ನಾವೆಲ್ಲರೂ ಒಂದೇ ಎಂಬ ಭಾವ ಹೊರಹೊಮ್ಮಿಸಿದೆ ಕನ್ನಡ ಕಲಿಕೆ: ಡಾ.ಮರುಳಸಿದ್ದಯ್ಯ ಪಟೇಲ್

KannadaprabhaNewsNetwork | Published : Aug 8, 2024 1:36 AM

ಸಾರಾಂಶ

ತರೀಕೆರೆ, ಕನ್ನಡ ಅಧ್ಯಯನದಿಂದ ನಾವೆಲ್ಲರೂ ಒಂದೇ ಎಂಬ ಭಾವನೆ ಹೊರಹೊಮ್ಮಿದೆ ಎಂದು ರಂಗೇನಹಳ್ಳಿ ಸಾಹಿತಿ ಡಾ.ಮರುಳಸಿದ್ದಯ್ಯ ಪಟೇಲ್ ಹೇಳಿದ್ದಾರೆ.

ಜೋಡಿಕೋಡಿ ಹಳ್ಳಿ ಗ್ರಾಮದಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಕನ್ನಡ ಅಧ್ಯಯನದಿಂದ ನಾವೆಲ್ಲರೂ ಒಂದೇ ಎಂಬ ಭಾವನೆ ಹೊರಹೊಮ್ಮಿದೆ ಎಂದು ರಂಗೇನಹಳ್ಳಿ ಸಾಹಿತಿ ಡಾ.ಮರುಳಸಿದ್ದಯ್ಯ ಪಟೇಲ್ ಹೇಳಿದ್ದಾರೆ.

ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಮೀಪದ ಜೋಡಿಕೋಡಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಓದಿದವರು ಇಂದು ಸಾಕಷ್ಟು ಕ್ಷೇತ್ರಗಳಲ್ಲಿ ವಿವಿಧ ಸಾಧನೆ ನಿರ್ವಹಿಸಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳು ಯಾವುದೇ ಒತ್ತಡವಿಲ್ಲದೆ ಅವರೆಲ್ಲರೂ ಮಾತೃಭಾಷೆಯ ಶಿಕ್ಷಣವನ್ನು ತಜ್ಞ ಶಿಕ್ಷಕರಿಂದ ಪಡೆದು ಓದುವ, ಬರೆಯುವ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಶಿಕ್ಷಣ ಪಡೆದು ಸಾಧನೆ ಮಾಡಬೇಕು ಎಂದು ಹೇಳಿದರು.

ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಆರ್.ನಾಗೇಶ್ ಜಾನಪದ ಕಲೆಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಜಾನಪದ ಮಾತೃಭಾಷೆಗೆ ತಾಯಿಬೇರು ಇದ್ದಂತೆ. ಕೃಷಿಕರು ಬೇಸಾಯದ ಸಮಯದಲ್ಲಿ ಜನಪದರು ತಮ್ಮಷ್ಠಕ್ಕೆ ತಾವೇ ಹಾಡಿಕೊಳ್ಳುತ್ತಾ ಕೃಷಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿಸಿದ ಅವರು, ಕನ್ನಡ ಗೀತೆಗಳನ್ನುಶುಶ್ರಾವ್ಯವಾಗಿ ಹಾಡಿದರು.

ತಾಲೂಕು ಕನ್ನಡ ಸಾಹಿತ್ಯಪರಿಷತ್ತು ಅಧ್ಯಕ್ಷ ರವಿ ದಳವಾಯಿ ಮಾತನಾಡಿ ಶ್ರಾವಣ ಮಾಸದ ಮಹತ್ವವನ್ನು ಮಕ್ಕಳಿಗೆ ವಿವರಿಸಿ, ಕನ್ನಡ ಸಾಹಿತ್ಯ ಪರಿಷತ್ತು ಹಿರಿಯರೊಂದಿಗೆ ಕೂಡಿ ಸಾಹಿತ್ಯ ಪಸರಿಸುವ ಕಾಯಕ ನಿರಂತರವಾಗಿ ನಿರ್ವಹಿಸಿ ಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಕಸಬಾ ಹೋಬಳಿ ಕಸಾಪ ಅಧ್ಯಕ್ಷ ಟಿ.ಎನ್.ಜಗದೀಶ್ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಕೆ.ಎಸ್.ಶಿವಣ್ಣ,. ಕನ್ನಡಶ್ರೀ ಬಿ.ಎಸ್.ಭಗವಾನ್, ಸಿ.ಆರ್.ಪಿ.ಮರಿತಿಮ್ಮಯ್ಯ ಮಾತನಾಡಿದರು. ಸದ್ಗುರು ಫೌಂಡೇಶನ್ ನಿಂದ ಟಿ.ಎನ್.ಜಗದೀಶ್ ಮತ್ತು ತಂಡ ಶಾಲಾ ಮಕ್ಕಳಿಗೆ ಸಿಹಿ ವಿತರಿಸಿ ನೋಟ್ ಬುಕ್, ಪೆನ್ನು ಪೆನ್ನಿಲ್ ಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ವಕೀಲ ಟಿ.ಎಂ.ರಾಜು ಶಾಲಾ ಮಕ್ಕಳಿಗೆ ಜಾಮಿಟ್ರಿ ಬಾಕ್ಸ್ ವಿತರಿಸಿದರು.

ಶಾಲೆ ಮುಖ್ಯ ಶಿಕ್ಷಕ ಎಸ್.ಟಿ. ತಿಪ್ಪೇಶಪ್ಪ, ಕಸಾಪ ಗೌರವ ಕಾರ್ಯದರ್ಶಿ ತ.ಮ.ದೇವಾನಂದ್, ಟಿ.ಯೋಗೀಶ್, ದೇವರಾಜ್ ಸಹ್ಯಾದ್ರಿ, ಸದ್ಗುರು ಪೌಂಡೇಶನ್ ಪದಾಧಿಕಾರಿಗಳು, ಶಾಲೆ ಶಿಕ್ಷಕರು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

7ಕೆಟಿಆರ್.ಕೆ. 19ಃ

ತರೀಕೆರೆ ಸಮೀಪದ ಜೋಡಿಕೋಡಿಹಳ್ಳಿಯಲ್ಲಿ ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಶ್ರಾವಣ ಸಾಹಿತ್ಯ ಸಂಭ್ರಮ ಏರ್ಪಡಿಸಲಾಗಿತ್ತು.

Share this article