ಐಟಿ ಪಾರ್ಕ್‌ ಹೆಸರಲ್ಲಿ ಬಿಜೆಪಿ ಅವಧಿಯಲ್ಲೇ ಭೂಕಬಳಿಕೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌

KannadaprabhaNewsNetwork |  
Published : Aug 12, 2025, 12:30 AM IST
11ಕೆಡಿವಿಜಿ5-ದಾವಣಗೆರೆಯಲ್ಲಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಮಾಧ್ಯಮದವರೊಂದಿಗೆ ಮಾತನಾಡಿದರು. ...............11ಕೆಡಿವಿಜಿ6-ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರು, ಕಾರ್ಯಕರ್ತರೊಂದಿಗೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಚರ್ಚಿಸುತ್ತಿರುವುದು. | Kannada Prabha

ಸಾರಾಂಶ

ಭೂ ಕಬಳಿಕೆ ಬಿಜೆಪಿ ಕಾಲದಲ್ಲೇ ಆಗಿದ್ದು, ನಾನು ಇದ್ದಾಗ ಯಾವುದೇ ಅಕ್ರಮ ಆಗುವುದಕ್ಕೂ ಬಿಡುವುದಿಲ್ಲ ಎಂದು ತಮ್ಮ ಮೇಲೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ ಬಿಜೆಪಿಯ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭೂ ಕಬಳಿಕೆ ಬಿಜೆಪಿ ಕಾಲದಲ್ಲೇ ಆಗಿದ್ದು, ನಾನು ಇದ್ದಾಗ ಯಾವುದೇ ಅಕ್ರಮ ಆಗುವುದಕ್ಕೂ ಬಿಡುವುದಿಲ್ಲ ಎಂದು ತಮ್ಮ ಮೇಲೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ ಬಿಜೆಪಿಯ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಹರಿಹಾಯ್ದರು.

ನಗರದ ತಮ್ಮ ನಿವಾಸ ಶಿವ ಪಾರ್ವತಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅಧಿಕಾರದಲ್ಲಿದ್ದಾಗ ಯಾವುದೇ ಅಕ್ರಮ ಆಗುವುದಕ್ಕೆ ಬಿಡುವುದಿಲ್ಲ. ಭೂ ಕಬಳಿಕೆ ಆಗಿದ್ದರೆ ಅದು ಬಿಜೆಪಿ ಕಾಲದಲ್ಲೇ ಎಂದರು.

ಅಭಿವೃದ್ಧಿ ಮಾಡುವುದಕ್ಕೆ ಬಿಜೆಪಿಯವರಿಂದ ಆಗುವುದಿಲ್ಲ. 3.5 ಲಕ್ಷ ರು.ಗೆ ಎಕರೆ ಜಮೀನನ್ನು ತೆಗೆದುಕೊಂಡು, ರೈತರಿಗೆ ವಂಚನೆ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.

ಐಟಿ ಪಾರ್ಕ್ ಮಾಡಲು ಅವನ ಜಿಎಂಐಟಿ ಕಾಲೇಜಿನ ಜಾಗವನ್ನೇ ಕೊಡಲು ಹೇಳಿ ಎಂದು ತಮ್ಮ ವಿರುದ್ದ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ವಿರುದ್ಧ ಬಿಜೆಪಿ ನಿಕಟಪೂರ್ವ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಮಾಡಿದ್ದ ಭೂ ಕಬಳಿಕೆ ಆರೋಪಕ್ಕೆ ಸಿದ್ದೇಶ್ವರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಕೆ.ಎನ್.ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ಇವತ್ತೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ನಾನು ಬೆಂಗಳೂರಿಗೆ ತೆರಳಬೇಕಾಗಿತ್ತು. ಆದರೆ, ಇಲ್ಲಿ ಸಾಕಷ್ಟು ಕಾರ್ಯಕ್ರಮಗಳು ಇದ್ದುದರಿಂದ ಬೆಳಿಗ್ಗೆ ಹೋಗಲು ಆಗಲಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಹೇಗೆ ಮತಗಳ್ಳತನ ಮಾಡುತ್ತದೆ. ಬಿಜೆಪಿಯವರು ಮಾಡಿದ್ದನ್ನು ರಾಹುಲ್ ಗಾಂಧಿ ಅಂಕಿ ಅಂಶ ಸಮೇತ ಬಿಡುಗಡೆ ಮಾಡಿದ್ದಾರೆ. ಅದನ್ನು ನೋಡುವುದಕ್ಕೂ ಬಿಜೆಪಿಯವರು ಸಿದ್ಧರಿಲ್ಲ. ನಾವು ಮಾಡಿದ್ದು ಎನ್ನಲು 2024ರ ಲೋಕಸಭೆ ಚುನಾವಣೆ ವೇಳೆ ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದೆವಾ? ಒಂದೇ ಮನೆಯಲ್ಲಿ 80 ಮತಗಳಿರಲು ಸಾಧ್ಯವೇ. ನಾಲ್ಕು ನಾಲ್ಕು ಕಡೆ ಅಂತಹವರ ಮತಗಳಿವೆ. ದಾಖಲೆ ಸಮೇತ ಕಾಂಗ್ರೆಸ್ ನೀಡಿದೆ ಎಂದು ಹೇಳಿದರು.

ಭದ್ರಾ ಡ್ಯಾಂ ಸದ್ಯಕ್ಕೆ ತುಂಬಿದ್ದರಿಂದ ನಾವು ಹೋಗಲಿಕ್ಕೆ ಆಗಲಿಲ್ಲ. ನಮ್ಮ ಕಾಂಗ್ರೆಸ್ಸಿನ ಶಾಸಕರು ಹೇಳಿದ್ದು, ಶಾಸಕ ಶಾಂತನಗೌಡರು ಸರಿಯಾಗಿ ಹೇಳಿದ್ದಾರೆ. ಯಾರ ಕಾಲದಲ್ಲಿ ಆಗಿದೆಯೆಂದು ನಮ್ಮ ಶಾಂತನಗೌಡರು ಹೇಳಿದ್ದಾರೆ. ನಾನು ಕುಂದೂರು ಸಭೆಗೆ ಹೋಗಿಲ್ಲ ಎಂದು ಹೇಳಿದ ಬಿಜೆಪಿಯವರಿಗೆ ಬೇರೆ ಕೆಲಸ ಇದ್ದಂತಿಲ್ಲ ಎಂದು ವ್ಯಂಗ್ಯವಾಡಿದರು.

ಮಾಜಿ ಮೇಯರ್ ಕೆ.ಚಮನ್ ಸಾಬ್‌, ಮುಖಂಡರಾದ ಗಂಗಾನಾಯ್ಕ, ಬಿ.ಕೆ.ಪರಶುರಾಮ, ನಾಗರಾಜ ಇತರರು ಇದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ