ಫ್ಯಾಷನ್ ಜಗತ್ತು ತುಂಬಾ ವಿಸ್ತಾರವಾಗಿ ಬೆಳೆಯುತ್ತಿದೆ. ಜೊತೆಗೆ ಹೊಸ ಉದ್ಯೋಗಾವಕಾಶಗಳಿಗೆ ಪ್ರೇರಣೆ ನೀಡುತ್ತಿದೆ. ಬದಲಾವಣೆಯಾಗುತ್ತಿರುವ ಜನರ ಅಭಿರುಚಿಗಳಿಗೆ ತಕ್ಕಂತೆ ನಗು ಮೊಗದ ಸೇವೆ ನೀಡುವವರು ಮತ್ತು ವೃತ್ತಿ ಕೌಶಲ್ಯವನ್ನು ಬೆಳೆಸಿಕೊಂಡವರು ಇಂದಿನ ಸ್ಪರ್ಧಾತ್ಮಕತೆಯಲ್ಲಿ ಉಳಿಯಲಿಕ್ಕೆ ಸಾಧ್ಯ.
ಕನ್ನಡಪ್ರಭ ವಾರ್ತೆ ಮೈಸೂರು
ವೃತ್ತಿಯಲ್ಲಿ ಶಿಸ್ತು ಮತ್ತು ವೃತ್ತಿ ಪರತೆಯನ್ನು ಬೆಳೆಸಿಕೊಂಡು ಕೀಳಿರಿಮೆಯನ್ನು ತೊರೆದು ಕೆಲಸದಲ್ಲಿ ನಿರತರಾಗಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲೀಡ್ ಬ್ಯಾಂಕ್ ಎಲ್ ಡಿಎಂ ವಿ.ಎನ್. ನಾಗೇಶ್ ತಿಳಿಸಿದರು.ರುಡ್ ಸೆಟ್ ಸಂಸ್ಥೆಯು ಎನ್.ಆರ್.ಎಲ್.ಎಂ. ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ಉದ್ಯಮಶೀಲತಾಭಿವೃದ್ಧಿಯಲ್ಲಿ ಮಹಿಳೆಯರ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು.ಫ್ಯಾಷನ್ ಜಗತ್ತು ತುಂಬಾ ವಿಸ್ತಾರವಾಗಿ ಬೆಳೆಯುತ್ತಿದೆ. ಜೊತೆಗೆ ಹೊಸ ಉದ್ಯೋಗಾವಕಾಶಗಳಿಗೆ ಪ್ರೇರಣೆ ನೀಡುತ್ತಿದೆ. ಬದಲಾವಣೆಯಾಗುತ್ತಿರುವ ಜನರ ಅಭಿರುಚಿಗಳಿಗೆ ತಕ್ಕಂತೆ ನಗು ಮೊಗದ ಸೇವೆ ನೀಡುವವರು ಮತ್ತು ವೃತ್ತಿ ಕೌಶಲ್ಯವನ್ನು ಬೆಳೆಸಿಕೊಂಡವರು ಇಂದಿನ ಸ್ಪರ್ಧಾತ್ಮಕತೆಯಲ್ಲಿ ಉಳಿಯಲಿಕ್ಕೆ ಸಾಧ್ಯ ಎಂದು ಅವರು ಹೇಳಿದರು.ಸಮಾಜದಲ್ಲಿ ಎಲ್ಲರೂ ನೌಕರದಾರರಾಗಬೇಕೆಂದು ಬಯಸಿದ್ದೆ ಆದಲ್ಲಿ ಸೇವಾ ನಿರತ ಉದ್ಯೋಗಗಳನ್ನು ನೀಡುವವರು ಯಾರು?. ಯಾವಾಗಲೂ ಎಲ್ಲರೂ ನೌಕರಿಯನ್ನೇ ಅರಸುವುದರ ಬದಲು ಉದ್ಯೋಗಾವಕಾಶಗಳನ್ನು ಸೃಷ್ಠಿಸುವಂತವರು ಅಗತ್ಯ. ಪ್ರತಿ ಉದ್ದಿಮೆಗೂ ತನ್ನದೇ ಆದ ಬೇಡಿಕೆಯ ಅವಕಾಶಗಳು ಇದ್ದೇ ಇರುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ರುಡ್ ಸೆಟ್ ನಿರ್ದೇಶಕಿ ಕೆ.ಎಸ್. ಸರಿತಾ ಮಾತನಾಡಿ, ಸ್ವ ಉದ್ಯೋಗದಲ್ಲಿ ಯಶಸ್ವಿಯಾಗಲು ಮೊದಲು ಆತ್ಮವಿಶ್ವಾಸವು ಅತೀ ಅವಶ್ಯ. ಮೊದಲಿಗೆ ನಿಮ್ಮ ಸ್ವ ಸಾಮರ್ಥ್ಯ ಬಗ್ಗೆ ನಂಬಿಕೆಯನ್ನು ಇರಿಸಿಕೊಂಡು ಕೆಲಸವನ್ನು ಪ್ರಾರಂಭಿಸುವುದರಿಂದ ಯಶಸ್ಸನ್ನು ಪಡೆಯಲು ಸಾಧ್ಯ. ತರಬೇತಿ ಅವಧಿಯಲ್ಲಿ ಕಲಿತ ಅಂಶಗಳನ್ನು ವ್ಯವಹಾರ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.ಸಂಸ್ಥೆಯ ಉಪನ್ಯಾಸಕರಾದ ಪಾಲ್ ರಾಜ್, ಲತಾಮಣಿ, 34 ಜನ ಶಿಬಿರಾರ್ಥಿಗಳು ಹಾಗೂ ಸಂಸ್ಥೆಯ ಸಿಬ್ಬಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.