ಕನ್ನಡಪ್ರಭ ವಾರ್ತೆ ಮೈಸೂರು
ಹಿರಿಯ ಸಾಹಿತಿ ಹಾಗೂ ಅಂಕಣಕಾರರಾದ ಪ್ರೊ.ಎಚ್.ಎಸ್.ಕೆ. ಅವರ ನೆನಪಿನ ಶತಮಾನೋತ್ಸವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಆಂಶಿ ಪ್ರಸನ್ನಕುಮಾರ್, ಹಾವೇರಿಯ ಪರಿಸರ ಚಿಂತಕ ಜಗದೀಶ್ ಮಹಾರಾಜ್ ಪೇಟ್, ರಂಗ ಕರ್ಮಿ ಡಾ.ಎಚ್.ಎ. ಪಾರ್ಶ್ವನಾಥ ಅವರಿಗೆ ಪ್ರದಾನ ಮಾಡಲಾಯಿತು.
ಸುವರ್ಣ ಕರ್ನಾಟಕ ಪ್ರಶಸ್ತಿಯನ್ನು ಕವಯತ್ರಿನ ಡಾ. ಲತಾ ರಾಜಶೇಖರ್ - ಮಹಾ ಕಾವ್ಯ, ವೈದ್ಯಕೀಯ ಸೇವೆಗಾಗಿ ಕೆ.ಆರ್. ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ನರೇಂದ್ರ, ಸಾಹಿತ್ಯ ಹಾಗೂ ಸಮಾಜ ಸೇವೆಗಾಗಿ ಪುಷ್ಪಾ ಅಯ್ಯಂಗಾರ್ ಹಾಗೂ ವೈದೇಹಿ ಅಯ್ಯಂಗಾರ್ ಅವರಿಗೆ ಪ್ರದಾನ ಮಾಡಲಾಯಿತು.ಅಪೂರ್ವ ದಂಪತಿಗಳಿಗೆ ಪ್ರಶಸ್ತಿ
ಸಮಾಜ ಸೇವೆ- ಹಾಸನದ ಡಾ.ಎಂ.ಸಿ. ರಾಜು ದೊಡ್ಡ ಮಂಡಿಗನಹಳ್ಳಿ ಹಾಗೂ ರೇವತಿ, ವೈದ್ಯಕೀಯ ಹಾಗೂ ಕನ್ನಡ ಸೇವೆಗಾಗಿ ಕೆ.ಆರ್. ನಗರದ ಡಾ.ಕೆ.ಆರ್. ಗೌತಮ್ ಹಾಗೂ ಡಾ. ವಾಣಿಶ್ರೀ, ಸಾಹಿತ್ಯ ಹಾಗೂ ಕಾನೂನು ಸೇವೆಗಾಗಿ ರೇವಣ್ಣ ಬಳ್ಳಾರಿ ಹಾಗೂ ಶಕುಂತಲಾ, ಸಾಹಿತ್ಯ ಸೇವೆಗಾಗಿ ಸಂಧ್ಯಾರಾಣಿ ದೇಶಪಾಂಡೆ ಹಾಗೂ ಗೋಪಾಲ ದೇಶಪಾಂಡೆ, ಗ್ರಾಮೀಣ ಸೇವೆಗಾಗಿ ಹೊಸ ಅಗ್ರಹಾರದ ಸಮಾಜ ಸೇವಕ ಎಚ್.ಕೆ. ಓಬೇಗೌಡ ಹಾಗೂ ಕಮಲಮ್ಮ, ಶಿಕ್ಷಣ ಸೇವೆಗಾಗಿ ಕೆ.ಆರ್. ನಗರದ ವೈ.ಸಿ. ಸತ್ಯನಾರಾಯಣ ಹಾಗೂ ಭಾರತಿ ಅವರಿಗೆ ಸುವರ್ಣ ಕರ್ನಾಟಕ
ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ
ಇನ್ಸ್ಪೆಕ್ಟರ್ ಖಾದರ್, ಗಾಯಕಿ ಎಂ.ಎನ್. ಮೊನಾಲಿಸಾ ಇವರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ನೀಡಲಾಯಿತು.
ಸಾಹಿತ್ಯ ರಂಗದ ಸೇವೆಗಾಗಿ ಕೊಡಗಿನ ಕವಿ ಎಂ.ಡಿ. ಅಯ್ಯಪ್ಪ, ವಿಶೇಷ ಚೇತನ ಕವಿ ಬಂಡಿಹೊಳೆ ಮಂಜುನಾಥ್, ವಕೀಲ ಬಿ.ಕೆ. ನೂತನಕುಮಾರ್, ಕೆ. ವಿ. ರಮೇಶ್ ಕಟ್ಟೇಪುರ ಹಾಗೂ ಕವಯತ್ರಿ ರತ್ನಚಂದ್ರ ಶೇಖರ್ ಅವರಿಗೆ ರಾಷ್ಟ್ರ ಕವಿ ಕುವೆಂಪು ಕಾವ್ಯ ಚೇತನ ಪ್ರಶಸ್ತಿ ನೀಡಲಾಯಿತು.
ರಾಷ್ಟ್ರಕವಿ ಕುವೆಂಪು ನೆನಪಿನ ಕವಿಗೋಷ್ಠಿಯನ್ನು ಹಾಸನದ ಸಾಹಿತಿ ಜಯಶ್ರೀ ಕೃಷ್ಣ ಉದ್ಘಾಟಿಸಿದರು. ವಿಶೇಷ ಚೇತನ ಕವಿ ಬಂಡಿಹೊಳೆ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸವಿತಾ ರವಿಶಂಕರ್ ಮುಖ್ಯ ಅತಿಥಿಯಾಗಿದ್ದರು.