ಮಡಿವಂತಿಕೆ ಬಿಟ್ಟು ಕನ್ನಡ ಬೆಳೆಸಲು ಬಾ.ಸಾಮಗ ಕರೆ

KannadaprabhaNewsNetwork |  
Published : Mar 13, 2025, 12:49 AM IST
12ಸಾಮಗ | Kannada Prabha

ಸಾರಾಂಶ

ಬೆಳ್ಕ‍ಳೆಯ ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಸಂಘವು ಮಾ. ೯ರಂದು ಏರ್ಪಡಿಸಿದ್ದ ೪೭ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ.ಸಾಮಗ ಮಾತಾನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಿಪೂರ್ಣಗೊಳಿಸಲು ತನಗೆ ವಿಷಯಗಳನ್ನು ಯಾವ ಭಾಷೆಯಲ್ಲಿದ್ದರೂ ಮಡಿವಂತಿಕೆ ಬಿಟ್ಟು ಅದನ್ನು ಆರಿಸಿಕೊಂಡು ಕನ್ನಡವನ್ನು ವಿಶ್ವ ಮಟ್ಟಕ್ಕೆ ಬೆಳೆಸಬೇಕು ಎಂದು ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ.ಸಾಮಗ ಕರೆ ನೀಡಿದ್ದಾರೆ.

ಸಾಮಗ ಅವರು ಇಲ್ಲಿನ ಬೆಳ್ಕ‍ಳೆಯ ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಸಂಘವು ಮಾ. ೯ರಂದು ಏರ್ಪಡಿಸಿದ್ದ ೪೭ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತಾನಾಡಿದರು.

ಕನ್ನಡ ಭಾಷೆಯು ನಮ್ಮ ಪ್ರೀತಿ ಕೃತಜ್ಞತೆಗಳಿಗೆ ಅರ್ಹವಾದ್ದರಿಂದ ಅದು ಚೆನ್ನಾಗಿ ಬಾಳಿದರೆ ಕನ್ನಡಿಗರ ಬದುಕು ಬಂಗಾರವಾಗುತ್ತದೆ. ಭಾಷಾ ಬಾಂಧವ್ಯದೊಂದಿಗೆ ಸಾಮಾಜಿಕ ಸುಖ ಹಾಗೂ ರಾಷ್ಟ್ರೀಯ ಏಕತೆಯನ್ನು ಸಾಧಿಸಿ ಯಕ್ಷಗಾನದಂತಹ ಜಾನಪದ ಕಲೆಗಳನ್ನು ಬೆಂಬಲಿಸಿದರೆ ಕನ್ನಡಿಗರ ಕೀರ್ತಿ ಹೆಚ್ಚಾಗುತ್ತದೆಯೆಂದ ಸಾಮಗ ಅವರು ಕನ್ನಡವು ಬೆಳೆಯುತ್ತಿರುವ ಭಾಷೆ ಮತ್ತು ಬೆಳೆಯಬೇಕಾಗಿರುವ ಭಾಷೆಯಾದ್ದರಿಂದ ಅದನ್ನು ಬೆಳೆಸಿ ಬದಲಾಯಿಸುತ್ತ ಇರಬೇಕೆಂದರು.

ಜ್ಯೋತಿಷಿ ಗೋಪಾಲ್ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ವಾಂಸ ಪಿ.ಎನ್. ಲಕ್ಷ್ಮಣ ಹಂದೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ವೇಷಧಾರಿ ಕೆಂಜಿ ರಘುರಾಮ ಗೌಡ ಅವರನ್ನು ಸನ್ಮಾನಿಸಲಾಯಿತು. ಗುರುವಂದನ ಕಾರ್ಯಕ್ರಮದಲ್ಲಿ ಗುರು ರತ್ನಾಕರ ಆಚಾರ್ಯ ಅವರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಸುಧಾಕರ ಜತ್ತನ್ ಅವರು ಕಾರ್ಯಕ್ರಮ ನಿರ್ವಹಿಸಿದರು ಬಳಿಕ ರತ್ನಾಕರ ಆಚಾರ್ಯ ಅವರ ನಿರ್ದೇಶನದಲ್ಲಿ ಮೀನಾಕ್ಷಿ ಕಲ್ಯಾಣ ಮತ್ತು ಸುಧನ್ವಾರ್ಜುನ ಪ್ರಸಂಗಗಳ ಯಕ್ಷಗಾನ ಬಯಲಾಟ ಪ್ರದರ್ಶಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ