ವೃತ್ತಿಯ ಪ್ರೀತಿಸುವುದ ಕಲಿಯಿರಿ: ಪ್ರಾಚಾರ್ಯ ಎಸ್.ನಾಗಭೂಷಣ್

KannadaprabhaNewsNetwork |  
Published : Jul 05, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಟಿಂಟ್  ಬಾಟಂ | Kannada Prabha

ಸಾರಾಂಶ

ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಮುಖ್ಯ ಶಿಕ್ಷಕ, ಶಿಕ್ಷಣಾಧಿಕಾರಿ, ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಪ್ರಭಾರಿ ಡಿಡಿಪಿಐ ಮತ್ತು ಡಯಟ್ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಲು ಎಲ್ಲ ಅಧಿಕಾರಿ ವರ್ಗದವರು ಮಾರ್ಗದರ್ಶನ ನೀಡಿದ್ದಾರೆ. ನಾವು ಕೆಲಸ ನಿರ್ವಹಿಸುವ ಕಚೇರಿಯಲ್ಲಿ ಕೌಟುಂಬಿಕ ವಾತಾವರಣ ನಿರ್ಮಿಸಿಕೊಂಡಾಗ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಚಿತ್ರದುರ್ಗ: ಶ್ರದ್ಧೆ ಮತ್ತು ಬದ್ಧತೆಯಿಂದ ನಮ್ಮ ವೃತ್ತಿಯಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಡಯಟ್ ಪ್ರಭಾರಿ ಪ್ರಾಚಾರ್ಯ ಎಸ್.ನಾಗಭೂಷಣ್ ಹೇಳಿದರು.

ಡಯಟ್‌ನಲ್ಲಿ ನಿವೃತ್ತ ಪ್ರಾಚಾರ್ಯ ಎಂ.ನಾಸಿರುದ್ದೀನ್‌ರವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ನಮ್ಮ ವೃತ್ತಿಯನ್ನು ಪ್ರೀತಿಸಬೇಕು. ಸಮರ್ಪಣಾಭಾವದಿಂದ ಕೆಲಸ ನಿರ್ವಹಿಸಬೇಕು. ನಾಸಿರುದ್ದೀನ್‌ರವರು ಕಾಯಕಯೋಗಿಯಂತೆ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಿದ್ದಾರೆ. ಡಯಟ್ ವತಿಯಿಂದ ನಡೆಯುವ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಎಡ್ ಲ್ಯಾಬ್ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರ ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ನಿವೃತ್ತ ಪ್ರಾಚಾರ್ಯ ಎಂ.ನಾಸಿರುದ್ದೀನ್ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಮುಖ್ಯ ಶಿಕ್ಷಕ, ಶಿಕ್ಷಣಾಧಿಕಾರಿ, ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ಪ್ರಭಾರಿ ಡಿಡಿಪಿಐ ಮತ್ತು ಡಯಟ್ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಲು ಎಲ್ಲ ಅಧಿಕಾರಿ ವರ್ಗದವರು ಮಾರ್ಗದರ್ಶನ ನೀಡಿದ್ದಾರೆ. ನಾವು ಕೆಲಸ ನಿರ್ವಹಿಸುವ ಕಚೇರಿಯಲ್ಲಿ ಕೌಟುಂಬಿಕ ವಾತಾವರಣ ನಿರ್ಮಿಸಿಕೊಂಡಾಗ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಡಯಟ್‌ನಲ್ಲಿ ಪ್ರಾಚಾರ್ಯರಾಗಿ 3 ವರ್ಷ 5 ತಿಂಗಳು ಕೆಲಸ ನಿರ್ವಹಿಸಿದ್ದು, ಈ ಅವಧಿಯಲ್ಲಿ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಜಿಲ್ಲೆಯ ಎಲ್ಲ ಅನುಷ್ಠಾನಾಧಿಕಾರಿಗಳು ನೀಡಿದ ಉತ್ತಮ ಸಹಕಾರದಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದು ತಿಳಿಸಿದರು. ಹಿರಿಯ ಉಪನ್ಯಾಸಕ ಅಶ್ವಥ್‌ ನಾರಾಯಣ, ಎಸ್.ಸಿ.ಪ್ರಸಾದ್, ತಿಪ್ಪೇಸ್ವಾಮಿ, ಜ್ಞಾನೇಶ್ವರಿ, ಅನಿತಾ, ಉಪನ್ಯಾಸಕರಾದ ಎಸ್.ಬಸವರಾಜು, ಶಿವಲೀಲ, ರಾಮಣ್ಣ, ಎಲ್.ರೇವಣ್ಣ, ಪದ್ಮ, ಮಂಜುಳಾ, ಶಂಕರನಾಯ್ಕ, ರಂಗಸ್ವಾಮಿ, ತಾಂತ್ರಿಕ ಸಹಾಯಕರಾದ ಅವಿನಾಶ್, ಭ್ರಮರ, ವಿಷಯ ಪರಿವೀಕ್ಷಕರಾದ ಕೆ.ಜಿ.ಪ್ರಶಾಂತ್, ನಿತ್ಯಾನಂದ, ರಂಗನಾಯ್ಕ, ರಾಘವೇಂದ್ರ, ಬಿ.ಆರ್ ಸಿ ಸಂಪತ್‌ಕುಮಾರ್, ಕಚೇರಿ ಅಧೀಕ್ಷಕರಾದ ಗಿರೀಶ್, ಕವಿತ, ಪ್ರದಸ ಅಶ್ವಿನಿ, ವಿಜಯಲಕ್ಷ್ಮೀ, ದ್ವಿದಸ ಚಂದ್ರಶೇಖರ್, ಹೇಮಲತ, ವಿನಯ್, ಶ್ರೀನಿವಾಸ್, ಪರಿಚಾರಕರಾದ ಪಿ. ಬೋಸಯ್ಯ, ಮಂಜುಳಾ, ಡಿ.ದರ್ಜೆ ನೌಕರರಾದ ಗೀತಮ್ಮ, ಝಾನ್ಸಿ, ಯುವರಾಜ್, ನಿರ್ಮಲ ಮತ್ತಿತರರಿದ್ದರು.

--------------

ಪೋಟೋ ಕ್ಯಾಪ್ಸನ್

ಡಯಟ್‌ನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಿವೃತ್ತ ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹಾಜರಾಬಿ ದಂಪತಿಯವ ಆತ್ಮೀಯವಾಗಿ ಸನ್ಮಾನಿಸಲಾಯಿತು. ------ಪೋಟೋ ಫೈಲ್ ನೇಮ್-4 ಸಿಟಿಡಿ 4

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎನ್ ಡಿಎನಿಂದ SIR ಅಧಿಕಾರಿಗಳಿಗೆ ಆತಂಕ: ಕಾಂಗ್ರೆಸ್ ಆರೋಪ
ಬಸ್ -ಟಿಪ್ಪರ್ ನಡುವೆ ಡಿಕ್ಕಿ: ಹಲವರಿಗೆ ಗಾಯ