ಹಾವೇರಿ: ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಹ್ಯಾಟ್ರಿಕ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹಾವೇರಿ ನಗರ ಮಂಡಲದ ಬಿಜೆಪಿ ಕಾರ್ಯಕರ್ತರು ಬುಧವಾರ ಇಲ್ಲಿಯ ಜೆ.ಪಿ. ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಎಸ್.ವಿ. ಸಂಕನೂರು ಅವರು ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರನ್ನು 9,323 ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಜಯ ಸಾಧಿಸಿದ್ದಾರೆ. ಈ ಗೆಲುವು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ ಎಂದರು.
ಬಿಜೆಪಿ ಶಹರ ಘಟಕದ ಅಧ್ಯಕ್ಷ ಕಿರಣ್ ಕೊಳ್ಳಿ ಮಾತನಾಡಿ, ಈ ಗೆಲುವು ಪಕ್ಷದ ಸಂಘಟಿತ ಹೋರಾಟ ಹಾಗೂ ಪದವೀಧರ ಮತದಾರರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಕಾರ್ಯಕರ್ತರು ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಶ್ರಮಿಸಿದ್ದು, ಪದವೀಧರ ಮತದಾರರು ಪಕ್ಷದ ಅಭ್ಯರ್ಥಿಯ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಪಕ್ಷ ಹಲವು ಪ್ರಯತ್ನಗಳನ್ನು ಮಾಡಿದರೂ ಮತದಾರರ ಬೆಂಬಲ ಪಡೆಯಲು ಸಾಧ್ಯವಾಗಿಲ್ಲ ಎಂದರು.ವಿಪ ಸದಸ್ಯ ಡಾ. ಧನಂಜಯ ಸರ್ಜಿ, ಹನುಮಂತನಾಯಕ ಬದಾಮಿ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ಮೃತ್ಯುಂಜಯ ಮುಷ್ಠಿ, ನೀಲಪ್ಪ ಚಾವಡಿ, ನಿರಂಜನ ಹೇರೂರ, ಈರಣ್ಣ ಹೇರೂರು, ಮಹಾಲಿಂಗಸ್ವಾಮಿ ಹಿರೇಮಠ, ನಾಗರಾಜ ಹಾರಿಗೋಲ, ಗುಡ್ಡಪ್ಪ ಭರಡಿ, ಸುರೇಶ ಹೊಸಮನಿ, ವಿಜಯಕುಮಾರ ಚಿನ್ನಿಕಟ್ಟಿ, ರಾಮು ಮಾಳಗಿ, ರುದ್ರೇಶ ಚಿನ್ನಣ್ಣನವರ, ನಿಖಿಲ್ ದೊಗ್ಗಳ್ಳಿ, ಈರಣ್ಣ ಹೊನ್ನಾಳಿ, ಮಾರುತಿ ಸವಣೂರ, ಸುನೀಲ ಬೆಟಗೇರಿ, ಬಾಲರಾಜ ಹೊನ್ನನಾಯಕ, ಕುಮಾರ ಹತ್ತಿ, ಆನಂದ ಕಪ್ಪರದ, ಶಂಭು ಹತ್ತಿ, ಗಿರೀಶ ಶೆಟ್ಟರ್, ಜಗದೀಶ ಕನವಳ್ಳಿ, ವೀರಣ್ಣ ಸವಣೂರ, ಅಲ್ಲಾಭಕ್ಷ ತಿಮ್ಮಾಪುರ, ಲಕ್ಷ್ಮಣ ರಜಪೂತ, ಬಸವರಾಜ ತೊಂಡೂರ, ಶಿವಬಸು ವನಹಳ್ಳಿ, ಪ್ರವೀಣ ಶೆಟ್ಟರ್, ಶಿವಯೋಗಿ ಕೊಳ್ಳಿ, ಶಿವಬಸಪ್ಪ ಚೌಶೆಟ್ಟಿ, ರೋಹಿಣಿ ಪಾಟೀಲ, ವಿಜಯಲಕ್ಷ್ಮೀ ಹೆಗಡೆ, ಜ್ಯೋತಿ ಸಾತೇನಹಳ್ಳಿ, ಅನುಪಮಾ ವಾಲಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.