರು : ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವಿಶ್ವ ಫಾರ್ಮಸಿಸ್ಟ್ ದಿನಾಚರಣೆ ಕಾರ್ಯಕ್ರಮ ನಡೆಯಿತು.
ನಿವಾಸಿ ವೈದ್ಯಾಧಿಕಾರಿ ಡಾ.ಜಗದೀಶ್, ಫಾರ್ಮಸಿ ಅಧಿಕಾರಿಗಳ ಸಮರ್ಪಣಾ ಮನೋಭಾವವನ್ನು ಕೊಂಡಾಡಿದರು.
ಹಿರಿಯ ಫಾರ್ಮಸಿ ಅಧಿಕಾರಿಗಳಾದ ಸಂಧ್ಯಾ, ಮಹಾಲಕ್ಷ್ಮಿ, ಲಾವಣ್ಯ, ಮೋಹನ್ ದಾಸ್, ಪುಷ್ಪಲತಾ, ರೇಖಾ, ಕಿರಿಯ ಫಾರ್ಮಸಿಸ್ಟ್‌ಗಳಾದ ಅಕ್ಷತಾ, ರಿಶಾನಾ, ಸಕೀನಾ ಅವರನ್ನು ಸನ್ಮಾನಿಸಲಾಯಿತು.ಹಿರಿಯ ಪ್ರಸೂತಿ ತಜ್ಞ ಡಾ.ದಯಾನಂದ್, ಮಕ್ಕಳ ತಜ್ಞೆ ಡಾ.ಮನಿಷ್, ಸಹಾಯಕ ಆಡಳಿತಾಧಿಕಾರಿ ಅನಿತಾ ಸತ್ಯನ್, ನರ್ಸಿಂಗ್ ಸುಪರಿಂಟೆಂಡೆಂಟ್ ಗೀತಾ, ಕೆಎಂಸಿ ನರ್ಸಿಂಗ್ ಸುಪರ್‌ವೈಸರ್ ಮಲ್ಲಿಕಾ, ಆಫೀಸ್ ಸುಪರಿಂಟೆಂಡೆಂಟ್ ಶಂಕರ್ ಇದ್ದರು.ಹಿರಿಯ ಶುಶ್ರೂಧಿಕಾರಿ ಮಹಾಲಕ್ಷ್ಮೀ ಸ್ವಾಗತಿಸಿದರು. ಸರೋಜಾ ವಂದಿಸಿದರು. ಶುಶ್ರೂಷಾಧಿಕಾರಿ ಜಯಲಕ್ಷ್ಮಿ ನಿರೂಪಿಸಿದರು.