ಕನ್ನಡಪ್ರಭ ವಾರ್ತೆ ಮುಧೋಳ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚ್ ಉಚಿತ ಗ್ಯಾರಂಟಿ ಯೋಜನೆಗಳನ್ನು ಕೊಡುವುದರ ಜೊತೆಗೆ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ತಾಲೂಕಿನ ಒಂಟಗೋಡಿ, ಮಿರ್ಜಿ, ಅಕ್ಕಿಮರಡಿ, ಮಳಲಿ, ಸೋರಗಾಂವ, ಬುದ್ನಿ ಪಿ.ಎಂ ಹಾಗೂ ಮುಧೋಳ ನಗರಕ್ಕೆ ಒಟ್ಟು ₹12.08 ಕೋಟಿ ಅನುದಾನದಡಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಉತ್ತೂರ ಸ್ವಗ್ರಾಮದಲ್ಲಿ ₹5 ಕೋಟಿ ಅನುದಾನದಲ್ಲಿ ಸರ್ಕಾರಿ ಪ್ರೌಢಶಾಲಾ ಅಭಿವೃದ್ಧಿಗೆ ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.ಮಂಜೂರಾದ ₹12,08 ಕೋಟಿ ಅನುದಾನದಲ್ಲಿ ಉತ್ತೂರು, ಮಲ್ಲಾಪೂರ, ಮಿರ್ಜಿ ಜಿಲ್ಲಾ ಮುಖ್ಯರಸ್ತೆ ಸುಧಾರಣೆ, ಒಂಟಗೋಡಿಯ ಕಮಲಾದೇವಿ ದೇವಸ್ಥಾನ ನಿರ್ಮಾಣ, ಎಸ್ಟಿ ಕಾಲೋನಿಯ ಪುನರ್ ನಿರ್ಮಾಣ ಮತ್ತು ಪುನರ್ ವಸತಿ ಕೇಂದ್ರದ ಶೌಚಾಲಯ ನಿರ್ಮಾಣ, ಮಿರ್ಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ನೂತನ ಕೊಠಡಿ ನಿರ್ಮಾಣ, ಆರ್ಯುವೇದಿಕ ಆಸ್ಪತ್ರೆಯಿಂದ ಗುಡ್ಡದ ಸಾಲ ರಸ್ತೆ ಸುಧಾರಣೆ, ಅಕ್ಕಿಮರಡಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ಕೊಠಡಿ ನಿರ್ಮಾಣ, ಮಳಲಿ ಗ್ರಾಮದ ಮಳಲಿ ಸಮಾಜ ಮಂದಿರ ಅಂಗನವಾಡಿ ಕೇಂದ್ರ ಉದ್ಘಾಟನೆ, ಸೋರಗಾಂವ ಗ್ರಾಮದ ಮೂಡಲಗಿ ರಸ್ತೆ ಹತ್ತಿರ ಬಿಸಿಬಿ ನಿರ್ಮಾಣ, ಮುಧೋಳ ಪಟ್ಟಣದ ಜೈಹಿಂದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ನಿರ್ಮಾಣ, ಬುದ್ನಿ ಪಿ.ಎಂ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ನೂತನ ಕೊಠಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.ಅಕ್ಕಿಮರಡ್ಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮದ ಪ್ರಮುಖರಾದ ಗೋವಿಂದಪ್ಪ ಗುಜ್ಜನ್ನವರ, ಗಿರೀಶಗೌಡ ಪಾಟೀಲ, ಮಹಾಂತೇಶ ಮಾಚಕನೂರ, ಅಶೋಕ ಕಿವಡಿ, ಶಂಕ್ರಪ್ಪ ಮಳಲಿ, ಯಶವಂತ ಚವ್ಹಾಣ, ಮಹಾಲಿಂಗಪ್ಪ ತಟ್ಟಿಮನಿ, ಕುಮಾರ ಬೋರಡ್ಡಿ, ಕಲ್ಲಪ್ಪ ಮಳಲಿ, ವೆಂಕಪ್ಪ ಉದಗಟ್ಟಿ, ಹಣಮಂತ ತಿಮ್ಮಾಪೂರ, ರಾಜು ವಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.ಶಿಕ್ಷಣ ಕಲಿಯುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡದೇ ಎಲ್ಲ ಪೂರ್ಣ ಪ್ರಮಾಣದಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು. ಸರ್ಕಾರಿ ಶಾಲೆಯ ಮಕ್ಕಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಬೇಕು. ಶಿಕ್ಷಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶ್ರಮಿಸಬೇಕು.
-ಆರ್.ಬಿ.ತಿಮ್ಮಾಪೂರ, ಜಿಲ್ಲಾ ಉಸ್ತುವಾರಿ ಸಚಿವರು.