62.52 ಕೋಟಿ ಮೌಲ್ಯದ ಭೂಮಿ ಒತ್ತುವರಿ ತೆರವು

KannadaprabhaNewsNetwork |  
Published : Mar 16, 2026, 03:30 AM IST
ಒತ್ತುವರಿ ತೆರವು ಕಾರ್ಯಾಚರಣೆಯನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಸುಮಾರು ₹62.52 ಕೋಟಿ ಮೌಲ್ಯದ 14 ಎಕರೆ 10 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ತೆರವುಗೊಳಿಸಿ ವಶಕ್ಕೆ ಪಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಸುಮಾರು ₹62.52 ಕೋಟಿ ಮೌಲ್ಯದ 14 ಎಕರೆ 10 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ತೆರವುಗೊಳಿಸಿ ವಶಕ್ಕೆ ಪಡೆದಿದೆ.

ಸ್ಮಶಾನ, ಸರ್ಕಾರಿ ಕೆರೆ, ಖರಾಬು ತೋಪು ಹಾಗೂ ಸರ್ಕಾರಿ ಕಟ್ಟೆ ಜಾಗಗಳನ್ನು ಒತ್ತುವರಿದಾರರಿಂದ ಮುಕ್ತಗೊಳಿಸಲಾಗಿದೆ.

ಯಲಹಂಕ ತಾಲೂಕಿನ ಇಟ್ಟಗಲಾಪುರ ಗ್ರಾಮದಲ್ಲಿ 30.75 ಕೋಟಿ ರು. ಮೌಲ್ಯದ 10.9 ಎಕರೆ ಕೆರೆ ಜಾಗ, ಕಾಕೋಳು ಗ್ರಾಮದಲ್ಲಿ 6.38 ಕೋಟಿ ರು. ಮೌಲ್ಯದ 2.5 ಎಕರೆ ಕೆರೆ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ. ಬಾಗಲೂರು ಗ್ರಾಮದಲ್ಲಿ 1 ಕೋಟಿ ರು. ಮೌಲ್ಯದ 20 ಗುಂಟೆ ಖರಾಬು ತೋಪನ್ನು ತೆರವುಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಸಿಂಗಸಂದ್ರ ಗ್ರಾಮದಲ್ಲಿ 17 ಕೋಟಿ ರು. ಮೌಲ್ಯದ 17 ಗುಂಟೆ ಕೆರೆ, ತಟಗುಪ್ಪೆ ಗ್ರಾಮದಲ್ಲಿ 1.50 ಕೋಟಿ ರು. ಮೌಲ್ಯದ 20 ಗುಂಟೆ ಕೆರೆ ಹಾಗೂ ಹುಲುವೇನಹಳ್ಳಿ ಗ್ರಾಮದಲ್ಲಿ 19 ಲಕ್ಷ ರು. ಮೌಲ್ಯದ 7 ಗುಂಟೆ ಸರ್ಕಾರಿ ಜಮೀನನ್ನು ಮರಳಿ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ಪೂರ್ವ ತಾಲೂಕಿನ ದೊಡ್ಡನೆಕ್ಕುಂದಿ ಗ್ರಾಮದಲ್ಲಿ 4 ಕೋಟಿ ರು. ಮೌಲ್ಯದ 5 ಗುಂಟೆ ಸ್ಮಶಾನ ಜಾಗ ಹಾಗೂ ಭೋಗನಹಳ್ಳಿ ಗ್ರಾಮದಲ್ಲಿ 1.50 ಕೋಟಿ ರು. ಮೌಲ್ಯದ 5 ಗುಂಟೆ ಸ್ಮಶಾನ ಜಾಗವನ್ನು ತೆರವುಗೊಳಿಸಲಾಯಿತು. ವಡೇರಹಳ್ಳಿ ಗ್ರಾಮದಲ್ಲಿ 20 ಲಕ್ಷ ರು. ಮೌಲ್ಯದ 2 ಗುಂಟೆ ಸರ್ಕಾರಿ ಕಟ್ಟೆ ಜಾಗವನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಕಲಿ ನೋಟು: ಇಬ್ಬರಿಗೆ 5 ವರ್ಷ ಜೈಲು, ₹40 ಸಾವಿರ ದಂಡ
2.5 ದಶಕದ ಬಳಿಕ ಹಲಸೂರು ಕೆರೆ ಹೂಳು ತೆರವು