ವಿಧಾನ ಪರಿಷತ್ನ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ದಾವಣಗೆರೆ, ಹರಿಹರ, ಜಗಳೂರಿನ ಒಟ್ಟು 43 ಮತ ಕೇಂದ್ರಗಳಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಶುರುವಾಗಿ, ಸಂಜೆವರೆಗೂ ಶಾಂತಿ, ಸುವ್ಯವಸ್ಥಿತವಾಗಿ ನಡೆಯಿತು.
- ಜಿಲ್ಲೆಯ 43 ಮತ ಕೇಂದ್ರಗಳಲ್ಲಿ ಮತಹಕ್ಕು ಚಲಾವಣೆ । ಮತ ಕೇಂದ್ರದ ಬಳಿ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ದಂಡು
- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಧಾನ ಪರಿಷತ್ನ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ದಾವಣಗೆರೆ, ಹರಿಹರ, ಜಗಳೂರಿನ ಒಟ್ಟು 43 ಮತ ಕೇಂದ್ರಗಳಲ್ಲಿ ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಶುರುವಾಗಿ, ಸಂಜೆವರೆಗೂ ಶಾಂತಿ, ಸುವ್ಯವಸ್ಥಿತವಾಗಿ ನಡೆಯಿತು.
ನಗರದ ವಿವಿಧ ಮತಗಟ್ಟೆಗಳಿಗೆ ಎನ್ಡಿಎ ಅಭ್ಯರ್ಥಿಯಾದ ಬಿಜೆಪಿ ಕೆ.ಎಂ.ಸುರೇಶ ಭೇಟಿ ನೀಡಿ, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವಂತೆ ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಮನವಿ ಮಾಡಿದರು.
ಇಲ್ಲಿನ ಹೈಸ್ಕೂಲ್ ಮೈದಾನಕ್ಕೆ ಹೊಂದಿಕೊಂಡಿರುವ ಡಯಟ್ ಕಾಲೇಜಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಪತ್ನಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹಾಗೂ ತಮ್ಮ ಪಕ್ಷದ ಮುಖಂಡರೊಂದಿಗೆ ಮಧ್ಯಾಹ್ನದ ನಂತರ ಆಗಮಿಸಿ, ತಮ್ಮ ಹಕ್ಕು ಚಲಾಯಿಸಿದರು. ಅಲ್ಲದೇ, ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆಯೂ ಮನವಿ ಮಾಡಿದರು.
ಜಿಲ್ಲೆಯ ಒಟ್ಟು 43 ಮತ ಕೇಂದ್ರಗಳಲ್ಲಿ ಮತದಾನ ನಡೆಯಿತು. ದಾವಣಗೆರೆ ಜಿಲ್ಲಾ ಕೇಂದ್ರದ ಒಟ್ಟು 33 ಮತ ಕೇಂದ್ರಗಳಲ್ಲಿ ಚುನಾವಣೆ ನಡೆಯಿತು. ಇಲ್ಲಿನ ರಾಜನಹಳ್ಳಿ ಸೀತಮ್ಮ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ 1, 2, 3, 4 ಮತಗಟ್ಟೆ, ಪಿ.ಜೆ. ಬಡಾವಣೆಯ ಸರ್ಕಾರಿ ಬಾಲಕರ ಪಿಯು ಕಾಲೇಜಿನ ಕೊಠಡಿ ಸಂಖ್ಯೆ: 1, 2, 3, 4 ಹಾಗೂ 4, ಅಶೋಕ ರಸ್ತೆಯ ಮಹಿಳಾ ಸೇವಾ ಸಮಾಜದ ಶ್ರೀಮತಿ ಟಿ.ಎಂ.ಚಿನ್ನಮ್ಮ ಮಹೇಶ್ವರ ಸ್ಮಾರಕ ಪಿಯು ಕಾಲೇಜಿನ ಕೊಠಡಿ ಸಂಖ್ಯೆ 1, 2, 3, 4, 5, 6 ಹಾಗೂ 7ರಲ್ಲಿ ಚುನಾವಣೆ ನಡೆಯಿತು.
ಹೈಸ್ಕೂಲ್ ಮೈದಾನದ ಡಯಟ್ ಕಾಲೇಜಿನ ಕೊ.ಸಂ.1, 2, 3, ಮೋತಿ ವೀರಪ್ಪ ಸರ್ಕಾರಿ ಪಿಯು ಕಾಲೇಜಿನ ಕೊ.ಸಂ.1, 2, 3, 4, ದಾವಣಗೆರೆ ತಾ. ಆನಗೋಡು ಗ್ರಾಮದ 2 ಮತ ಕೇಂದ್ರಗಳಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊ.ಸಂ.1, 2, ಅಣಜಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊ.ಸಂ.1, ಮಾಯಕೊಂಡ ಗ್ರಾಮದ ಸರ್ಕಾರಿ ಕೆಪಿಎಸ್ ಶಾಲೆ ಕೊ.ಸಂ.1, ಲೋಕಿಕೆರೆ ಗ್ರಾಮದ ಶ್ರೀ ಮಾರುತಿ ಪ್ರೌಢಶಾಲೆ ಕೊ.ಸಂ.1, 2ರಲ್ಲಿ ಚುನಾವಣೆಯಲ್ಲಿ ಮತದಾರರು ಮತ ಚಲಾಯಿಸಿದರು.
ಜಗಳೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಸರ್ಕಾರಿ ಪಿಯು ಕಾಲೇಜು ಕೊ.ಸಂ.1, 2 ಮತ್ತು 1-ಹೊಸಕೆರೆ ಗ್ರಾಮದ ಸರ್ಕಾರಿ ಪಿಯು ಕಾಲೇಜು, 1-ಜಗಳೂರು ತಾ. ಬಿಳಿಚೋಡು ಗ್ರಾಮದ ಸರ್ಕಾರಿ ಕೆಪಿಎಸ್ ಮತ್ತು ಕಾಲೇಜು ವಿಭಾಗದ ಮತಗಟ್ಟೆಯಲ್ಲಿ ಮತದಾನವಾಯಿತು.
ಹರಿಹರ ನಗರದ 6 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಅಲ್ಲಿನ ಮರಿಯಾ ನಿವಾಸ ಹಿರಿಯ ಪ್ರಾಥಮಿಕ ಶಾಲೆ ಕೊ.ಸಂ.1, 2, ಎಸ್ಜಿಆರ್ಕೆಎಸ್ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊ.ಸಂ.1, 1, ಗಾಂಧಿ ಮೈದಾನದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಕೊ.ಸಂ.1, 2, ಮಲೇಬೆನ್ನೂರಿನ 4 ಮತ ಕೇಂದ್ರಗಳಾದ ಜಿಗಳಿ ರಸ್ತೆಯ ಸರ್ಕಾರಿ ಪಿಯು ಕಾಲೇಜು, ಕೊ.ಸಂ. 1, 2, 3 ಮತ್ತು 4ರಲ್ಲಿ ಮತದಾನ ನಡೆಸಲಾಯಿತು.
ಆಗ್ನೇಯ ಪದವೀಧರರ ಕ್ಷೇತ್ರದ ಮತದಾನಕ್ಕೆ ಮತದಾರರು ತಮ್ಮ ಗುರುತಿಗಾಗಿ ಮತದಾರರ ಭಾವಚಿತ್ರದ ಗುರುತಿನ ಚೀಟಿ ಬದಲಿಗೆ 10 ಪರ್ಯಾಯ ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಹಾಜರುಪಡಿಸಿ, ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಂಜೆ 4 ಗಂಟೆವರೆಗೂ ಮತದಾನ ನಡೆಯಿತು. ಪ್ರತಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿ ಸೇರಿದಂತೆ ಪ್ರತಿ ತಂಡದಲ್ಲಿ 4 ಸಿಬ್ಬಂದಿ ಸೇರಿದಂತೆ ಒಟ್ಟು 55 ತಂಡಗಳು ಚುನಾವಣಾ ಕಾರ್ಯನಿರ್ವಹಿಸಿದವು.
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 43 ಮತಗಟ್ಟೆ ಸ್ಥಾಪಿಸಲಾಗಿತ್ತು. ಈ ಪೈಕಿ ಹರಿಹರದ 10, ಜಗಳೂರಿನ 10 ಸೂಕ್ಷ್ಮ ಮತ್ತು 29 ಸಾಮಾನ್ಯ ಮತಗಟ್ಟೆಗಳಾಗಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಮತಗಟ್ಟೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ಮೇಲೆ ಪೊಲೀಸ್ ಇಲಾಖೆ ಒಂದಿಷ್ಟು ಹೆಚ್ಚು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಕಂಡುಬಂದಿತು.
ಎನ್ಡಿಎ ಅಭ್ಯರ್ಥಿ ಕೆ.ಎಂ.ಸುರೇಶ ಪರ ಮತ ಕೇಂದ್ರಗಳ ಬಳಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜೆಡಿಎಸ್ ನಾಯಕ ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಗಣೇಶ ದಾಸಕರಿಯಪ್ಪ, ಜೆ.ಅಮಾನುಲ್ಲಾ ಖಾನ್, ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್, ಪಿ.ಸಿ. ಮಹಾಬಲೇಶ್ವರ, ಜೆ.ಸೋಮನಾಥ, ಎನ್.ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ. ನಾಗರಾಜ, ಕೆ.ಪ್ರಸನ್ನಕುಮಾರ, ಬಿ.ಜಿ.ಅಜಯಕುಮಾರ, ಬಿ.ಎಸ್.ಜಗದೀಶ, ಎಸ್.ಎಂ.ವೀರೇಶ ಹನಗವಾಡಿ, ರಾಜನಹಳ್ಳಿ ಶಿವಕುಮಾರ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ಸೋಗಿ ಗುರು, ರವಿ, ಪಿ.ಎನ್. ಜಗದೀಶ ಕುಮಾರ ಪಿಸೆ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದು, ಎನ್ಡಿಎ ಅಭ್ಯರ್ಥಿ ಕೆ.ಎಂ.ಸುರೇಶ ಅವರಿಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದುದು ಕಂಡುಬಂದಿತು.
ಕಾಂಗ್ರೆಸ್ ಅಭ್ಯರ್ಥಿ ಪರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಸಚಿವ ಕೆ.ಎಸ್. ಬಸವಂತಪ್ಪ, ಶಾಸಕ ಸಮರ್ಥ ಎಂ.ಶಾಮನೂರು, ಕಾಂಗ್ರೆಸ್ ಮುಖಂಡರಾದ ದಿನೇಶ ಕೆ. ಶೆಟ್ಟಿ, ಇಬ್ರಾಹಿಂ ಖಲೀಲುಲ್ಲಾ, ಎ.ನಾಗರಾಜ, ಅಯೂಬ್ ಪೈಲ್ವಾನ್, ಜಿ.ಎಸ್.ಮಂಜುನಾಥ ಗಡಿಗುಡಾಳ್, ಮುಜಾಹಿದ್ ಪಾಶ, ರಾಕೇಶ ಗಾಂಧಿ ನಗರ, ಹರೀಶ ಬಸಾಪುರ, ಶ್ರೀಕಾಂತ ಬಗರೆ, ಎಸ್.ಮಲ್ಲಿಕಾರ್ಜುನ, ಎಲ್.ಎಚ್.ಸಾಗರ್ ಇತರರು ಇದ್ದರು.
- - -
9ಬಿ. (ಸಣ್ ಸುದ್ದಿ) ವಿಪ ಚುನಾವಣೆಯಲ್ಲಿ ಶೇ.71.39 ಮತದಾನದಾವಣಗೆರೆ: ವಿಧಾನ ಪರಿಷತ್ತು ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳಿಂದ ಒಟ್ಟು ಶೇ.71.39ರಷ್ಟು ಮತ ಚಲಾವಣೆಯಾಗಿದೆ.ದಾವಣಗೆರೆ ನಗರ, ತಾಲೂಕು, ಜಗಳೂರು ಹಾಗೂ ಹರಿಹರ ತಾಲೂಕಿನಲ್ಲಿ ಒಟ್ಟು 31,619 ಮತದಾರರಿದ್ದು, ಈ ಪೈಕಿ 22572 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.71.39ರಷ್ಟು ಮತದಾನವಾಗಿದೆ. 17663 ಪುರುಷ ಮತದಾರರ ಪೈಕಿ 13029 ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ.73.76 ಪುರುಷರು ಮತ ಹಾಕಿದ್ದಾರೆ. 13,956 ಮಹಿಳಾ ಮತದಾರರ ಪೈಕಿ 9543 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.68.38 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.ಶಾಂತಿಯುತ ಮತದಾನ:ವಿಪ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಅತ್ಯಂತ ಶಾಂತಿ, ಸುವ್ಯವಸ್ಥಿತವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ದಾವಣಗೆರೆ ನಗರ, ತಾಲೂಕು, ಜಗಳೂರು ತಾಲೂಕು ಹಾಗೂ ಹರಿಹರ ತಾಲೂಕಿನ ಎಲ್ಲಾ 43 ಮತ ಕೇಂದ್ರಗಳಲ್ಲೂ ಶೇ.100ರಷ್ಟು ಶಾಂತಿಯುತವಾಗಿ ಮತದಾನವಾಗಿದೆ. ಯಾವುದೇ ಕೇಂದ್ರದಲ್ಲಿ ಸಣ್ಣ ಅಹಿತಕರ ಘಟನೆಯೂ ಆಗದಂತೆ ಅತ್ಯಂತ ವ್ಯವಸ್ಥಿತವಾಗಿ, ಶಾಂತಿಯುತವಾಗಿ, ಪಾರದರ್ಶಕವಾಗಿ ಚುನಾವಣೆ ನಡೆದಿದೆ ಎಂದು ಅವರು ಹೇಳಿದ್ದಾರೆ.- - -
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.