ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ತೇಜೋವಧೆ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಕೊಪ್ಪಳ ಬಸವತತ್ವ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.
ಕೊಪ್ಪಳ: ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ತೇಜೋವಧೆ ಮಾಡಿರುವುದನ್ನು ಖಂಡಿಸಿ ನಗರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಕೊಪ್ಪಳ ಬಸವತತ್ವ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.
೧೨ನೇ ಶತಮಾನದಲ್ಲಿ ಕನ್ನಡದ ನೆಲದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ರಾಂತಿ ಮಾಡಿ ಸಮಾನತೆಗೆ ಹೋರಾಡಿದ ಮಹಾ ಮಾನವತಾವಾದಿ ಬಸವಣ್ಣನವರ ಕುರಿತು ಅತ್ಯಂತ ಹೀನಾಯವಾಗಿ ಬರೆದಿರುವ ರವಿ ಹಂಜ್ ವಿರುದ್ಧ ಕಾನೂನು ಕ್ರಮ ಆಗಲಿ. ಅವರು ತಮ್ಮ ವಿಡಿಯೋದಲ್ಲಿ ಬಸವಣ್ಣನವರನ್ನು "ಬಿಜ್ಜಳನ ಭಂಡಾರ ಬಳಸಿ ಜಂಗಮರಿಗೆ ದಾಸೋಹ ಮಾಡಿದ್ದಾನೆ, ಇದು ಕಳಬೇಡ ಅನ್ನೋದಕ್ಕೆ ವಿರುದ್ಧವಾದದ್ದು, ಬಿಜ್ಜಳನ ಕೊಲೆ ಮಾಡಿಸಿದವ " ಎಂದು ಬಸವಣ್ಣನವರನ್ನು ಕಳ್ಳ ಮತ್ತು ಕೊಲೆಗಾರ ಎನ್ನುವ ರೀತಿಯಲ್ಲಿ ಬಿಂಬಿಸಿ ಮಾತನಾಡಿದ್ದಾರೆ. ಈ ಮೂಲಕ ನಾಡಿನ ಸಮಸ್ತ ಕನ್ನಡಿಗರಿಗೆ, ಬಸವ ತತ್ವ ನಿಷ್ಠರಿಗೆ, ಸಮತಾವಾದಿ ಮತ್ತು ಪ್ರಗತಿಪರ ಚಿಂತಕರ ಭಾವನೆಗಳಿಗೆ ತೀವ್ರ ಘಾಸಿ ಉಂಟುಮಾಡಿದೆ. ರಾಜ್ಯ ಸರ್ಕಾರದಿಂದ ''ಕರ್ನಾಟಕ ಸಾಂಸ್ಕೃತಿಕ ನಾಯಕ'' ಎಂದು ಘೋಷಿಸಲ್ಪಟ್ಟ ವಿಶ್ವಗುರು ಬಸವಣ್ಣನವರಿಗೆ ಮತ್ತು ವಚನ ಸಾಹಿತ್ಯಕ್ಕೆ ಮಾಡಿದ ಗಂಭೀರ ಅಪಮಾನ ಇದಾಗಿದೆ. ರವಿ ಹಂಜ್ ಅವರು "ಬಸವ ಮಂಟಪ " ಎಂಬ ತಮ್ಮ ಕೃತಿಯ ಚರ್ಚೆಯ ಹೆಸರಿನಲ್ಲಿ, ಬಸವಣ್ಣ ಹಾಗೂ ಬಸವಾದಿ ಶರಣರ ತೇಜೋವಧೆ ಮಾಡುವ ದುರುದ್ದೇಶದಿಂದಲೇ "ಬಸವ ಮಂಟಪ ಕುರಿತು ಮಾತುಗಳು " ಎಂಬ ಶೀರ್ಷಿಕೆಯಡಿ ಈ ರೀಲ್ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ, ರವಿ ಹಂಜ್ ಅವರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಎಸ್ಪಿ ಅವರಿಗೆ ಹಾಗೂ ಸಿಎಂ ಅವರಿಗೆ ಸಹ ಮನವಿ ಸಲ್ಲಿಸಿದ್ದಾರೆ. ಪ್ರಮುಖರಾದ ಹನುಮೇಶ ಕಲ್ಮಂಗಿ, ರಾಜೇಶ ಸಸಿಮಠ, ಸಂಗಮೇಶ ಕಲಹಾಳ, ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ ಕೊಪ್ಪಳ, ಶಿವಕುಮಾರ ಕುಕನೂರ, ಶೇಖರ ಇಂಗಳದಾಳ, ಅರ್ಚನಾ ಸಸಿಮಠ, ದಾನಪ್ಪ ಶೆಟ್ಟರ್, ಸೌಮ್ಯಾ ನಾಲ್ವಾಡ, ವೀರಭದ್ರಪ್ಪ ನಂದ್ಯಾಲ, ಶಿವಸಂಗಪ್ಪ ವಣಿಗೇರಿ, ಪರಪ್ಪ ಗೊಂದಿಹೊಸಳ್ಳಿ, ಶಿವಬಸಯ್ಯ ವೀರಾಪುರ, ಟಿ. ಬಸವರಾಜ, ಅಮರೇಶಪ್ಪ ಬಳ್ಳಾರಿ, ಸಿದ್ದಣ್ಣಕ್ಕಲಿ, ಬಾಪುಗೌಡ ಪೊಲೀಸ್ ಪಾಟೀಲ್, ಪ್ರದೀಪ್ ಕುಮಾರ್ ವಂದಾಲ, ರೇಣುಕಪ್ಪ ಮಂತ್ರಿ, ವೀರೇಶ ಅಸರಡ್ಡಿ, ಗಾಳೆಪ್ಪ ಕಡೆಮನಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.