ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಮಾದಾಪುರ ಕ್ಲಸ್ಟರ್‌ನ ಸಿಆರ್‌ಪಿ ಮಂಜುನಾಥ್ ಮಾತನಾಡಿ, ಕಲಿಕಾ ಹಬ್ಬವು ಶಿಕ್ಷಣ ಇಲಾಖೆಯ ಮಹತ್ವಪೂರ್ಣ ಕಾರ್ಯಕ್ರಮವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಒಂದರಿಂದ ಐದನೆಯ ತರಗತಿ ಮಕ್ಕಳಿಗೆ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು ಆಧರಿಸಿ ಮಕ್ಕಳ ಕಲಿಕಾ ಮಟ್ಟವನ್ನು ತಿಳಿಯುವಂತಹ ಒಂದು ಕಾರ್ಯಕ್ರಮವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಕಲಿಕಾ ಹಬ್ಬದಲ್ಲಿ ನೆನಪಿನ ಶಕ್ತಿಯ ಸ್ಪರ್ಧೆ, ಗಟ್ಟಿ ಓದು, ಸಂತೋಷದಾಯಕ ಗಣಿತ, ರಸಪ್ರಶ್ನೆ, ಕಥೆ ಹೇಳುವುದು, ಕ್ಯಾಲಿಗ್ರಫಿ, ಮಗು ಹಾಗೂ ಪೋಷಕರು ಎಂಬ ಏಳು ರೀತಿಯ ಸ್ಪರ್ಧೆಗಳು ನಡೆದವು.ಕಾರ್ಯಕ್ರಮವನ್ನು ಮಾದಾಪುರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಮಂಜಯ್ಯ ಉದ್ಘಾಟಿಸಿದರು. ವೇದಿಕೆಯಲ್ಲಿ ಹಟ್ಟಿಹೊಳೆ ಶಾಲೆಯ ಮುಖ್ಯ ಶಿಕ್ಷಕಿ ಸಪ್ನಾ ಜೋಸೆಫ್, ಸೂರ್ಲಬ್ಬಿ ಶಾಲೆಯ ಮುಖ್ಯ ಶಿಕ್ಷಕಿ ಸುಂದರಿ, ಮುವತ್ತೊಕ್ಲು ಶಾಲೆಯ ಮುಖ್ಯ ಶಿಕ್ಷಕಿ ಪ್ರಭಾಮಣಿ, ಗುಂಡಿಕುಟ್ಟಿ ಶಾಲೆಯ ಮುಖ್ಯ ಶಿಕ್ಷಕಿ ಗೌರಮಣಿ, ಹೊಸತೋಟ ಶಾಲೆಯ ಶಿಕ್ಷಕ ಬಿಬಿನ್ ಕುಮಾರ್, ಮಾದಾಪುರ ಶಾಲೆಯ ಶಿಕ್ಷಕ ರಮೇಶ್, ಕುಂಬೂರಿನ ಶಾಲಾ ಶಿಕ್ಷಕ ಉದಯಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾದಾಪುರ ಕ್ಲಸ್ಟರ್‌ನ ಎಲ್ಲಾ ಸರ್ಕಾರಿ ಶಾಲೆಗಳ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.