ಕನಕಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ವೃಂದ ಹವಾಮಾನ ದತ್ತಾಂಶಗಳನ್ನು ದಾಖಲಿಸುವ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು.
ನಗರದ ಹೊರಹೊಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳಶಾಸ್ತ್ರ ವಿಷಯ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರಾಧ್ಯಾಪಕರನ್ನು ಒಳಗೊಂಡಂತೆ ಹವಾಮಾನ ಘಟಕಾಂಶಗಳ ಪ್ರತಿನಿತ್ಯದ ದತ್ತಾಂಶಗಳನ್ನು ಸಂಗ್ರಹಿಸುವ ದಾಖಲಿಸುವ ಸ್ಥಳಕ್ಕೆ ಭೇಟಿ ನೀಡಿ ಹವಾಮಾನ ದತ್ತಾಂಶಗಳನ್ನು ದಾಖಲಿಸಲು ಅಳವಡಿಸಿರುವ ಉಪಕರಣಗಳ ಮತ್ತು ಅವುಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು.ಸಾಧಾರಣ ಮಳೆ ಪ್ರಮಾಣವನ್ನು ದಾಖಲಿಸುವ ಮಳೆ ಮಾಪಕ ಡಿಜಿಟಲೀಕರಣ ಒಳಗೊಂಡ ಮಳೆಯ ಪ್ರಮಾಣವನ್ನು ದಾಖಲಿಸುವ ಮಳೆಯ ಮಾಪಕ ಪವನ ದಿಕ್ಸೂಚಿ, ಪವನ ವೇಗ ಮಾಪಕ ಹಾಗೂ ಪವನ ಬೀಸುವ ದಿಕ್ಕಿನ ಮಾಹಿತಿಯನ್ನು ಒದಗಿಸುವ ಉಪಕರಣ, ವಿಶೇಷವಾಗಿ ಸೂರ್ಯನ ಕಿರಣಗಳ ಪ್ರಖರತೆಯ ಪ್ರಮಾಣವನ್ನು ದಾಖಲಿಸುವ ಉಪಕರಣ, ವಾತಾವರಣದಲ್ಲಿ ನೀರಿನ ಆರ್ದ್ರತೆಯನ್ನು ದಾಖಲಿಸುವ ಆರ್ದ್ರತಾ ಮಾಪಕ, ಗರಿಷ್ಠ-ಕನಿಷ್ಠ ಉಷ್ಣತಾ ಮಾಪಕಗಳು ಸೇರಿದಂತೆ ವಿವಿಧ ಮಾಪಕಗಳ ಕಾರ್ಯವೈಖರಿಯನ್ನು ಪ್ರಾಯೋಗಿಕವಾಗಿ ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಸತೀಶ್ ಕುಮಾರ್ ಹಾಗೂ ಡಾ.ಡಿ ಮುತ್ತುರಾಜು ಅವರ ಮಾರ್ಗ ದರ್ಶನದಲ್ಲಿ ವಿದ್ಯಾರ್ಥಿಗಳು ಮಾಹಿತಿಯನ್ನು ಪಡೆದು ಕೊಂಡರು.
ಕೇಂದ್ರದ ಮೇಲ್ವಿಚಾರಕಿ ಸಾವಿತ್ರಮ್ಮ ವಿವಿಧ ಉಪಕರಣ ಗಳಲ್ಲಿ ಕಂಡುಬರುವ ದತ್ತಾಂಶಗಳ ಮಾಹಿತಿಯನ್ನು ಸಂಗ್ರಹಿಸಲು ಬೇಕಾಗಿರುವ ಅವುಗಳಿಗೆ ಬಳಸುವ ಕೆಂಪು ಷಾಹಿ(ಇಂಕ್) ಗಳ ಬದಲಾವಣೆ ಮಾಡುವ ಸಮಯ ಹಾಗೂ ಅವುಗಳನ್ನು ದಾಖಲಿಸುವ ದಾಖಲಾತಿ ಪುಸ್ತಕದಲ್ಲಿನ ದತ್ತಾಂಶಗಳ ಕ್ರೂಢೀಕರಣದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿಕೊಟ್ಟರು.ಕಾಲೇಜಿನ ಪ್ರಾಂಶುಪಾಲರಾದ ಶ್ಯಾಮಲಾ, ಕನ್ನಡ ವಿಭಾಗದ ಪ್ರಾಧ್ಯಾಪಕಿ ಸೌಮ್ಯ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪೊಟೋ೧೩ಸಿಪಿಟಿ೩:ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹವಾಮಾನ ದತ್ತಾಂಶ ದಾಖಲಿಸುವ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.