- ಶ್ರೀಮತಿ ಪಾರ್ವತಮ್ಮ, ಡಾ.ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ಆಯೋಜನೆ: ದಿನೇಶ್ ಮಾಹಿತಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.25 ರಿಂದ 30ರವರೆಗೆ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಹಾಗೂ ಡಾ. ಶಾಮನೂರು ಶಿವಶಂಕರಪ್ಪ ಸವಿನೆನಪಿನ ಅಂಗವಾಗಿ 19ನೇ ಅಂತಾರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರದಿಂದ ಆರಂಭ ಆಗಲಿರುವ ಕ್ರಿಕೆಟ್ ಪಂದ್ಯಾವಳಿಗೆ ನ.25ರ ಸಂಜೆ 6 ಗಂಟೆಗೆ ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್ಪಿ ಎಚ್.ಟಿ.ಶೇಖರ್, ಸಚಿವ ಕೆ.ಎಸ್. ಬಸವಂತಪ್ಪ, ಶಾಸಕರಾದ ಸಮರ್ಥ್ ಶಾಮನೂರು, ಶಿವಗಂಗಾ ಬಸವರಾಜ್, ಡಿ.ಜಿ. ಶಾಂತನಗೌಡ, ದೇವೇಂದ್ರಪ್ಪ, ಉದ್ಯಮಿಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಶ್ರೀನಿವಾಸ ಶಿವಗಂಗಾ, ಮಹದೇವ, ಮುಸ್ತಾಫ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಮಹಿಳಾ ತಂಡಗಳು ಭಾಗಿ:
ಡಿಪಿಎಲ್ ಮಾದರಿ ಚಿಂತನೆ:
ಟೂರ್ನಿಯಲ್ಲಿ ವಿಜೇತರಾದವರಿಗೆ ಪ್ರಥಮ ಸ್ಥಾನವಾಗಿ ₹6,00,555 ನಗದು ಮತ್ತು ಶಾಮನೂರು ಡೈಮಂಡ್ ಕಪ್, ದ್ವಿತೀಯ ಸ್ಥಾನಕ್ಕೆ ₹4,00,555 ನಗದು ಮತ್ತು ಶಿವಗಂಗಾ ಕಪ್ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ₹2,00,555 ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಎಲ್ಲ ಪಂದ್ಯಾವಳಿಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದರು.
ಈ ಬಾರಿ ಅಫೀಶಿಯಲ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಪ್ರೆಸ್ ಕ್ಲಬ್‌ನ 2 ತಂಡಗಳು, ಮಹಾನಗರ ಪಾಲಿಕೆ, ಪೊಲೀಸ್ ತಂಡ, ದೂಡಾ, ಜಿಲ್ಲಾಧಿಕಾರಿ ತಂಡ, ಆರೋಗ್ಯ ತಂಡ, ಬೆಸ್ಕಾಂ ತಂಡ, ವೈದ್ಯರ ತಂಡ, ಡ್ಯಾನ್ಸರ್ ಮತ್ತು ಮರ್ಚೆಂಟ್ಸ್ ಸೇರಿ 16 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.
- - -