ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಕಾಲೇಜಿನ ಗಣಿತ ಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ‘ಮ್ಯಾಥ್ಸ್ ಸ್ಪಾರ್ಕ್’ ಗಣಿತ ಮಾದರಿಗಳ ವಸ್ತುಪ್ರದರ್ಶನ ಹಾಗೂ ಸ್ಪರ್ಧೆ, ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗಣಿತವನ್ನು ಕೇವಲ ಪರೀಕ್ಷೆ, ಅಂಕ, ಸೂತ್ರ ಹಾಗೂ ಸಮೀಕರಣಗಳಿಗೆ ಸೀಮಿತಗೊಳಿಸದೆ, ಜೀವನ ಮತ್ತು ವಿಜ್ಞಾನದೊಂದಿಗೆ ಬೆಸೆದು ನೋಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕುತೂಹಲ ಹಾಗೂ ಸಂಶೋಧನಾ ಮನೋಭಾವ ಬೆಳೆಸಬೇಕು, ಗಣಿತಕಲಿಯಲು ಮೂಡುವಜ್ಞಾನದಕಿಡಿ ಮುಂದೆ ವಿಸ್ತಾರವಾಗುತ್ತದೆ ಎಂದರು.ತಾರ್ಕಿಕ ಚಿಂತನೆ ಗಣಿತದ ಪ್ರಮುಖ ಅಂಶವಾಗಿದ್ದು, ಕಟ್ಟಡಗಳ ವಿನ್ಯಾಸದಲ್ಲಿ,ಕಂಪ್ಯೂಟರ್ ವಿಜ್ಞಾನದಲ್ಲಿ ಅಲ್ಗಾರಿದಂ ಮತ್ತು ಲಾಜಿಕ್, ಎಂಜಿನಿಯರಿಂಗ್‌ನಲ್ಲಿಗಣಿತ ಮಾದರಿಗಳು, ಅರ್ಥಶಾಸ್ತ್ರ ಹಾಗೂ ಸಮಾಜ ವಿಜ್ಞಾನದಲ್ಲಿ ಸಂಖ್ಯಾಶಾಸ್ತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಗಣಿತದ ಬಳಕೆಯಿದೆ ಎಂದರು.
ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಮಹದೇವಸಾಮಿ ಮಾತನಾಡಿ, ಗಣಿತ ಎಂದರೆ ಕಷ್ಟ ಎನ್ನುವ ಮನೋಭಾವ ಹಾಗೂ ಅವ್ಯಕ್ತ ಭಯ ಇರಬಾರದು. ಗಣಿತ ಎಲ್ಲಾ ವಿಷಯಗಳ ಅಡಿಪಾಯ ಇದ್ದ ಹಾಗೆ. ಗಣಿತದಲ್ಲಿ ಪ್ರಭುತ್ವಗಳಿಸಿದರೆ ಎಲ್ಲಾ ವಿಷಯಗಳ ಕಲಿಕೆ ಸರಳವಾಗುತ್ತದೆ ಗಣಿತಜೀವನದ ಕಲೆಯನ್ನು ಕಲಿಸುತ್ತದೆ ಎಂದರು.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 54 ಗಣಿತ ಮಾದರಿಗಳನ್ನು ಪ್ರದರ್ಶನಕ್ಕೆಇಡಲಾಗಿದೆ. ಜೆಎಸ್‌ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ 27 ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಂದ 19 ಮಾದರಿಗಳು ಸೇರಿದಂತೆ ವಿವಿಧ ಮಾದರಿಗಳು ಪ್ರದರ್ಶನಗೊಂಡವು.ರಾಕೆಟ್ ಉಡಾವಣೆಯಲ್ಲಿ ಗಣಿತದ ಅನ್ವಯ, ಆಟದ ಮೂಲಕ ಗಣಿತ ಕಲಿಕೆ ಸೇರಿ ಹಲವು ವಿಷಯಗಳನ್ನು ಮಾದರಿಗಳ ಮೂಲಕ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಕೆಜಿಎಫ್ ರಾಬರ್ಟ್ಸನ್‌ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಎಸ್. ಗುರುಪ್ರಸಾದ್, ಹಾಸನ ಸರ್ಕಾರಿ ವಿಜ್ಞಾನ ಕಾಲೇಜಿನ ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ದರ್ಶನ್ ತೀರ್ಪುಗಾರರಾಗಿದ್ದರು.