ಕೆರೆ ತುಂಬಿಸುವ ಯೋಜನೆ ಅನುಮೋದನೆ: ಶಾಸಕ ಮಾನೆ ಹರ್ಷ

KannadaprabhaNewsNetwork |  
Published : Aug 09, 2025, 12:01 AM IST
ಶ್ರೀನಿವಾಸ ಮಾನೆ | Kannada Prabha

ಸಾರಾಂಶ

ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದೆನಿಸಿರುವ ನರೇಗಲ್ಲ ಕೆರೆ ಸೇರಿದಂತೆ ೧೧೧ ಕೆರೆಗಳ ಒಡಲು ತುಂಬಲಿದೆ ಎಂದು ತಿಳಿಸಿರುವ ಶಾಸಕ ಮಾನೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

ಹಾನಗಲ್ಲ: ವರದಾ ನದಿಯಿಂದ ತಾಲೂಕಿನ ೧೧೧ ಕೆರೆಗಳನ್ನು ತುಂಬಿಸುವ ₹೨೨೦ ಕೋಟಿ ವೆಚ್ಚದ ನರೇಗಲ್ಲ, ಕೂಸನೂರು ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡುವ ಮೂಲಕ ಬಹಳ ವರ್ಷಗಳ ರೈತರ ಬೇಡಿಕೆ ಈಡೇರಿಸಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹರ್ಷ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ನರೇಗಲ್, ಕೂಸನೂರು ಭಾಗದ ಕೆರೆಗಳನ್ನು ತುಂಬಿಸಿ, ನೀರಾವರಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎನ್ನುವುದು ರೈತರ ಬೇಡಿಕೆಯಾಗಿತ್ತು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಮಹತ್ವಾಕಾಂಕ್ಷೆಯ ಯೋಜನೆಯ ಅನುಷ್ಠಾನಕ್ಕೆ ಕ್ರಿಯಾಯೋಜನೆ ರೂಪಿಸಿ, ಪ್ರಯತ್ನಿಸಲಾಗಿತ್ತು. ಅದೀಗ ಫಲ ನೀಡಿದ್ದು, ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಯೋಜನೆಯ ಅನುಷ್ಠಾನದಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ.

ಅಂತರ್ಜಲ ಮರುಪೂರಣ ಸಾಧ್ಯವಾಗಲಿದೆ. ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದೆನಿಸಿರುವ ನರೇಗಲ್ಲ ಕೆರೆ ಸೇರಿದಂತೆ ೧೧೧ ಕೆರೆಗಳ ಒಡಲು ತುಂಬಲಿದೆ ಎಂದು ತಿಳಿಸಿರುವ ಶಾಸಕ ಮಾನೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.ಡ್ರೋನ್ ಮೂಲಕ ನ್ಯಾನೋ ಗೊಬ್ಬರ ಸಿಂಪರಣೆ

ಶಿಗ್ಗಾಂವಿ: ತಾಲೂಕಿನ ಮುನವಳ್ಳಿ ಗ್ರಾಮದಲ್ಲಿ ದೇವೇಂದ್ರಪ್ಪ ಹಳವಳ್ಳಿ ಅವರ ಹೊಲದಲ್ಲಿ ಸೋಯಾಬಿನ್‌ ಬೆಳೆಗಳಿಗೆ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಸಿಂಪಡಣೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು.ತಾಲೂಕು ತಾಂತ್ರಿಕ ವ್ಯವಸ್ಥಾಪಕ ವನರಾಜ ಬಣಕಾರ ಮಾತನಾಡಿ, ಸಾಂಪ್ರದಾಯಿಕ ಯೂರಿಯಾ ರಸಗೊಬ್ಬರಕ್ಕಿಂತ ನ್ಯಾನೋ ಯೂರಿಯಾ ಬೆಳೆಗಳಿಗೆ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಲಿದೆ. ಇದು ಬೆಳೆಗಳಿಗೆ ತ್ವರಿತ ಪೋಷಾಕಾಂಶ ನೀಡುತ್ತದೆ. ಬಳಕೆಯಲ್ಲಿರುವ ಯೂರಿಯಾ ಅಂತರ್ಜಲಕ್ಕೆ ತಲುಪಿ ಜಲಮೂಲ ಮಾಲಿನ್ಯಗೂಳಿಸುತ್ತದೆ. ಮಣ್ಣಿನ ಆರೋಗ್ಯ ಪೋಷಕಾಂಶಗಳ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದರು.

ರಾಜೇಸಾಬ ಜಂಗ್ಲೆಪ್ಪನವರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಮಾತನಾಡಿ ನ್ಯಾನೋ ಯೂರಿಯಾ ಬಳಕೆ ಮೊದಲಿನಿಂದಲೂ ಇದೆ. ಆದರೆ ಇದೀಗ ರೈತರ ಆಸಕ್ತಿ ಹೆಚ್ಚಾಗಿದೆ. ನ್ಯಾನೋ ಯೂರಿಯಾ ಡ್ರೋನ್‌ ಮೂಲಕ ಸಿಂಪರಣೆ ಸಾಧ್ಯವಾಗದಿದ್ದರೆ ಬೆನ್ನಿಗೆ ಕ್ಯಾನ್ ಕಟ್ಟಿಕೊಂಡು ಸಿಂಪರಣೆ ಮಾಡಬಹುದು. ಅಲ್ಲದೆ ಇದರೊಂದಿಗೆ ಕೀಟನಾಶಕ ಬೆರಸಿ ಸಿಂಪಡಣೆ ಮಾಡಬಹುದು ಎಂದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಿಬ್ಬಂದಿಗಳಾದ ಮಂಗಳಾ ಪಾಟೀಲ, ಸುಷ್ಮಾ ಪಾಟೀಲ, ಮಂಜುನಾಥ ಮಾಳಾಪುರ,ತಾಲೂಕಿನ ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಕಳಕಳಿಯ ಎಸ್ಎಸ್‌ ಅಪ್ರತಿಮ ನಾಯಕ: ಸೈಯದ್‌ ನುಡಿನಮನ
ಶಿವಶಂಕರಪ್ಪ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ