ದೇಶದಲ್ಲಿ ಮತ್ತೆ ಮೋದಿ ಪ್ರಧಾನಿಯಾಗಬೇಕು, ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವು ಸಾಧಿಸಲೆಂದು ಪೂಜೆ ಸಲ್ಲಿಕೆ
ದೇವಾಲಯದ ಪೂಜೆ ಬಳಿಕ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರಕ್ಕೆ ತೆರಳಿದ ಬಿಜೆಪಿ ಮುಖಂಡರು ರಕ್ತದಾನ ಮಾಡಿ ಸದೃಢ ದೇಶ ಹಾಗೂ ಭವ್ಯ ಭಾರತ ನಿರ್ಮಿಸುವ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಆಶಿಸಿದರು.
ಈ ವೇಳೆ ಬಿಜೆಪಿ ಮುಖಂಡ ಹಾಗೂ ಕಡವಂತಿ ಗ್ರಾಪಂ ಸದಸ್ಯ ವಿನೋದ್ ಬೊಗಸೆ ಮಾತನಾಡಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಸಚಿವರಾದ ಸಂದರ್ಭದಲ್ಲಿ ರಾಜ್ಯಕ್ಕೆ ಸುಮಾರು 28 ಸಾವಿರ ಕೋಟಿ ಅನುದಾನ ನೀಡಿ ಒಂದು ರು.ನಷ್ಟೂ ಭ್ರಷ್ಟಚಾರವೆಸಗದೇ ಜನಸೇವೆಯಲ್ಲಿ ತೊಡಗಿದ ಸರಳ ವ್ಯಕ್ತಿ ಎಂದರು.ರಾಷ್ಟ್ರವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವುದನ್ನು ತಡೆಯಲು ವಿರೋಧ ಪಕ್ಷದ ನಾಯಕರು ಒಗ್ಗಟ್ಟಾಗಿ ಒಕ್ಕೂಟ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಭದ್ರತೆ, ಬ್ಯಾಂಕ್ ಖಾತೆ ತೆರೆದಿರುವುದು, ವಿಶ್ವಕರ್ಮ ಯೋಜನೆ, ಕೃಷಿ ಕಲ್ಯಾಣ್ ಸೇರಿದಂತೆ ಸಾಮಾನ್ಯ ಜನತೆಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ಜಾರಿಗೊಳಿಸಿರುವುದನ್ನು ಮರೆಯಬಾರದು ಎಂದರು.
ಚಿಕ್ಕಮಗಳೂರಿಗೆ ಮಾಜಿ ಸಚಿವರು ಹಾಗೂ ಹಾಲಿ ಸಂಸದರ ಕೊಡುಗೆಯೇ ಕೋಟಾ ಶ್ರೀನಿವಾಸ್ ಪೂಜಾರಿಗೆ ವರದಾನವಾಗಲಿದೆ. ಒಟ್ಟಾರೆ ಕ್ಷೇತ್ರದಲ್ಲಿ ಸುಮಾರು 2 ಲಕ್ಷಗಳ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ದೇಶಾದ್ಯಂತ 400 ಕ್ಕೂ ಹೆಚ್ಚು ಸ್ಥಾನ ಗಳಿಸಿ ಬಿಜೆಪಿ ನೇತೃತ್ವದಲ್ಲಿ ಅಧಿಕಾರ ಹಿಡಿಯುವುದು ಶತಸಿದ್ಧ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಸದಸ್ಯ ಮಿಥುನ್‌ಶೆಟ್ಟಿ, ಮುಖಂಡರಾದ ಎಸ್.ಡಿ.ಎಂ. ಮಂಜು, ಉದಯ್‌ಶೆಟ್ಟಿ, ಬೊಗಸೆ ಗ್ರಾಮದ ಪರಮೇಶ್ ಹಾಜರಿದ್ದರು.ಪೋಟೋ ಫೈಲ್ ನೇಮ್ 4 ಕೆಸಿಕೆಎಂ 2ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಹಾಗೂ ಕೋಟಾ ಶ್ರೀನಿವಾಸ್ ಪೂಜಾರಿ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಬೇಕೆಂದು ಬಿಜೆಪಿ ಮುಖಂಡರುಗಳು ಗುರುವಾರ ಚಿಕ್ಕಮಗಳೂರಿನ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ರಕ್ತದಾನ ಮಾಡಿದರು.