ತ್ವರಿತ ನ್ಯಾಯ ನೀಡಲು ವಕೀಲರ ಸಹಕಾರಿ ಅಗತ್ಯ

KannadaprabhaNewsNetwork |  
Published : Jun 02, 2025, 11:55 PM IST

ಸಾರಾಂಶ

ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದ್ದು, ಅದರಂತೆ ನೊಂದವರಿಗೆ ವಕೀಲರು ಮತ್ತು ನ್ಯಾಯಾಧೀಶರು ಶೀಘ್ರ ನ್ಯಾಯಾದಾನ ಮಾಡಬೇಕಾದರೆ ವಕೀಲರ ಪಾತ್ರ ಬಹಳ ಮುಖ್ಯವಾಗಿರುತ್ತದೆ, ನ್ಯಾಯಾಲಯದ ಕಲಾಪಗಳನ್ನು ಸಗಮವಾಗಿ ನಡೆಸಿಕೊಂಡು ಹೋಗಲು ಎಲ್ಲ ವಕೀಲರು ಸಹಕಾರ ಅಗತ್ಯ

ಕನ್ನಡಪ್ರಭ ವಾರ್ತೆ ಕೆಜಿಎಫ್ ಸಮಾಜದಲ್ಲಿ ತುಳಿತಕ್ಕೆ ಒಳಗಾಗದವರಿಗೆ ತ್ವರಿತವಗಿ ನ್ಯಾಯ ಒದಗಿಸುವಲ್ಲಿ ವಕೀಲರು ಮತ್ತು ನ್ಯಾಯಾಧೀಶರು ಎರಡು ಚಕ್ರಗಳು ಇದ್ದಂತೆ, ಇಬ್ಬರು ಸರಿಸಮಾನವಾಗಿ ಹೋದಾಗ ಮಾತ್ರ ನೊಂದವರಿಗೆ ತ್ವರಿತ ಗತಿಯಲ್ಲಿ ನ್ಯಾಯದಾನ ನೀಡಲು ಸಾಧ್ಯವಾಗಲಿದೆ ಎಂದು ನೂತನ ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಜಿಎಫ್ ಜೆಎಂಎಫ್‌ಸಿ ನ್ಯಾಯಾಲಯದ ವಕೀಲರ ಭವನದಲ್ಲಿ ತಮಗೆ ಹಾಗೂ ಹಿರಿಯ ನ್ಯಾಯಾಧೀಶರಾದ ಜಯಲಕ್ಷ್ಮೀ ಅವರಿಗೆ ವಕೀಲರು ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಕೀಲರ ಪಾತ್ರ ಮುಖ್ಯ

ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದ್ದು, ಅದರಂತೆ ನೊಂದವರಿಗೆ ವಕೀಲರು ಮತ್ತು ನ್ಯಾಯಾಧೀಶರು ಶೀಘ್ರ ನ್ಯಾಯಾದಾನ ಮಾಡಬೇಕಾದರೆ ವಕೀಲರ ಪಾತ್ರ ಬಹಳ ಮುಖ್ಯವಾಗಿರುತ್ತದೆ, ನ್ಯಾಯಾಲಯದ ಕಲಾಪಗಳನ್ನು ಸಗಮವಾಗಿ ನಡೆಸಿಕೊಂಡು ಹೋಗಲು ಎಲ್ಲ ವಕೀಲರು ಸಹಕಾರ ನೀಡುವಂತೆ ಮನವಿ ಮಾಡಿದರು.ಹಿರಿಯ ನ್ಯಾಯಾಧೀಶೆಯಾದ ಜಯಲಕ್ಷ್ಮೀ ಮಾತನಾಡಿ, ಚಿನ್ನದ ನಾಡಿಗೆ ಇದೇ ಪ್ರಥಮ ಬಾರಿಗೆ ಬಂದಿದ್ದೇನೆ, ಹಿರಿಯ, ಕಿರಿಯ ವಕೀಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ನ್ಯಾಯಾಲಯದ ಕಲಾಪಗಳನ್ನು ನಡೆಸಿಕೊಂಡು ಹೋಗಲು ವಕೀಲರ ಸಾಹಕಾರ ಬಹಳ ಮುಖ್ಯ, ಮುಖ್ಯವಾಗಿ ವಕೀಲರು ನ್ಯಾಯಾಲಯದ ಕಲಾಪಗಳು ನಡೆಯುವ ಸಂದರ್ಭದಲ್ಲಿ ಮೊಬೈಲ್ ಪೋನ್ ಬಳಕೆಯನ್ನು ಮಾಡಬಾರದು, ಕಲಾಪಗಳಿಗೆ ತೊಂದರೆಯಾಗಲಿದೆ ಎಲ್ಲ ವಕೀಲರು ಸಾಹಕಾರ ನೀಡುವ ಭರವಸೆ ಇರುವುದಾಗಿ ತಿಳಿಸಿದರು.ಜಾಮೀನು ಪಡೆಯಲು ವ್ಯವಸ್ಥೆ

ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ ಮಾತನಾಡಿ, ವಕೀಲರ ಬಹು ಮುಖ್ಯ ಬೇಡಿಕೆ ಅಂದರೆ ಜಾಮೀನು ಪಡೆಯಲು ನಗದು ರೂಪದಲ್ಲಿ ಶ್ಯೂರಟಿಯನ್ನು ನೀಡಲು ಕಾನೂನು ಅಡಿಯಲ್ಲಿ ವ್ಯವಸ್ಥೆ ಮಾಡಿಕೊಡಬೇಕು. ಇದರಿಂದ ಜಾಮೀನು ಪಡೆಯವವರಿಗೆ ಹಾಗೂ ವಕೀಲರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬಹುದೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ವಕೀಲರ ಸಂಘದ ಪರವಾಗಿ ಎಲ್ಲ ವಕೀಲರು ಕಲಾಪಗಳಲ್ಲಿ ಭಾಗವಹಿಸಿ, ಉತ್ತಮ ರೀತಿಯನ್ನು ಕಲಾಪಗಳನ್ನು ನಡೆಸಿಕೊಂಡು ಹೋಗಲು ನೂತನ ನ್ಯಾಯಾಧೀಶರಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರಾದ ಮುಜಫರ್ ಎ ಮಾಂಜರಿ, ನ್ಯಾಯಾಧೀಶರಾದ ವಿನೋದ್‌ಕುಮಾರ್, ಶಮೀದಾ ಉಪಸ್ಥಿತರಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್ ನೂತನ ನ್ಯಾಯಾಧೀಶರಿಗೆ ಸ್ವಾಗತ ಕೋರಿದರು, ಕರ‍್ಯದರ್ಶೀ ಕೆ.ಸಿ.ನಾಗರಾಜ್ ಕರ‍್ಯಕ್ರಮವನ್ನು ನಿರೂಪಣೆ ಮಾಡಿದರು, ವಕೀಲರಾದ ನೂರ್‌ಜಾನ್, ಪದ್ಮ, ಕಲೈಸೆಲ್ವಿ, ಪ್ರೀತಿ, ವಿಜಯಶ್ರೀ, ರೇವತಿ, ಭಾವನಿ, ಸೌಮ್ಯ, ವರಷಿತ.ಪಿ. ಪ್ರಭವತಿ, ಶಿಲ್ಪ,ಪೂಜಾ, ಎನ್.ಮನೋಹರನ್, ದಿನೇಶ್‌ಕುಮಾರ್, ಚಿನ್ನದ್ವರೈ, ಮುರಳಿ,ಶ್ರೀನಿನಾಥ್ ಗೋಪಿ ಹಾಗೂ ಇನ್ನಿತರ ವಕೀಲರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌