ಹೊಳೆನರಸೀಪುರದ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ

KannadaprabhaNewsNetwork |  
Published : Apr 02, 2026, 01:30 AM IST
1ಎಚ್ಎಸ್ಎನ್9 : ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ರಾಜಗೋಪುರ. | Kannada Prabha

ಸಾರಾಂಶ

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ವಿಶೇಷ ಪೂಜಾ ಮಹೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಏ. ೫ ಭಾನುವಾರ ಮುಂಜಾನೆ ಶ್ರೀ ಸ್ವಾಮಿಯ ಮೂಲ ಮೂರ್ತಿಗೆ ಅಭಿಷೇಕ, ಅಲಂಕಾರ ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನಡೆಯಲಿದೆ. ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಗೋಪಾಲಕೃಷ್ಣ ಸ್ವಾಮಿ ಮತ್ತು ಶ್ರೀ ನಾರಾಯಣಸ್ವಾಮಿ ದೇವರ ಉತ್ಸವವನ್ನು ಮೂರು ವಿವಿಧ ತೇರಿನ ಮೇಲೆ ಏರ್ಪಡಿಸಲಾಗಿದೆ. ಉತ್ಸವದಲ್ಲಿ ವೀರಗಾಸೆ ನೃತ್ಯ, ವೇದ ಪಾರಾಯಣ, ನಾದಸ್ವರ ವಾದನ, ಶ್ರೀ ಶಾರದ ಶಂಕರ ಭಜನಾ ಮಂಡಳಿ, ಸೌಂದರ್ಯ ಲಹರಿ ಮಹಿಳಾ ಮಂಡಳಿ ಹಾಗೂ ಮಹಿಳಾ ಹರಿದಾಸ ಮಂಡಳಿ ಅವರಿಂದ ಭಜನೆ, ದೇವರನಾಮ, ಕೋಲಾಟ ಕಾರ್ಯಕ್ರಮ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಪ್ರಯುಕ್ತ ಫೆಬ್ರವರಿ 24ರ ಮಂಗಳವಾರದಿಂದ ಪ್ರಾರಂಭವಾಗಿದ್ದ ವಿಶೇಷ ಪೂಜಾ ಮಹೋತ್ಸವ ಏಪ್ರಿಲ್ ೫ರಂದು ವಿಶೇಷ ಪೂಜಾ ಮಹೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ. ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ವಿಶೇಷ ಪೂಜಾ ಮಹೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಏ. ೫ ಭಾನುವಾರ ಮುಂಜಾನೆ ಶ್ರೀ ಸ್ವಾಮಿಯ ಮೂಲ ಮೂರ್ತಿಗೆ ಅಭಿಷೇಕ, ಅಲಂಕಾರ ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನಡೆಯಲಿದೆ. ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಗೋಪಾಲಕೃಷ್ಣ ಸ್ವಾಮಿ ಮತ್ತು ಶ್ರೀ ನಾರಾಯಣಸ್ವಾಮಿ ದೇವರ ಉತ್ಸವವನ್ನು ಮೂರು ವಿವಿಧ ತೇರಿನ ಮೇಲೆ ಏರ್ಪಡಿಸಲಾಗಿದೆ. ಉತ್ಸವದಲ್ಲಿ ವೀರಗಾಸೆ ನೃತ್ಯ, ವೇದ ಪಾರಾಯಣ, ನಾದಸ್ವರ ವಾದನ, ಶ್ರೀ ಶಾರದ ಶಂಕರ ಭಜನಾ ಮಂಡಳಿ, ಸೌಂದರ್ಯ ಲಹರಿ ಮಹಿಳಾ ಮಂಡಳಿ ಹಾಗೂ ಮಹಿಳಾ ಹರಿದಾಸ ಮಂಡಳಿ ಅವರಿಂದ ಭಜನೆ, ದೇವರನಾಮ, ಕೋಲಾಟ ಕಾರ್ಯಕ್ರಮ ಆಯೋಜಿಸಲಾಗಿದೆ.ಶ್ರೀಸ್ವಾಮಿಯ ಉತ್ಸವವು ಕೋಟೆ ರಾಜಬೀದಿಗಳಲ್ಲಿ ವಿಜೃಂಭಣೆಯಾಗಿ ನಡೆಸಲಾಗುತ್ತದೆ. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ. ಶ್ರೀ ಸ್ವಾಮಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿರುವ ಹಿರಿಯ ಅರ್ಚಕರಾದ ನಾರಾಯಣ ಭಟ್ಟರು, ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ ೯೮೪೪೪೩೧೯೫೬ ಹಾಗೂ ೮೨೭೭೪೯೮೭೫೪ ಸಂರ್ಪಕಿಸಲು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅದ್ಧೂರಿಯಾಗಿ ನಡೆದ ಶ್ರೀಚೆಲುವನಾರಾಯಣಸ್ವಾಮಿ ತೆಪ್ಪೋತ್ಸವ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರದಲ್ಲಿ ಏರಿಕೆ