ನಾಳೆ ಶಿರಸಿಯಲ್ಲಿ 1 ಲಕ್ಷ ಆಕ್ಷೇಪಣೆಗೆ ಚಾಲನೆ

KannadaprabhaNewsNetwork |  
Published : Sep 04, 2026, 03:00 AM IST
ಸಭೆಯಲ್ಲಿ ರವೀಂದ್ರ ನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ಸೂಕ್ಷ್ಮ ಪ್ರದೇಶ ಗುರುತಿಸುವಿಕೆಯಿಂದ ಕೃಷಿಕರಿಗೆ ಮತ್ತು ಜನಜೀವನದ ವ್ಯವಸ್ಥೆ ಮೇಲೆ ವಸತಿ ಪ್ರದೇಶವನ್ನು ಸೂಕ್ಷ್ಮಪ್ರದೇಶವೆಂದು ಗುರುತಿಸಿರುವುದರಿಂದ ವರದಿಯನ್ನು ವಿರೋಧಿಸುವುದು ಅನಿವಾರ್ಯ.

ಶಿರಸಿ: ಜಿಲ್ಲೆಯಲ್ಲಿ ೫೬೭ ಹಳ್ಳಿಗಳನ್ನ ಅತೀ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದ ಕಸ್ತೂರಿರಂಗನ್ ವರದಿಯ ೭ನೇ ಅಧಿಸೂಚನೆಗೆ ೧ ಲಕ್ಷ ಆಕ್ಷೇಪ ಪತ್ರ ಸಲ್ಲಿಸುವ ಅಭಿಯಾನಕ್ಕೆ ಸೆ. ೫ರಂದು ಶಿರಸಿಯಲ್ಲಿ ಚಾಲನೆ ನೀಡಲಾಗುತ್ತಿದೆ.

೨ನೇ ಹಂತದಲ್ಲಿ ಸೆ. ೭ರಂದು ಹೊನ್ನಾವರ ಹಾಗೂ ೯ರಂದು ಅಂಕೋಲಾದಲ್ಲಿ ಅಭಿಯಾನದ ಮುಂದುವರಿದ ಭಾಗವಾಗಿ ಆಕ್ಷೇಪ ಪತ್ರ ಸಲ್ಲಿಸುವ ಅಭಿಯಾನ ಸಂಘಟಿಸಲಾಗಿದೆ ಎಂದು ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಸೂಕ್ಷ್ಮ ಪ್ರದೇಶ ಗುರುತಿಸುವಿಕೆಯಿಂದ ಕೃಷಿಕರಿಗೆ ಮತ್ತು ಜನಜೀವನದ ವ್ಯವಸ್ಥೆ ಮೇಲೆ ವಸತಿ ಪ್ರದೇಶವನ್ನು ಸೂಕ್ಷ್ಮಪ್ರದೇಶವೆಂದು ಗುರುತಿಸಿರುವುದರಿಂದ ವರದಿಯನ್ನು ವಿರೋಧಿಸುವುದು ಅನಿವಾರ್ಯವೆಂದರು.

ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಗೆ ೧೦ ಪ್ರಮುಖ ಅಂಶಗಳು ಆಕ್ಷೇಪ ಪತ್ರದಲ್ಲಿ ಅಡಕವಾಗಿದೆ. ಅದರಂತೆ, ಈ ಹಂತದಲ್ಲಿ ಕೇಂದ್ರ ಪರಿಸರ ಇಲಾಖೆಗೆ ವರದಿ ವಿರೋಧಕ್ಕೆ ಸಂಬಂಧಿಸಿದ ರಾಜ್ಯ ಸರ್ಕಾರವು ಸಕ್ರಿಯವಾಗಿ ೪೩ ಅಂಶಗಳ ಹಕ್ಕೊತ್ತಾಯಿಸಲು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಕೈಪಿಡಿ ಹೋರಾಟಗಾರರ ವೇದಿಕೆಯು ರೂಪಿಸಿದೆ ಎಂದು ತಿಳಿಸಿದ್ದಾರೆ.ಆಕ್ಷೇಪಣಾ ಪ್ರಮುಖ ಅಂಶಗಳು: ಆಕ್ಷೇಪ ಪತ್ರದಲ್ಲಿ ಪ್ರಸ್ತಾಪಿಸಿದ ಕಸ್ತೂರಿ ರಂಗನ್‌ ವರದಿಯು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಆಧಾರದ ಮೆಲೆ ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ.ಗ್ರಾಮದ ಶೇ. ೨೦ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ಜೀವವೈವಿಧ್ಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಸೇರಿಸಲ್ಪಟ್ಟಿದೆ. ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಅಥವಾ ಬೌದ್ಧಿಕ ಸರ್ವೆ ಮಾಡಿ ವಿಷಯ ಸಂಗ್ರಹ ಮಾಡಿದ್ದು ಇರುವುದಿಲ್ಲ.

ಘೋಷಿಸಿದ ಹಳ್ಳಿ(ಗ್ರಾಮದ) ನಿರ್ದಿಷ್ಟ ಸರ್ವೆ ನಂ. ಪ್ರದೇಶ ವ್ಯಾಖ್ಯಾಯಿಸದೇ ಇರುವುದು ಅವೈಜ್ಞಾನಿಕ ಉಪಗ್ರಹ ಆಧರಿತ ಸರ್ವೆ ಆಗಿರುವುದರಿಂದ ಕೃಷಿ, ತೆಂಗಿನತೋಟ ಹಾಗೂ ಇನ್ನಿತರ ಕೃಷಿ ತೋಟಗಾರಿಕೆ ಬೆಳೆಗಳಿಂದ ಹಸಿರು ಪ್ರದೇಶವನ್ನು ಸಹಿತ ಅರಣ್ಯ ಪ್ರದೇಶವೆಂದು ಪರಿಗಣಿಸಿರುವುದು ನೈಸಗಿಕ ವಿರೋಧವಾದ ಕ್ರಮ ಎಂಬ ಅಂಶಗಳನ್ನು ಆಕ್ಷೇಪದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ
ಹಾರಂಗಿ ಸಾಕಾನೆ ಶಿಬಿರ ಪ್ರವಾಸಿಗರಿಗೆ ಶೀಘ್ರ ಮುಕ್ತ