ಕನ್ನಡಪ್ರಭ ವಾರ್ತೆ ಪಾವಗಡ
ಅವರು ಶುಕ್ರವಾರ ಮಾಜಿ ಸಚಿವ ವೆಂಕಟರಮಣಪ್ಪ ಅವರ ಜತೆ ತೆರಳಿ ಪಟ್ಟಣದ ತುಮಕೂರು ರಸ್ತೆ ಮಾರ್ಗ ಹೊರವಲಯದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ 5 ಎಕರೆ ಸರ್ಕಾರಿ ಜಮೀನಿನ ಪರಿಶೀಲನೆ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಎಚ್.ವಿ.ವೆಂಕಟೇಶ್, ಪಟ್ಟಣದ ನಿವೇಶನ ರಹಿತ ಅರ್ಹ ಬಡವರಿಗೆ ಮನೆ ಮಂಜೂರಾತಿ ಕಲ್ಪಿಸಲು ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಟ್ಟಣದ ಹೊರವಲಯದ ಎಸ್‌ಎಸ್‌ಕೆ ಕಾಲೇಜು ಹಿಂಭಾಗದಲ್ಲಿ 5 ಎಕರೆ ಸರ್ಕಾರಿ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಲು ಸರ್ಕಾರದಿಂದ ಪುರಸಭೆಗೆ ಮಂಜೂರಾತಿ ಆದೇಶ ಜಾರಿಯಾಗಿದೆ. 5 ಎಕರೆಯಲ್ಲಿ ಸುಸಜ್ಜಿತ ಲೇ ಔಟ್ ನಿರ್ಮಿಸಲು ಈಗಾಗಲೇ ಅಂದಾಜುಪಟ್ಟಿ ಸಿದ್ದಪಡಿಸಿದ್ದು ಜಮೀನಿನಲ್ಲಿರುವ ಸೀಮೆ ಜಾಲಿ ಹಾಗೂ ಗಿಡಗಂಟೆ ಹಾಗೂ ನಿವೇಶನ ಹಂಚಿಕೆ ಜಮೀನು ಸಮತಟ್ಟು ನಿರ್ವಹಿಸಲು ಆದೇಶಿಸಲಾಗಿದೆ ಎಂದರು.ಪುರಸಭೆ ಅಧ್ಯಕ್ಷ ಪಿ.ಎಚ್.ರಾಜೇಶ್ , ಪುರಸಭೆಯ ಮುಖ್ಯಾಧಿಕಾರಿ ಜಾಫರ್ ಷರೀಷ್, ಮುಖಂಡರಾದ ಸುದೇಶ್‌ಬಾಬು,ಪುರಸಭೆ ಉಪಾಧ್ಯಕ್ಷರಾದ ಗೀತಾ ಹನುಮಂತರಾಯಪ್ಪ,ಸದಸ್ಯರಾದ ತೆಂಗಿನಕಾಯಿ ರವಿ ಇತರೆ ಅನೇಕ ಮಂದಿ ಮುಖಂಡರು ಹಾಗೂ ಪುರಸಭೆಯ ಹಲವು ಸದಸ್ಯರು ಇದ್ದರು.