ಇತ್ತೀಚಿನ ಯಾಂತ್ರಿಕರಣ ಯುಗದಲ್ಲಿ ಪರಿಸರ ನಾಶಕ್ಕೆ ಮಾನವ ಮುಖ್ಯ ಕಾರಣವಾಗುತ್ತಿರುವುದು ಆಘಾತಕರ ಸಂಗತಿ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯ ನಿರ್ಬಂಧಿಸಿ ಉತ್ತಮ ವಾತಾವರಣ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ರಾವಂದೂರು ಕೆಪಿಎಸ್ ಕಾಲೇಜು ಇಂಗ್ಲಿಷ್ ಪ್ರಾಧ್ಯಾಪಕ ಲಕ್ಷ್ಮಿಕಾಂತ್ ಕರೆ ನೀಡಿದರು.ತಾಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಐಟಿಸಿ ಮೈರಾಡಾ ಕಾವೇರಿ ಪ್ರಾದೇಶಿಕ ಸಂಸ್ಥೆ ನೇತೃತ್ವದಲ್ಲಿ ಗ್ರಾಪಂ, ತೋಟಗಾರಿಕೆ, ಅರಣ್ಯ ಮತ್ತು ಕೃಷಿ ಇಲಾಖೆ ಸಯೋಗದೊಂದಿಗೆ ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಇತ್ತೀಚಿನ ಯಾಂತ್ರಿಕರಣ ಯುಗದಲ್ಲಿ ಪರಿಸರ ನಾಶಕ್ಕೆ ಮಾನವ ಮುಖ್ಯ ಕಾರಣವಾಗುತ್ತಿರುವುದು ಆಘಾತಕರ ಸಂಗತಿಯಾಗಿದೆ, ಹೆಚ್ಚು ಹೆಚ್ಚು ಗಿಡ ಮರ ಬೆಳೆಸಿ ಉತ್ತಮ ವಾತಾವರಣ ಕಾಪಾಡಬೇಕು ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ಮುಂದಾಗಿರುವ ಐಟಿಸಿ ಮೈರಾಡ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.ಇಲವಾಲ ಐಎಲ್ ಟಿಡಿ ಸಹಾಯಕ ವ್ಯವಸ್ಥಾಪಕರಾದ ಚೆನ್ನವೀರೇಶ್ ಮಾತನಾಡಿ, ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾನಿ ಹೆಚ್ಚಾಗುತ್ತಿದೆ, ನಾವೆಲ್ಲರೂ ಜಾಗೃತರಾಗಿ ಪರಿಸರ ಉಳಿವಿಗೆ ಮುಂದಾಗಬೇಕು, ಈ ನಿಟ್ಟಿನಲ್ಲಿ ಐಟಿಸಿ ವತಿಯಿಂದ ಮೈಕ್ಯಾಪ್ಸ್ ಸಹಯೋಗದೊಂದಿಗೆ ರೈತರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಿ ಸಾಮಾಜಿಕ ಅರಣ್ಯೀಕರಣ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಹುಣಸೂರು ಮೈಕ್ಯಾಪ್ಸ್ ಕಾರ್ಯಕ್ರಮ ಸಂಯೋಜಕ ಎಚ್.ಎಸ್. ಶಂಕರ್ ಮಾತನಾಡಿದರು.ತೋಟಗಾರಿಕೆ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಹಾಗೂ ಕೃಷಿ ಇಲಾಖೆ ಅಧಿಕಾರಿ ಹಿತೇಶ್ ದಿನದ ಮಹತ್ವ ಕುರಿತು ಮಾತನಾಡಿ, ತಮ್ಮ ಇಲಾಖೆ ವತಿಯಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಗ್ರಾಪಂ ಮಾಜಿ ಅಧ್ಯಕ್ಷ ಧರಣೇಶಪ್ಪ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಕ್ರಮಕ್ಕೂ ಮುನ್ನಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಗ್ರಾಮದ ಮುಖ್ಯ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿ ಪ್ಲಾಸ್ಟಿಕ್ ನಿಷೇಧತೆ ಹಾಗೂ ಪರಿಸರ ಜಾಗೃತಿ ಕುರಿತು ಅರಿವು ಮೂಡಿಸಿದರು.ಐಟಿಸಿ ಎಂಎಸ್.ಕೆ ಮೈಸೂರಿನ ಕಾರ್ಯಕ್ರಮ ನಿರ್ವಾಹಕರಾದ ಮನೋಜ್, ಗ್ರಾಪಂ ಅಧ್ಯಕ್ಷೆ ಜಯಶ್ರೀ, ಸದಸ್ಯರಾದ ಸುರೇಶ್, ದೇವೇಗೌಡ, ಸರಸ್ವತಿ, ಪ್ರೇಮಮ್ಮ, ಪಿಡಿಒ ಕೆ.ಕೆ. ಶ್ರೀದೇವಿ ಮತ್ತು ಸಿಬ್ಬಂದಿ, ತೋಟಗಾರಿಕೆ ಇಲಾಖೆ ಅಧಿಕಾರಿ ಶಂಕರ್ ಲಿಂಗಪ್ಪ, ಯಜಮಾನರಾದ ಅಂಜನಿಗೌಡ, ಮೈಕ್ಯಾಪ್ಸ್ ಸಿವಿಲ್ ಎಂಜಿನಿಯರ್ ಆರ್. ವಿಜಯ್, ಕೃಷಿ ಅಧಿಕಾರಿ ವೀಣಾ, ವಿಸ್ತರಣಾಧಿಕಾರಿಗಳಾದ ಕೃಷ್ಣಾಚಾರಿ, ಚಂದ್ರಪ್ಪ, ಕಾರ್ತಿಕ್, ಸತೀಶ್ ಆರಾಧ್ಯ, ಸಂಜಯ್, ಶಿವರಾಜ್, ಸುಬ್ರಮಣ್ಯ ಕಚೇರಿ ಸಿಬ್ಬಂದಿ ಪವಿತ್ರ, ಮೋನಿಕಾ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.