ಕನ್ನಡಪ್ರಭ ವಾರ್ತೆ ತುಮಕೂರುಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಇತಿಹಾಸ ಕಲುಷಿತಗೊಳ್ಳಲು ಎಡಪಂಥೀಯ ಚಿಂತಕರೂ ಕಾರಣ ಇರಬಹುದು ಎಂದು ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ ಸಾಂಸ್ಕೃತಿಕ ಚರಿತ್ರೆಯನ್ನು ನೋಡುತ್ತ ಬಂದವರಿಗೆ ಸಮಾಜವಾದಿ ಚಿಂತನೆ ಮತ್ತು ಎಡಪಂಥೀಯ ಚಿಂತನೆ ಇವುಗಳ ನಡುವಿನ ಸಹಕಾರಕ್ಕಿಂತ ಸಂಘರ್ಷವನ್ನು ಬದಿಗೆ ಸರಿಸಿದ ದೊಡ್ಡದೊಡ್ಡ ಸಾಹಿತಿಗಳೆನಿಸಿಕೊಂಡವರು ಎಡಪಂಥೀಯ ಚಿಂತಕರು ಸ್ವಲ್ಪ ಸಮಾಜವಾದಿ ಚಿಂತನೆಯ ಕಡೆ ಇದ್ದರು. ಇದು ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಇತಿಹಾಸವನ್ನು ಕಲುಷಿತಗೊಳಿಸಿತು ಎಂದರು.
ಕರ್ನಾಟಕದ ರಾಜಕೀಯ ಚಲನವಲನೆಗಳೇ ನವ್ಯ ಚಳವಳಿಯ ಅಪಾರ ಪ್ರಭಾವ ಇದ್ದ ದಿನಗಳಲ್ಲಿಯೂ ಕೂಡ ಒಂದು ವಿಚಿತ್ರ ಭೂಮಾಲಿಕರ ಪರವಾಗಿ ನಿಂತದ್ದನ್ನು ನೋಡಬಹುದು. ಈ ಅನಿವಾರ್ಯತೆಯೇ ದಲಿತ, ಬಂಡಾಯ ಚಳವಳಿ ಹುಟ್ಟಿಕೊಳ್ಳಲು ಕಾರಣ ಎಂದರು.ಕವಿಗಳಾದ ಸಿದ್ದಲಿಂಗಯ್ಯ, ಕೃಷ್ಣಯ್ಯ, ಬರಗೂರು ರಾಮಚಂದ್ರಪ್ಪ ಯಾವುದೇ ರಿಯಾಯಿತಿಯನ್ನು ಬಯಸದ ಅತ್ಯುತ್ತಮ ಪ್ರಾಧ್ಯಾಪಕರು, ಸರ್ಕಾರಿ ಕಾಲೇಜುಗಳ ಅಧ್ಯಾಪಕರು ಜಾತಿನಿಷ್ಠವಲ್ಲದ, ಪ್ರಾಮಾಣಿಕವಾದ, ಮಾನವೀಯವಾದ ರಾಜಕೀಯ ತಿಳಿವಳಿಕೆಯಿಂದ ಒಂದು ದಿಟ್ಟ ನಡೆಯನ್ನು ವಿದ್ಯಾರ್ಥಿಗಳಿಗೆ ಕೊಟ್ಟವರು ಎಂದರು.
ಬಹುಮುಖಿ ಸಂಸ್ಕೃತಿ ಚಿಂತಕ ಪ್ರೊ.ಬರಗೂರು ರಾಮಚಂದ್ರ ಆಶಯ ನುಡಿಗಳನ್ನಾಡಿ ಪ್ರೊ.ಸಣ್ಣಗುಡ್ಡಯ್ಯ ಅವರು ಇದೇ ಕಲಾ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದವರು. ಅವರದ್ದು ಬಿಸಿಲು ಬೆಳದಿಂಗಳ ವ್ಯಕ್ತಿತ್ವ. ವಿಮರ್ಶೆಯ ವಿಷಯದಲ್ಲಿ ಅವರು ಬಿಸಿಲು, ಮನುಷ್ಯ ಸಂಬಂಧದಲ್ಲಿ ಬೆಳದಿಂಗಳು. ಸಣ್ಣಗುಡ್ಡಯ್ಯನವರು ಮನುಷ್ಯ ಸಂಬಂಧಗಳಿಗೆ ಬಹಳ ಬೆಲೆ ಕೊಡುತ್ತಿದ್ದರು. ವಿಮರ್ಶೆ ವಿಷಯಕ್ಕೆ ಬಂದಾಗ ಆ ಯಾವ ಗುಣಗಳು ಇರುತ್ತಿರಲಿಲ್ಲ. ಸಣ್ಣಗುಡ್ಡಯ್ಯನವರ ವ್ಯಕ್ತಿತ್ವ ಬಿಸಿಲು ಬೆಳದಿಂಗಳ ವ್ಯಕ್ತಿತ್ವವಾಗಿತ್ತು ಎಂದರು. ಕಥೆಗಾರ ರಘುನಾಥ್ ಚ.ಹ ಮತ್ತು ರೂಪ ಹಾಸನ ಅವರಿಗೆ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.