ಕನ್ನಡಪ್ರಭ ವಾರ್ತೆ ಬೀದರ್
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸೌಧದಲ್ಲಿ ರಾಜಾರೋಷವಾಗಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳು, ರಾಮೇಶ್ವರ ಬಾಂಬ್ ಪ್ರಕರಣಗಳಿಂದ ರಾಜ್ಯದ ಗೃಹ ಸಚಿವರು ಇದ್ದಾರೋ ಇಲ್ಲವೋ ಎಂಬಂತಾಗಿದೆ ಒಂದು ವೇಳೆ ಅವರು ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿದ ಅವರು, ಬಿಎಚ್ಇಎಲ್, ಬಿಇಎಲ್, ರೈಲ್ವೆ ಬೋಗಿ ಕಾರ್ಖಾನೆ ಸೇರಿ ನವರತ್ನ ಉದ್ಯಮವನ್ನು ನಮ್ಮ ಶ್ಯಾಮಾ ಪ್ರಸಾದ ಮುಖರ್ಜಿ ಸ್ಥಾಪನೆ ಮಾಡಿದ್ದು ಎಂದರು.ತುಮಕೂರಿನಲ್ಲಿ ಹೆಲಿಕ್ಯಾಪ್ಟರ್ ಕಾರ್ಖಾನೆ, ತೇಜಸ್ ಲಘು ವಿಮಾನ ತಯಾರಿಕೆ, ಅತಿ ಹೆಚ್ಚು ರಾಕೆಟ್ ಉಡಾವಣೆ ಮಾಡಿದ ಇಸ್ರೋ ಕಂಪನಿ ಹೆಸರುವಾಸಿಯಾಗಿದೆ. ಜಿಲ್ಲೆಯ ಸಂಸದರು ಕೂಡ ಔರಾದ್ ತಾಲೂಕಿನಲ್ಲಿ ವಿಶ್ವದಲ್ಲಿಯೇ ಸುಮಾರು 13 ಸಾವಿರ ಕೋಟಿ ರು. ವೆಚ್ಚದ ಸೋಲಾರ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಇಲ್ಲಿನ ಸಾವಿರಾರು ಯುವಕರಿಗೆ ಉದ್ಯೋಗ ಲಭಿಸುತ್ತದೆ. ಆದರೆ ರಾಜ್ಯ ಸರ್ಕಾರ ಜಮೀನು ನೀಡದೆ ಕೇವಲ ಕೇಂದ್ರದ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಮು ಸಲಗರ, ಈಶ್ವರಸಿಂಗ ಠಾಕೂರ, ಬಾಬು ವಾಲಿ, ಪೀರಪ್ಪ ಯರನಳ್ಳಿ, ಬಾಬುರಾವ ಕಾರಬಾರಿ, ಬಸವರಾಜ ಪವಾರ, ಮಾಧವ ಹಸೂರೆ, ಅರಹಂತ ಸಾವಳೆ, ಲಿಂಗರಾಜ ಬಿರಾದಾರ ಇದ್ದರು.