ಗದಗ: ಮನುಷ್ಯ ಜೀವನದಲ್ಲಿ ಕಲಿಕೆ ನಿರಂತರವಾಗಿರಬೇಕು ಎಂದು ಡಾ. ಅನ್ನದಾನಿ ಹಿರೇಮಠ ಹೇಳಿದರು.
ಯುವ ಜನತೆ ಎಲ್ಲಾ ದೃಷ್ಟಿಯಿಂದಲೂ ಸದೃಢರಾಗಿ ನಾಡಿಗೆ ಮಹತ್ತರವಾದ ಕೊಡುಗೆಯನ್ನು ನೀಡಬೇಕು. ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಬಹಳಷ್ಟು ಇದೆ. ಆದ್ದರಿಂದ ವಿದ್ಯಾರ್ಥಿಗಳು ಇಂದು ಬೇಕಾಗಿರುವ ಎಲ್ಲಾ ಜ್ಞಾನವನ್ನು ಗಳಿಸಿಕೊಳ್ಳಬೇಕು ಜೊತೆಗೆ ಆರೋಗ್ಯವನ್ನು ನಿರಂತರವಾಗಿ ಕಾಪಡಿಕೊಳ್ಳಬೇಕು. ಮನುಷ್ಯ ಸದಾಕಾಲ ಸಮಾಜಕ್ಕೆ ಉಪಯೋಗ ಆಗಬೇಕು ಮತ್ತು ಸಮಾಜಕ್ಕೆ ವಿಷೇಷ ಕೊಡುಗೆಯನ್ನು ನೀಡಬೇಕೆಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕನಕದಾಸ ಶಿಕ್ಷಣ ಸಮಿತಿಯ ಜಂಟಿ ಕಾರ್ಯದರ್ಶಿ ಶ್ವೇತಾ ಆರ್. ದಂಡಿನ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಅಂಕಗಳನ್ನು ಗಳಿಸುವುದರ ಜೊತೆಗೆ ಸಂವಹನ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. ಆಧುನಿಕ ಜಗತ್ತಿಗೆ ಬೇಕಾಗಿರುವ ಸಕಲ ಜ್ಞಾನವನ್ನು ಹೊಂದಬೇಕು. ಜೊತೆಗೆ ನಿಮ್ಮ ತಂದೆ-ತಾಯಿಗಳಿಗೆ ಓದಿದ ಸಂಸ್ಥೆಗೆ ಕೀರ್ತಿ ತರಬೇಕೆಂದರು.ಈ ವೇಳೆ ಡಾ.ಕೆ.ಎನ್. ಕಾರಬಾರಿ ಮಾತನಾಡಿದರು. ಸಂಕೇತ ಆರ್.ದಂಡಿನ, ಎಂ.ಆರ್. ಹಳ್ಳಿಗುಡಿ, ಉಮಾ ರಾಯನಗೌಡ್ರ, ಪಾರ್ವತಿ ನಾಗರಾಳ, ರೇಖಾ ಚಿಗಳ್ಳಿ, ಹನುಮಂತ ಗಡದ, ರಾಜು ನದಾಫ, ನೀಲಮ್ಮ ಸೇರಿದಂತೆ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು. ನಾಗರಾಜ ಪ್ರಾರ್ಥಿಸಿದರು. ರುದ್ರೇಶ ಸ್ವಾಗತಿಸಿದರು. ಡಾ ಎ.ಕೆ. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ನಿರೂಪಿಸಿದರು.