ಕ್ವಾರಿ ಹಾಗೂ ಕ್ರಷರ್‌ ಮಾಲೀಕರ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕರೆ ನೀಡಿರುವುದನ್ನು ಜಿಲ್ಲಾ ರೈತಸಂಘದ ತೀವ್ರವಾಗಿ ಖಂಡಿಸಿದ್ದು, ಜನ ಸಾಮಾನ್ಯರಿಗೆ ತೊಂದರೆಯಾದರೆ ಜಿಲ್ಲಾ ರೈತಸಂಘ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕ್ವಾರಿ ಹಾಗೂ ಕ್ರಷರ್‌ ಮಾಲೀಕರ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕರೆ ನೀಡಿರುವುದನ್ನು ಜಿಲ್ಲಾ ರೈತಸಂಘದ ತೀವ್ರವಾಗಿ ಖಂಡಿಸಿದ್ದು, ಜನ ಸಾಮಾನ್ಯರಿಗೆ ತೊಂದರೆಯಾದರೆ ಜಿಲ್ಲಾ ರೈತಸಂಘ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

ತಾಲೂಕಿನಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ಕ್ರಷರ್ ಮತ್ತು ಕ್ವಾರಿ ಮಾಲೀಕರು ಶುಕ್ರವಾರದಿಂದ ಚಳುವಳಿ ಶುರು ಮಾಡಿದ್ದು,ಇದರಿಂದ ಮನೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದರು.

ತೆರಿಗೆ ವಂಚನೆ:

ರಾಜ್ಯ ಸರ್ಕಾರ ಕ್ವಾರಿ ಮಾಲೀಕರಿಗೆ ರಾಯಲ್ಟಿ ವಂಚನೆ ಮಾಡಿದ್ದಾರೆ ಲೀಸ್‌ ದಾರರಿಗೆ ಲಕ್ಷಗಳಿಂದ ಹಿಡಿದು 3,4,8 ಕೋಟಿ ರು. ಹೀಗೆ ಹತ್ತಾರು ಕೋಟಿಗಳಿಗೂ ದಂಡ ಹಾಕಿದ್ದಾರೆ ಇದು ಸ್ವಾಗತಾರ್ಹ.ಆದರೆ ಇದೊಂದೇ ಕ್ರಮ ಸಾಲದು ಅಂತ ಹೇಳಿದರು.

ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿತ:

ಕಳೆದ 26 ದಿನಗಳಿಂದ ರೈತರು ಅಹೋ ರಾತ್ರಿ ಧರಣಿ ನಡೆಸುತ್ತಿದೆ.ಜಿಲ್ಲಾಧಿಕಾರಿ ನೀಡಿದ್ಧ ಭರವಸೆ ಸುಳ್ಳಾಗಿದ್ದು,ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಹೇಳಿದರು.

ಧರಣಿ ಸ್ಥಳಕ್ಕೆ ಬಂದು ಭರವಸೆ ನೀಡಿದ್ದ ಜಿಲ್ಲಾಧಿಕಾರಿ ಮಾತಿಗೆ ತಪ್ಪಿದ್ದಾರೆ ಅಲ್ಲದೆ ರೈತರಿಗೆ ಮಾತು ಕೊಟ್ಟಿದ್ದೇನೆ ಎಂಬುದನ್ನೇ ಮರೆತಿದ್ದಾರೆ.ಅರಣ್ಯ,ಕಂದಾಯ, ರೈತರು,ಜನಪ್ರತಿನಿಧಿಗಳ ಸಭೆ ಕರೆಯುತ್ತೇನೆ ಎಂದು ಹೇಳಿದ್ದರು.ಈಗ ಅದು ಮನಸ್ಸಲ್ಲಿದೆಯೋ ಇಲ್ಲವೋ ಗೊತ್ತಿಲ್ಲ ಎಂದರು.

28ಕ್ಕೆ ಪ್ರತಿಭಟನೆ:

ರೈತರ ಪ್ರತಿಭಟನೆ,ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವ ಕಾರಣ ಸೆ.28 ರಂದು ಇದೇ ಧರಣಿ ಸ್ಥಳದಲ್ಲೇ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ.ಪ್ರಜಾ ಸೇವೆ ಮಾತಿರಲಿ,ಕಚೇರಿಯಲ್ಲಿ ಕೂತು ಕೆಲಸ ಮಾಡದೆ, ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜನರ ಸಮಸ್ಯೆ ಕೇಳಿ ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

ಇಂದು ಪೊರಕೆ ಚಳವಳಿ:

ಧರಣಿ ಶುಕ್ರವಾರಕ್ಕೆ 26 ದಿನ. ಶನಿವಾರ 27ನೇ ಆರಂಭದ ದಿನ.ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಪ್ರಜಾ ಸೇವೆ ಕಾರ್ಯಕ್ರಮ ನಡೆಯುವ ದಿನ ಪೊರಕೆ ಪ್ರತಿಭಟನೆ ನಡೆಯಲಿದೆ ಎಂದರು.

ರೈತಸಂಘದ ತಾಲೂಕು ಅಧ್ಯಕ್ಷ ಮಲ್ಲಯ್ಯನಪುರ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಪ್ರಸಾದ್‌, ಯುವ ಘಟಕದ ಅಧ್ಯಕ್ಷ ಪ್ರವೀಣ್‌, ಸಂಘಟನಾ ಕಾರ್ಯದರ್ಶಿ ರೋಹನ್‌ ಗೌಡ, ಮುಖಂಡರಾದ ಶಿವಕುಮಾರ್‌, ಸೋಮಶೇಖರ್‌, ಚಂದ್ರು, ಮನು, ಸಾಗರ್‌ ಇದ್ದರು.

ಶಾಸಕರೇ ಧರಣಿ ಕೂರಿ, ಬೆಂಬಲಿಸಿ: ಆಗ್ರಹ

ಶಾಸಕರು 4ನೇ ಹಂತದ ಕೆರೆಗಳಿಗೆ ನೀರು ಸೆ.6 ರೊಳಗೆ ಬಿಡಲಿಲ್ಲ ಅಂದರೆ,ಧರಣಿ ಕೂರಬೇಕು ಎಂದು ರೈತರು ಹೇಳಿದ್ರು,ಕೆರೆಗೆ ನೀರು ಬಿಡಿಸಲಾಗದ ಕಾರಣ ರೈತರೊಂದಿಗೆ ಧರಣಿ ಕೂರಿ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಸಲಹೆ ನೀಡಿದರು.

ಕೆರೆಗಳಿಗೆ ನೀವು ನೀಡಿದ ದಿನ ನೀರು ಬರದೇ ಇದ್ದರೆ ನೀವು(ಶಾಸಕ) ಪ್ರತಿಭಟನಾಕಾರರ ಜೊತೆಗೆ ಧರಣಿ ಕೂರಬೇಕು ಅಂತ ಮೊದಲು ಹೇಳಿದ್ದೆವು.ಇದೀಗ ನೀವು ಶಾಸಕರು ರೈತರ ಹಿತದೃಷ್ಟಿಯಿಂದ ಇಂದಿನಿಂದ (ಶನಿವಾರ) ಧರಣಿಗೆ ಬೆಂಬಲ ಕೊಡಬೇಕು ಎಂದರು.