ಕ್ಷಯ ಮುಕ್ತ ಉಡುಪಿ ನಗರ ಅಭಿಯಾನಕ್ಕೆ ಚಾಲನೆ

KannadaprabhaNewsNetwork |  
Published : Oct 30, 2023, 12:30 AM IST
ಷಯಮುಕ್ತ ಉಡುಪಿ ಅಭಿಯಾನವನ್ನು ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಕ್ಷಯಮುಕ್ತ ಉಡುಪಿ ನಗರ ಅಭಿಯಾನಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಉಡುಪಿ ಇಲ್ಲಿನ ನಗರಸಭೆಯ ಕೊಡವೂರು ವಾರ್ಡಿನ ದಿವ್ಯಾಂಗ ರಕ್ಷಣಾ ಸಮಿತಿ, ಅಪ್ಪು ಅಭಿಮಾನಿಗಳ ಬಳಗ ಉಡುಪಿ ಮತ್ತು ಲಯನ್ಸ್ ಹಾಗು ಲಿಯೋ ಕ್ಲಬ್ ಪರ್ಕಳ ಇವರ ಜಂಟಿ ಆಶ್ರಯದಲ್ಲಿ ‘ಕ್ಷಯ ಮುಕ್ತ ಉಡುಪಿ ನಗರ’ ಅಭಿಯಾನಕ್ಕೆ ಸೋಮವಾರ ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೊಡವೂರು ವಾರ್ಡಿನ ಸದಸ್ಯ ವಿಜಯ್ ಕೊಡವೂರು ಮುಂದಾಳತ್ವದಲ್ಲಿ ಅನೇಕ ಜನಪರ ಕಾರ್ಯಕ್ರಮಗಳು ನಡೆಯುತ್ತಿದೆ. ಇನ್ನಷ್ಟು ಜನ ಮೆಚ್ಚುಗೆಯ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಸಂಯೋಜಕರಾದ ವಿಜಯ್ ಕೊಡವೂರು ಮಾತನಾಡಿ, ಕ್ಷಯ ಮುಕ್ತ ಭಾರತ ದೇಶವನ್ನಾಗಿ ಮಾಡಲು ಪ್ರಧಾನಿ ಮೋದಿಯವರ ಚಿಂತನೆ - ಯೋಜನೆಗಳನ್ನು ಉಡುಪಿ ನಗರದಲ್ಲಿ ಅನುಷ್ಠಾನಗೊಳಿಸಲು, ಅಪ್ಪು ಅಭಿಮಾನಿ ಬಳಗ ಮತ್ತು ಲಯನ್ಸ್ ಮತ್ತು ಲಿಯೋ ಕ್ಲಬ್ ಪರ್ಕಳ ಈ ಮೂರು ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಟಿಬಿ ಮುಕ್ತ ಉಡುಪಿ ನಗರವನ್ನಾಗಿ ಮಾರ್ಪಡು ಮಾಡಲು ಯೋಜನೆ ರೂಪಿಸಲಾಗಿದೆ ಎಂದರು. ಅಭಿಯಾನದಂಗವಾಗಿ ಉಡುಪಿ ನಗರದಲ್ಲಿನ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ, ದಿವ್ಯಾಂಗರಿಗೆ ಧನ ಸಹಾಯ, ಗಾಲಿಕುರ್ಚಿ ವಿತರಣೆ, ವಾಕರ್ ವಿತರಣೆ ಮಾಡಲಾಯಿತು ವೇದಿಕೆಯಲ್ಲಿ ದಿವ್ಯಾಂಗ ರಕ್ಷಣಾ ಸಮಿತಿ ಅಧ್ಯಕ್ಷ ಹರೀಶ್ ಕೊಪ್ಪಲತೋಟ, ಲಯನ್ಸ್ ಮತ್ತು ಲಿಯೋ ಕ್ಲಬ್ ಅಧ್ಯಕ್ಷ ರಮೇಶ್ ಕುಂದರ್, ಉದ್ಯಮಿ ಅಜಯ್.ಪಿ.ಶೆಟ್ಟಿ, ಪತ್ರಕರ್ತ ಜನಾರ್ಧನ ಕೊಡವೂರು, ಅಯ್ಯಪ್ಪ ಸೇವಾ ಸಮಿತಿಯ ರಾಧಾಕೃಷ್ಣ ಮೆಂಡನ್, ಪಿ. ಇ.ಎಸ್. ಫೌಂಡೇಶನ್ ಕಾರ್ಯದರ್ಶಿ ಜಗದೀಶ್ ಭಟ್ ಉಪಸ್ಥಿತರಿದ್ದರು. ಸಮಾಜ ಸೇವಕ ಅಖಿಲೇಶ್ ಎ. ಕಾರ್ಯಕ್ರಮವನ್ನು ನಿರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ