ಕನ್ನಡಪ್ರಭ ವಾರ್ತೆ ಸಿಂಧನೂರು
ಅವರು ಬುಧವಾರ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ ಅವರು ಮೂಲತಃ ವಕೀಲರು. ಅವರು ತಮ್ಮ ಜ್ಞಾನ ಬಲದಿಂದ ಅತ್ಯುನ್ನತ ಹುದ್ದೆಗೆ ಏರಿದರು. ಅವರಂತೆ ವಕೀಲರು ತಮ್ಮ ವೃತ್ತಿಯೊಂದಿಗೆ ನಾಯಕತ್ವದ ಗುಣ ಬೆಳೆಸಿಕೊಂಡು ರಾಜಕೀಯ ರಂಗಕ್ಕೆ ಪ್ರವೇಶಿಸಬೇಕು. ಇದರಿಂದಾಗಿ ವಕೀಲರು ಕಾನೂನಿನ ಜ್ಞಾನದಿಂದಾಗಿ ಹೆಚ್ಚು ಹೆಚ್ಚು ಜನಪರ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ದೀಪಾ ಜಿ. ಮನೇಕರ್ ಮಾತನಾಡಿ, ಕಿರಿಯ ವಕೀಲರು ಮುಖ್ಯವಾಗಿ ನ್ಯಾಯಾಲಯಗಳ ಕಾರ್ಯ ಕಲಾಪಗಳಲ್ಲಿ ಭಾಗವಹಿಸಬೇಕು. ವಸ್ತ್ರ ಸಂಹಿತೆಯನ್ನು ನ್ಯಾಯಾಲಯದಲ್ಲಿ ಕಡ್ಡಾಯವಾಗಿ ಎಲ್ಲ ವಕೀಲರು ಪಾಲಿಸಬೇಕು. ನಂಬಿ ಬಂದ ಕಕ್ಷಿದಾರರಿಗೆ ನ್ಯಾಯಕೊಡಿಸುವ ನೈಜ ಪ್ರಯತ್ನವನ್ನು ವಕೀಲರು ಪಾಲಿಸಬೇಕು ಎಂದರು.ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎನ್. ರಾಮನಗೌಡ ಮಾತನಾಡಿ, ಸಿಂಧನೂರಿನ ವಕೀಲರು ಪ್ರತಿಯೊಂದು ಸೌಲಭ್ಯ, ನ್ಯಾಯಾಲಯದ ಕಟ್ಟಡಗಳನ್ನು ಹೋರಾಟಗಳ ಮೂಲಕವೆ ಪಡೆದುಕೊಂಡಿದ್ದಾರೆ. ಇಂದು ಸಿಂಧನೂರಿನಲ್ಲಿ 5 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಮುಖ್ಯವಾಗಿ ಮೂರನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯಕ್ಕೆ ಎಂಟು ಹೊಸ ಕಾಯ್ದೆಗಳ ವಿಚಾರಣಾ ಅಧಿಕಾರದ ವ್ಯಾಪ್ತಿಯನ್ನು ನೀಡಿರುವುದು ವಕೀಲ ವೃಂದಕ್ಕೆ ಸಂತಸ ತಂದಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ. ಪಾಟೀಲ್, ಶಾಸಕರಾದ ಹಂಪನಗೌಡ ಬಾದರ್ಲಿ, ಆರ್. ಬಸನಗೌಡ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನೀಡಿದ ಸಹಕಾರ ಮರೆಯಲಾಗುವುದಿಲ್ಲ. ಅವರೆಲ್ಲರಿಗೂ ವಕೀಲರ ಸಂಘ ಅಭಿನಂದಿಸುತ್ತದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ, ಶಾಸಕರಾದ ಹಂಪನಗೌಡ ಬಾದರ್ಲಿ, ಆರ್. ಬಸನಗೌಡ ತುರ್ವಿಹಾಳ, ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಆನಂದಪ್ಪ ಎಂ., ಅಚ್ಚಪ್ಪ ದೊಡ್ಡಬಸವರಾಜ, ಕಾರ್ಯದರ್ಶಿ ಶಿವಕುಮಾರ ಉಮಲೂಟಿ, ಖಜಾಂಚಿ ಶರಣಬಸವರ ಉಮಲೂಟಿ ಇದ್ದರು.