ಹೊನ್ನಾವರ: ಕಲೆ ಮತ್ತು ಕಲಾವಿದರನ್ನು ಬೆಳೆಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಹೊನ್ನಾವರ ತಾಲೂಕಿನಲ್ಲಿರುವ ಪ್ರಸಿದ್ಧ ಕಲಾವಿದರು ಇದ್ದಾರೆ. ಇಲ್ಲಿಯ ಜನರು ಕಲೆಯನ್ನು ಪ್ರೋತ್ಸಾಹಿಸುತ್ತಾರೆ. ಹೊನ್ನಾವರ ಉತ್ಸವ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ, ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಹಲವಾರು ಜನರ ಶ್ರಮ ಅಗತ್ಯವಿರುತ್ತದೆ. ಹಿರಿಯರ ಸಹಕಾರದ ಜೊತೆಗೆ ಉತ್ಸಾಹಿ ಯುವಕರ ಶ್ರಮದಿಂದ ಹೊನ್ನಾವರ ಉತ್ಸವ ಯಶಸ್ವಿಯಾಗಿ ನಡೆಯುತ್ತಿದೆ. ಕಾರ್ಯಕ್ರಮದಿಂದ ಜನರಿಗೆ ಅನುಕೂಲವಾಗಲಿ ಎಂದರು.ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷ ನಾಗರಾಜ ಭಟ್ಟ, ಸದಸ್ಯ ಶಿವರಾಜ ಮೇಸ್ತ, ಸಮಿತಿ ಗೌರವಾಧ್ಯಕ್ಷ ಶಿವಾನಂದ ಹೆಗಡೆ, ಬೆಳಕೊಂಡ ಸೊಸೈಟಿ ಅಧ್ಯಕ್ಷ ಉಮೇಶ ಮೇಸ್ತ, ವಂದೂರು ಗೋವಿಂದ ಗೌಡ, ಹಳದೀಪುರ ಅರುಣ ಹಬ್ಬು ಮಾತನಾಡಿದರು. ಕೃಷ್ಣಾನಂದ ಭಟ್ಟ ಸ್ವಾಗತಿಸಿ ವಂದಿಸಿದರು. ಉದ್ಯಮಿ ರವಿ ಶೆಟ್ಟಿ ಕವಲಕ್ಕಿ, ಮಹೇಶ ಮೇಸ್ತ, ಸಚಿನ ನಾಯ್ಕ, ರಾಘವೇಂದ್ರ ನಾಯ್ಕ ಇದ್ದರು.