ಸೇವಾ ಮನೋಭಾವದ ಜೊತೆ ಸಂಸ್ಕೃತಿ,ಸಂಸ್ಕಾರ ಕಲಿಯಿರಿ: ಬಿಇಒ ತಿಮ್ಮಯ್ಯ ಅಭಿಮತ

KannadaprabhaNewsNetwork |  
Published : Apr 05, 2026, 02:00 AM IST
2 ಬೀರೂರು 2ಬೀರೂರು ಸಮೀಪದ ಮೇಲನಹಳ್ಳಿ ಗ್ರಾಮದಲ್ಲಿ ಬುಧವಾರ ಸರ್ಕಾರಿ ಪ್ರಥಮ ದರ್ಜೆ ವತಿಯಿಂದಾ ಏರ್ಪಡಿಸಿದ್ದ ಎನ್.ಎಸ್.ಎಸ್.ವಾರ್ಷಿಕ ಶಿಬಿರವನ್ನು ಕಡೂರು ಬಿಇಒ ತಿಮ್ಮಯ್ಯ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಹರೀಶ್, ಮುಬಾರಕ್ ಇದ್ದರು. | Kannada Prabha

ಸಾರಾಂಶ

ಬೀರೂರುಭವಿಷ್ಯದ ನಿರ್ಮಾತೃಗಳಾದ ಯುವಜನರು ದೇಶದ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೇವಲ ಅಂಕಗಳ ಹಿಂದೆ ಬೀಳದೆ ಸಂಸ್ಕೃತಿ ಮತ್ತು ಸಂಸ್ಕಾರವನ್ನೂ ಕಲಿಯಬೇಕು ಎಂದು ಕಡೂರು ಬಿಇಒ ತಿಮ್ಮಯ್ಯ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಮೇಲನಹಳ್ಳಿಯಲ್ಲಿ ಎನ್.ಎಸ್.ಎಸ್ ಶಿಬಿರ

ಕನ್ನಡಪ್ರಭ ವಾರ್ತೆ, ಬೀರೂರು

ಭವಿಷ್ಯದ ನಿರ್ಮಾತೃಗಳಾದ ಯುವಜನರು ದೇಶದ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೇವಲ ಅಂಕಗಳ ಹಿಂದೆ ಬೀಳದೆ ಸಂಸ್ಕೃತಿ ಮತ್ತು ಸಂಸ್ಕಾರವನ್ನೂ ಕಲಿಯಬೇಕು ಎಂದು ಕಡೂರು ಬಿಇಒ ತಿಮ್ಮಯ್ಯ ಹೇಳಿದರು. ಬೀರೂರು ಸಮೀಪದ ಮೇಲನಹಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಡೆದ ರಾಷ್ಟ್ರೀಯ ಸೇವಾಯೋಜನೆ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿ ದೇಶ ಯುವಜನರಿಂದ ಸುಭದ್ರಗೊಳ್ಳಬೇಕಿದೆ, ಸಾಮಾಜಿಕ ನಾಯಕತ್ವ ಗುಣ ಪ್ರೇರೇಪಿಸುವ ಸೇವಾಯೋಜನೆ ಚಟುವಟಿಕೆಗಳ ಮೂಲಕ ಬದುಕಿನ ಮೂಲಮಂತ್ರ ಕಲಿಯುವುದು ಅಗತ್ಯ ಎಂದು ತಿಳಿಸಿದರು.

ಗ್ರಾಮೀಣ ನೆಲೆಗಟ್ಟಿನ ಭಾರತದ ಸ್ಥಿತಿ-ಗತಿ ಅರಿಯಲು ಮಹಾತ್ಮಗಾಂದೀಜಿ ಜನ್ಮಶತಮಾನೋತ್ಸವ ನೆನಪಿನಲ್ಲಿ ಆರಂಭವಾದ ಎನ್ಎಸ್ಎಸ್ ಸಹಕಾರಿ. ಸಮುದಾಯ ನಾಯಕತ್ವಕ್ಕೆ ತಳಹದಿ ಮತ್ತು ಸಹಬಾಳ್ವೆ ಮಹತ್ವ ನಮಗೆ ಕಲಿಸುತ್ತದೆ. ಶೈಕ್ಷಣಿಕ ಹಂತದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಸಮಾನತೆಯ ಬದುಕಿಗೆ ನಾಂದಿ ಹಾಡುತ್ತದೆ ಎಂದು ಹೇಳಿದರು.

ಸಿಡಿಸಿ ಸದಸ್ಯ ಎನ್.ಮುಬಾರಕ್ ಮಾತನಾಡಿ, ಎನ್.ಎಸ್.ಎಸ್.ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವೆಯ ಮಹತ್ವ, ನಾಯಕತ್ವದ ಗುಣ, ಹಾಗೂ ಸಾಮಾಜಿಕ ಜಾಗೃತಿ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ.ಹರೀಶ್ ಮಾತನಾಡಿ, ಗ್ರಾಮಗಳ ಮೂಲಭೂತ ಸೌಲಭ್ಯ ಸುಧಾರಣೆ ಹಾಗೂ ಅಭಿವೃದ್ಧಿಗೆ ವಿದ್ಯಾರ್ಥಿಗಳ ಸೇವಾ ಕಾಳಜಿ ಮುಖ್ಯ. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟು ಕೊಳ್ಳುವಂತೆ ಮಾಡುವ ಸೇವಾಮನೋಭಾವದ ಜೊತೆ ಹಲವು ಕಾರ್ಯಕ್ರಮ ರೂಪಿಸಿ ರಾ.ಸೇ.ಯೋಜನೆ ಕೆಲಸ ಮಾಡುತ್ತಿದೆ. ಸೀಮಿತ ಅವಧಿ ಕೆಲಸ ಮಾಡದೇ ಆಗಾಗ ಗ್ರಾಮಗಳ ಸಂದರ್ಶನ ಮಾಡಿ ಗ್ರಾಮಗಳ ಒಡನಾಟವನ್ನು ಪಟ್ಟಣದ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದರು. ಎನ್.ಎಸ್.ಎಸ್.ಸಂಯೋಜನಾಧಿಕಾರಿ ಡಾ.ಮಲ್ಲಿಕಾರ್ಜುನ್ ಮಾತನಾಡಿ, ಸಾಮಾಜಿಕ ಪ್ರಜ್ಞೆ, ಸಮಾಜದ ಬಗೆಗಿನ ಕಾಳಜಿ ಮೂಡಿಸುವುದು, ನನಗಾಗಿ ಅಲ್ಲ - ನಿಮಗಾಗಿ ಎಂಬ ಧ್ಯೇಯ ಸೇವಾಯೋಜನೆಯದ್ದಾಗಿದೆ. ಈಗ ಕೇಂದ್ರ ಸರ್ಕಾರದ ನೀತಿಯಂತೆ ಪ್ರತಿಯೊಬ್ಬ ವಿದ್ಯಾರ್ಥಿ ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಎನ್‌ ಎಸ್ಸಿ ಅಥವಾ ಎನ್.ಎಸ್.ಎಸ್ ನಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಬೆಳವಣಿಗೆಗೆ ನಾಂದಿ ಹಾಡಬೇಕುಎಂದು ತಿಳಿಸಿದರು. ಕಾಲೇಜಿನ ಉಪನ್ಯಾಸಕರಾದ ಯೋಗೀಶ್, ಲೋಕಾಂಬಿಕಾ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಸಾದ್, ಗ್ರಾಮಸ್ಥ ಮಹೇಶ್ವರಪ್ಪ ಹಾಗೂ ಎನ್.ಎಸ್.ಎನ್ ನ ವಿದ್ಯಾರ್ಥಿಗಳು ಹಾಜರಿದ್ದರು.2 ಬೀರೂರು 2ಬೀರೂರು ಸಮೀಪದ ಮೇಲನಹಳ್ಳಿಯಲ್ಲಿ ಬುಧವಾರ ಸರ್ಕಾರಿ ಪ್ರಥಮ ದರ್ಜೆಯಿಂದ ಏರ್ಪಡಿಸಿದ್ದ ಎನ್.ಎಸ್.ಎಸ್.ವಾರ್ಷಿಕ ಶಿಬಿರವನ್ನು ಕಡೂರು ಬಿಇಒ ತಿಮ್ಮಯ್ಯ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಹರೀಶ್, ಮುಬಾರಕ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋಗಳಿಗೆ ಹೆಚ್ಚುತ್ತಿರುವ ಎಲ್‌ಪಿಜಿ ಸಂಕಷ್ಟ
ಕೆಪಿಎಸ್ ಮ್ಯಾಗ್ನೆಟ್ ವಿರುದ್ಧ 10ರಂದು ಬೃಹತ್ ಜನ ಸಮಾವೇಶ