ಹಳೇಬೀಡಿನ ಪುಷ್ಪಗಿರಿಯಲ್ಲಿ ಲಕ್ಷದೀಪೋತ್ಸವ

KannadaprabhaNewsNetwork |  
Published : Nov 22, 2025, 01:45 AM IST
21ಎಚ್ಎಸ್ಎನ್11 : ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಮ್ಮನವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಲಕ್ಷದೀಪೋತ್ಸವ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. | Kannada Prabha

ಸಾರಾಂಶ

ಹಳೇಬೀಡು ಸಮೀಪದ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಮ್ಮನವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಲಕ್ಷದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತ, ಪುಷ್ಪಗಿರಿ ಕ್ಷೇತ್ರ ರಾಜ್ಯ,ದೇಶ, ಮತ್ತು ಪ್ರಪಂಚ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿರುವುದು ನಮ್ಮ ಕ್ಷೇತ್ರಕ್ಕೆ ಸಂತಸ ತಂದಿದೆ. ಈ ಜಾತ್ರಾ ಮಹೋತ್ಸವ ಯಾವ ಜಾತಿಗೂ ಸಿಮೀತವಾಗದೆ ಮನುಕುಲಕ್ಕೆ ಸೇರಿದ ಸಂಸ್ಥಾನವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಮಾದಿಹಳ್ಳಿ ಹೋಬಳಿಗೆ ಶಾಶ್ವತ ನೀರನ್ನು ಕಲ್ಪಿಸಿಕೊಟ್ಟ ಹಾಗೂ ಮಠಮಾನ್ಯಗಳಿಗೆ ಹೆಚ್ಚು ಅನುದಾನ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದರು.

ಹಳೇಬೀಡು ಸಮೀಪದ ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪಾರ್ವತಮ್ಮನವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ಲಕ್ಷದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತ, ಪುಷ್ಪಗಿರಿ ಕ್ಷೇತ್ರ ರಾಜ್ಯ,ದೇಶ, ಮತ್ತು ಪ್ರಪಂಚ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸಿರುವುದು ನಮ್ಮ ಕ್ಷೇತ್ರಕ್ಕೆ ಸಂತಸ ತಂದಿದೆ. ಈ ಜಾತ್ರಾ ಮಹೋತ್ಸವ ಯಾವ ಜಾತಿಗೂ ಸಿಮೀತವಾಗದೆ ಮನುಕುಲಕ್ಕೆ ಸೇರಿದ ಸಂಸ್ಥಾನವಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿ ವರ್ಗದ ಅಧ್ಯಕ್ಷರನ್ನು ಆಹ್ವಾನ ನೀಡಿದ್ದು ನಮ್ಮ ಕರೆಗೆ ಆಗಮಿಸಿದ್ದಾರೆ. ಇಂದಿನ ಸಮಾಜದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಸಂಸ್ಕಾರ-ಸಂಸ್ಕೃತಿ ನೀಡುವ ಕಾರ್ಯ ತಂದೆ-ತಾಯಿಯವರದು. ಶ್ರೀಮಂತಿಗೆ ಇದ್ದರೆ ನಿಮ್ಮ ಮನದಲ್ಲಿರಬೇಕು ಹೊರ ಪ್ರಪಂಚದಲ್ಲಿ ಸಾಮಾನ್ಯ ಮನುಷ್ಯನಾಗಿದ್ದರೆ ಅವನೇ ಧೀಮಂತ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವ ಪ್ರಶಸ್ತಿಯನ್ನು ಹಳೇಬೀಡಿನ ವಾಣಿಜ್ಯೋದ್ಯಮಿ ಬಿ.ಸಿ. ತುಕಾರಾಮ್‌ ರಾವ್, ಪೊಲೀಸ್ ಇಲಾಖೆಯ ಜೈಲರ್‌ ಮಂಜುನಾಥ್, ಹಲವಾರು ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್, ಸಕಲೇಶಪುರ ಶಾಸಕ ಸಿಮೇಂಟ್ ಮಂಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮಾಜಿ ಶಾಸಕ ಪ್ರೀತಮ್‌ ಗೌಡ, ಕೆ.ಎಸ್. ಲಿಂಗೇಶ್, ತಾಲೂಕು ದಂಡಾಧಿಕಾರಿ ಶ್ರೀಧರ ಕಂಕಣವಾಡಿ, ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್‌, ಹೈ ಕೋರ್ಟ್ ವಕೀಲ ಪಾಟೀಲ್, ವೀರಶೈವ ಸಂಘಧ ಅಧ್ಯಕ್ಷ ಬಸವರಾಜು, ಹೇಮಾವತಿ ಮಂಜುನಾಥ್, ಸಂತೋಷ್, ಕೊರಟಿಗೆರೆ ಪ್ರಕಾಶ್, ರೇಣುಕುಮಾರ್, ಸಂಜಯ್ ಕೌರಿ ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.

PREV

Recommended Stories

ಕೆಪಿಎಸ್‌ ಶಾಲೆಗಳನ್ನು ಮುಚ್ಚುವ ಹುನ್ನಾರ ಖಂಡಿಸಿ ಪ್ರತಿಭಟನೆ
ರೇಣುಕಾಂಬೆಯ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ಸಂಪನ್ನ