ಮುಂಡಗೋಡ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ. ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಸಹಯೋಗದಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಕಲಿಕಾ ಸ್ಫೂರ್ತಿ ಮಾರ್ಗದರ್ಶಿ ಶಿಬಿರವನ್ನು ಮುಂಡಗೋಡದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿರಸಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಪ್ರಾಂಶುಪಾಲ ಎಂ.ಎಸ್. ಹೆಗಡೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಶಿಬಿರಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವಂತೆ ಶುಭ ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷ ಎಸ್.ಡಿ. ಮುಡೆಣ್ಣವರ, ಈಶ್ವರ ನಾಯ್ಕ, ರಮೇಶ ಅಂಬಿಗೇರ, ಮಂಜುನಾಥ ಯಾಜಿ, ನಾಗರಾಜ ನಾಯ್ಕ, ಗಾಯಿತ್ರಿ ಪಿ.ಆರ್., ಇಕ್ಬಾಲ್ ಅಹಮದ, ಕೃಷ್ಣ ಭಟ್, ಸವಿತಾ ವೇರ್ಣೇಕರ, ಅಜಿಮ್ ಸರ್, ಗಿರೀಶ್. ಕುಲಕರ್ಣಿ, ಗಜಾನನ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಾಗರಾಜ ನಾಯ್ಕ ಸ್ವಾಗತಿಸಿದರು. ರಮೇಶ ಪವಾರ ನಿರೂಪಿಸಿದರು. ಜಿ.ಎನ್. ನಾಯ್ಕ ವಂದಿಸಿದರು.
ಅಂಕೋಲಾ: ತಾಲೂಕಿನ ಹೊಸಗದ್ದೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ರೋಟರಿ ಕ್ಲಬ್ ಹಾಗೂ ಪುಷ್ಪಲತಾ ನಾಯಕ ಅವರ ಪ್ರಾಯೋಜಕತ್ವದಲ್ಲಿ ಸಮವಸ್ತ್ರ, ಕುಡಿಯುವ ನೀರಿನ ಬಾಟಲ್, ಮಕ್ಕಳ ಕುರ್ಚಿ, ಪೆನ್ನು ಹಾಗೂ ಮಕ್ಕಳ ಆಟದ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.