ಅದ್ಧೂರಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ: ರಾಜಶಂಕರ್
ಹಳ್ಳಿ ಭಾಗದ ಈ ಶಾಲೆಯಲ್ಲಿ ಇಂತಹ ಅದ್ಧೂರಿ ಕಾರ್ಯಕ್ರಮ ಮಾಡಲು ಊರಿನವರು ಮತ್ತು ಎಸ್.ಡಿ.ಎಂ.ಸಿ. ಸಹಕಾರ ಕಾರಣ ಎಂದು ಕೆಡಿಪಿ ಸದಸ್ಯ ರಾಜಶಂಕರ್ ಹೇಳಿದರು.
ಸೂರ್ಯದೇವಸ್ಥಾನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಎಫ್.ಎಲ್.ಎನ್. ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿರುವ ಕ್ರಿಯಾಶೀಲ ಶಿಕ್ಷಕರ ತಂಡದಿಂದ ಶಾಲೆ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಮಾತನಾಡಿ ಈ ಶಾಲೆ ಸುತ್ತ ಶಾಲೆ ಮುಂದಿನ ಚಪ್ಪರ ಅಲಂಕಾರ, ವೇದಿಕೆ ಸಿಂಗಾರ ಎಲ್ಲಾ ಒಂದಕ್ಕಿಂತ ಒಂದು ಚೆನ್ನಾಗಿದೆ. ವರ್ಣಿಸಲು ಸಾಧ್ಯವಿಲ್ಲ ಎಲ್ಲರೂ ಸೇರಿ ಉತ್ತಮ ಕಾರ್ಯಕ್ರಮ ಮಾಡಿದ್ದಾರೆ. ಇಲ್ಲಿರುವ ಕ್ರಿಯಾಶೀಲ ಶಿಕ್ಷಕರ ತಂಡ ಮತ್ತು ಗ್ರಾಮಸ್ಥರ ಸಹಕಾರ ಉತ್ತಮವಾಗಿದೆ. ಸರ್ಕಾರದ ಈ ಯೋಜನೆ ಇಲ್ಲಿ ವ್ಯವಸ್ಥಿತವಾಗಿ ಜಾರಿಯಾಗಿದೆ. ಯಾವುದಕ್ಕೂ ಕೊರತೆ ಇಲ್ಲದಂತೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದರು.
ಈ ಎಫ್.ಎಲ್.ಎನ್. ಕಲಿಕಾ ಹಬ್ಬದಲ್ಲಿ ೭ ವಿಭಾಗದಲ್ಲಿ ಸ್ವರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತ ಮಕ್ಕಳಿಗೆ ಪ್ರಥಮ ದ್ವಿತೀಯ ತೃತೀಯ ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.