ಭೂಮಿ ಸತ್ಯಾಗ್ರಹ: ಬೆಂಗಳೂರು ಚಲೋ ನ.26ಕ್ಕೆ

KannadaprabhaNewsNetwork |  
Published : Nov 23, 2025, 01:30 AM IST
೨೨ಬಿಹೆಚ್‌ಆರ್ ೧: ಬಾಳೆಹೊನ್ನೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ನ.26ರಂದು ಆಯೋಜಿಸಿರುವ ಬೆಂಗಳೂರು ಚಲೋ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ಸುರೇಶ್ ಗಡಿಕಲ್, ಆನಂದ್ ಹಾಜರಿದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರುಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ನ.26ರ ಸಂವಿಧಾನ ದಿನದಂದು ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ, ಸಾಮಾಜಿಕ ನ್ಯಾಯವಾಗಿ ಭೂಮಿ ಹಕ್ಕು ನೀಡಲು ಒತ್ತಾಯಿಸಿ ಬೆಂಗಳೂರು ಚಲೋ ಹಾಗೂ ಭೂಮಿ ಸತ್ಯಾಗ್ರಹ ಆಯೋಜಿಸಲಾಗಿದೆ ಎಂದು ಹೋರಾಟದ ಕೇಂದ್ರ ಸಮಿತಿ ರಾಮು ಕೌಳಿ ತಿಳಿಸಿದರು.

ಹೋರಾಟದ ಕೇಂದ್ರ ಸಮಿತಿ ರಾಮು ಕೌಳಿ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ನ.26ರ ಸಂವಿಧಾನ ದಿನದಂದು ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ, ಸಾಮಾಜಿಕ ನ್ಯಾಯವಾಗಿ ಭೂಮಿ ಹಕ್ಕು ನೀಡಲು ಒತ್ತಾಯಿಸಿ ಬೆಂಗಳೂರು ಚಲೋ ಹಾಗೂ ಭೂಮಿ ಸತ್ಯಾಗ್ರಹ ಆಯೋಜಿಸಲಾಗಿದೆ ಎಂದು ಹೋರಾಟದ ಕೇಂದ್ರ ಸಮಿತಿ ರಾಮು ಕೌಳಿ ತಿಳಿಸಿದರು.ಕಳೆದ ಹತ್ತಾರು ವರ್ಷಗಳಿಂದ ತಲೆ ಮೇಲೊಂದು ಸೂರು ಹಾಗೂ ಬದುಕಿಗಾಗಿ ಕೃಷಿ ಮಾಡಿಕೊಂಡ ಭೂಮಿಗೆ ಹಕ್ಕು ಪತ್ರಕ್ಕಾಗಿ ಸಾವಿರಾರು ಜನರು ಅರ್ಜಿ ಹಾಕಿ ಕಾದು ಕುಳಿತಿದ್ದಾರೆ. ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಭೂಮಿಗಾಗಿ ಹೋರಾಡುತ್ತ ಬಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕೇವಲ ಒಂದು ತಿಂಗಳೊಳಗೆ ಸಮಸ್ಯೆ ಬಗೆಹರಿಸುವ ಮಾತು ಕೊಟ್ಟಿದ್ದ ಸರ್ಕಾರ ಈವರೆಗೆ ಯಾವುದೇ ಕ್ರಮತೆಗೆದುಕೊಂಡಿಲ್ಲ. ನೆಪ ಮಾತ್ರಕ್ಕೆ ಅಕ್ರಮ ಸಕ್ರಮ ಸಮಿತಿ ನೇಮಕ ಮಾಡಿದ್ದು, ಸಮಿತಿಗಳು ಇದೂವರೆಗೆ ಒಂದೂ ಸಭೆ ಮಾಡಿಲ್ಲ. ಹಕ್ಕುಪತ್ರ ಕೇಳಿದರೆ ಅರಣ್ಯ ಇಲಾಖೆ ಕಡೆ ಕೈತೋರಿಸುತ್ತಿದ್ದಾರೆ. ಈಗಾಗಲೇ ಅರಣ್ಯ ಇಲಾಖೆ ಮಲೆನಾಡಿನ ಇಡೀ ಕಂದಾಯ ಭೂಮಿಯನ್ನು ಸೆಕ್ಷನ್ 4 ಎಂದು ಘೋಷಿಸಿ ಮೀಸಲು ಅರಣ್ಯ ಎಂದು ಅಂತಿಮ ಘೋಷಣೆ ಹೊರಡಿಸಲು ತೆರೆಮರೆ ಕಸರತ್ತು ನಡೆಸಿದೆ ಎಂದರು.

1980ರ ಪೂರ್ವದಲ್ಲಿ ಅರಣ್ಯ ಎಂದು ನಮೂದಿತ ಭೂಮಿಯನ್ನು ಸರ್ಕಾರ ಮಂಜೂರು ಮಾಡಿರುವುದು ಅಕ್ರಮ. ಅಂತಹ ಪ್ರಕರಣಗಳ ಪಟ್ಟಿ ಮಾಡಿ ತೆರವುಗೊಳಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಅದೇ ಸಂದರ್ಭದಲ್ಲಿ ಈಗಾಗಲೇ ಅರಣ್ಯ ಎಂದು ಘೋಷಿಸಲು ಹೊರಟ ಭೂಮಿಯಿಂದ 10 ಸಾವಿರ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಸರ್ಕಾರ ಟಾಸ್ಕ್ ಪೋರ್ಸ್ ರಚನೆ ಮಾಡಿರುವುದಾಗಿ ಹೇಳುತ್ತಿದ್ದಾರೆ. ಮಲೆನಾಡಿನಲ್ಲಿ ಮಾನವ –ವನ್ಯಜೀವಿ ಸಂಘರ್ಷ ತಾರಕಕ್ಕೇರಿದೆ. ಈಗಾಗಲೇ ಆನೆ ದಾಳಿಯಿಂದ ೮ ಜನ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಹೊರ ಹೋಗುತ್ತೇವೆ ನಮಗೆ ಪುನರ್ ವಸತಿ ಕೊಡಿ ಎಂಬ ಕೂಗು ಮುನ್ನೆಲೆಗೆ ಬರುತ್ತಿದೆ. ಈಗಾಗಲೇ ನೂರಾರು ಆದಿವಾಸಿಗಳು, ಅರಣ್ಯ ವಾಸಿಗಳು ರಾಷ್ಟ್ರೀಯ ಉದ್ಯಾನದೊಳಗೆ ವಾಸ ಮಾಡುತ್ತಿದ್ದಾರೆ. ಅವರ ಕೃಷಿ ಭೂಮಿಗೆ ಇನ್ನೂ ಹಕ್ಕುಪತ್ರ ನೀಡಿಲ್ಲ ಎಂದರು.ಅರಣ್ಯ ಹಕ್ಕು ಸಮಿತಿಯಲ್ಲಿ ನೆಪ ಮಾತ್ರಕ್ಕೆ ಒಂದಷ್ಟು ಜನರಿಗೆ ಹಕ್ಕುಪತ್ರ ಸಿಕ್ಕರೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಮೊದಲು ಜನರ ಕೃಷಿ ಭೂಮಿಗೆ ಹಕ್ಕುಪತ್ರ ನೀಡಬೇಕು. ಸ್ವಯಂ ಹೊರ ಹೋಗುವವರಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಪುನರ್ ವಸತಿ ಪ್ಯಾಕೇಜಲ್ಲಿ ಕಲ್ಪಿಸಬೇಕು. ಅಲ್ಲಿಯೇ ವಾಸವಿರುವ ಜನರಿಗೆ ಮೂಲಭೂತ ಸೌಕರ್ಯ ದೊರಕಿಸಬೇಕು. ಅದು ಬಿಟ್ಟು ಪರಿಹಾರದ ನೆಪದಲ್ಲಿ ಬಿಡಿಗಾಸು ನೀಡಿ ಅರಣ್ಯ ವಾಸಿಗಳ ಬೀದಿಪಾಲು ಮಾಡ ಬಾರದು. ಸರ್ಕಾರ ಕೂಡಲೇ ಮಲೆನಾಡಿನ ರೈತ ಆದಿವಾಸಿ, ದಲಿತ, ಕಾರ್ಮಿಕ ಪ್ರತಿನಿಧಿಗಳು ಹಾಗೂ ಸಂಘಟನೆಗಳ ಮುಖಂಡರೊಂದಿಗೆ ಮಲೆನಾಡಿಗರ ಸಭೆ ನಡೆಸಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು.ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಪರಿಹಾರವಾಗಿ ಒನ್‌ಟೈಮ್ ಸೆಟಲ್‌ಮೆಂಟ್ ಜಾರಿ ಮೂಲಕ ಭೂಮಿ ಹಕ್ಕು ಮಾನ್ಯ ಮಾಡಬೇಕು. ವಸತಿ ಹಾಗೂ ನಿವೇಶನ ರಹಿತರಿಗೆ ಸಮಗ್ರ ಯೋಜನೆ ಘೋಷಣೆ ಮಾಡಬೇಕು. ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು. ಅದರ ಮೂಲಕ ಎಲ್ಲಾ ಬಡವರ ಭೂಮಿ ಹಾಗೂ ನಿವೇಶನ ಹಕ್ಕುಪತ್ರಕ್ಕೆ ಎದುರಾ್ ಅಡಚಣೆ ತೆಗೆಯಬೇಕು. ಕೋರ್ಟ್ ಆದೇಶದ ಹೆಸರಿನಲ್ಲಿ ಬಡವರ, ರೈತರ ಒತ್ತುವರಿ ತೆರವು ಮಾಡುವುದನ್ನು ನಿಲ್ಲಿಸಬೇಕು. ಮಲೆನಾಡಿಗೆ ಸಮಗ್ರವಾದ ಒಂದು ಯೋಜನೆ ರೂಪಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ನ.26ರಂದು ಬೆಂಗಳೂರು ಚಲೋ, ಭೂಮಿ ಸತ್ಯಾಗ್ರಹ ನಡೆಯಲಿದೆ ಎಂದು ಹೇಳಿದರು.

ಕರ್ನಾಟಕ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗಡಿಗಲ್, ಜಿಲ್ಲಾ ಸಮಿತಿ ಸದಸ್ಯ ಆನಂದ್ ಹಾಜರಿದ್ದರು.೨೨ಬಿಹೆಚ್‌ಆರ್ ೧:

ಬಾಳೆಹೊನ್ನೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ನ.26ರಂದು ಆಯೋಜಿಸಿರುವ ಬೆಂಗಳೂರು ಚಲೋ ಕರಪತ್ರ ಬಿಡುಗಡೆ ಮಾಡಲಾಯಿತು. ಸುರೇಶ್ ಗಡಿಕಲ್, ಆನಂದ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓರ್ವನ ಮೇಲೆ ನಾಲ್ಕೈದು ಯುವಕರಿಂದ ಹಲ್ಲೆ!
ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿದಲ್ಲಿ ಯುವಕರ ಭವಿಷ್ಯ ಭದ್ರ: ಆರ್.ಬಿ.ತಿಮ್ಮಾಪುರ