ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರಧಾನ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಶಶಿಧರ ಎಂ. ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸವದತ್ತಿ ವಕೀಲರ ಸಂಘದ ಅಧ್ಯಕ್ಷ ಎಂ.ಎನ್. ಮುತ್ತಿನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಸಿದ್ರಾಮ ರೆಡ್ಡಿ ಆಗಮಿಸಿದ್ದರು.
ಸಹಾಯಕ ಸರ್ಕಾರಿ ಅಭಿಯೋಜಕಿ ಎ.ಎ.ನೇಸರಿಕರ, ಎಸ್.ಎಸ್. ಅಂಗಡಿ ಹಾಗೂ ಎಂ.ವೈ. ದೇವಲಾಪೂರ, ಸವದತ್ತಿ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಹಿರಿಯ ವಕೀಲರಾದ ಬಿ.ಎಂ. ಯಲಿಗಾರ, ಎಸ್.ಬಿ. ಗೋಪಶೆಟ್ಟಿ, ಸಿ.ಬಿ. ವಕ್ಕುಂದ, ಸಿ.ಎಸ್. ಹುಜರತ್ತಿ, ಬಿ.ಎನ್. ಬೆಡಸೂರ ಇತರರನ್ನು ಸನ್ಮಾನಿಸಲಾಯಿತು. ವಕೀಲರ ಸಂಘದ ನೂತನ ಸದಸ್ಯರಿಗೆ ಪುಷ್ಪ ನೀಡಿ ಸ್ವಾಗತಿಸಲಾಯಿತು.ಸವದತ್ತಿ ತಾಲೂಕು ಆರೋಗ್ಯ ಅಧಿಕಾರಿ ಎಸ್.ಎಸ್. ಸಬನೀಸ್ ಉಪನ್ಯಾಸ ನೀಡಿದರು. ಎಸ್.ಆರ್. ಆಲದಕಟ್ಟಿ ನಿರೂಪಿಸಿದರು. ವಕೀಲರಿಗೆ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.