ಬೆಳಗಾವಿಯಲ್ಲೂ ಶಾಸಕರ ಭವನ: ಸ್ಪೀಕರ್‌ ಜಿ.ಎಸ್. ಪಾಟೀಲ

KannadaprabhaNewsNetwork |  
Published : Aug 28, 2026, 02:00 AM IST
ಶ್ರೀಗಳಿಂದ ಆಶೀರ್ವಾದ ಪಡೆದ ನೂತನ ಸ್ಪೀಕರ್ ಜಿ.ಎಸ್. ಪಾಟೀಲ. | Kannada Prabha

ಸಾರಾಂಶ

ನಾನು ಸಚಿವನಾಗಬೇಕು ಎನ್ನುವುದು ಕ್ಷೇತ್ರದ ಜನರ ಅಸೆಯಾಗಿತ್ತು. ಆದರೆ ಸಚಿವನಾಗಿದ್ದರೆ ಒಂದೇ ಖಾತೆ ಹೊಂದಿರುತ್ತಿದ್ದೆ. ಇದೀಗ ಸಭಾಧ್ಯಕ್ಷನಾಗಿರುವುದರಿಂದ ಎಲ್ಲ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸ್ಪೀಕರ್ ಜಿ.ಎಸ್. ಪಾಟೀಲ ತಿಳಿಸಿದರು.

ಶಿರಹಟ್ಟಿ: ಬೆಂಗಳೂರಿನಲ್ಲಿರುವಂತೆ ಶಾಸಕ ಭವನವನ್ನು ಬೆಳಗಾವಿಯಲ್ಲಿಯೂ ನಿರ್ಮಿಸಲು ಸಂಕಲ್ಪ ಮಾಡಿದ್ದೇನೆ ಎಂದು ನೂತನ ಸ್ಪೀಕರ್ ಜಿ.ಎಸ್. ಪಾಟೀಲ ತಿಳಿಸಿದರು.

ಗುರುವಾರ ಪಟ್ಟಣದ ಫಕೀರೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ ಅವರು ಕತೃ ಗದ್ದುಗೆ ಹಾಗೂ ಉಭಯ ಶ್ರೀಗಳ ಆಶೀರ್ವಾದ ಪಡೆದು, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬೆಳಗಾವಿ ಸುವರ್ಣ ಸೌಧದಲ್ಲಿ ಪ್ರತಿ ತಿಂಗಳು ಅಧಿಕಾರಿಗಳ ಸಭೆ ನಡೆಸುವಂತೆ ಕ್ರಮ ಕೈಗೊಳ್ಳಲಾಗುವುದು. ಕಾಗದರಹಿತ (ಪೇಪರ್ ಲೆಸ್) ಸೇರಿದಂತೆ ಸದನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗುವುದು. ಜನರ ಪ್ರೀತಿ ಆಶೀರ್ವಾದದಿಂದ ಹಲವು ಒತ್ತಡಗಳ ನಡುವೆಯೂ ಮೊದಲ ಅಧಿವೇಶನವನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದರು.

ನಾನು ಸಚಿವನಾಗಬೇಕು ಎನ್ನುವುದು ಕ್ಷೇತ್ರದ ಜನರ ಅಸೆಯಾಗಿತ್ತು. ಆದರೆ ಸಚಿವನಾಗಿದ್ದರೆ ಒಂದೇ ಖಾತೆ ಹೊಂದಿರುತ್ತಿದ್ದೆ. ಇದೀಗ ಸಭಾಧ್ಯಕ್ಷನಾಗಿರುವುದರಿಂದ ಎಲ್ಲ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಆಶೀರ್ವಚನ ನೀಡಿದ ೧೩ನೇ ಪಟ್ಟಾಧ್ಯಕ್ಷರಾದ ಫಕೀರ ಸಿದ್ದರಾಮ ಶ್ರೀಗಳು ಹಾಗೂ ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು, ಶ್ರೀಮಠಕ್ಕೆ ಆಗಮಿಸಿದಾಗ ಉಭಯ ಶ್ರೀಗಳ ಆಶೀರ್ವಾದ ಪಡೆಯಬೇಕು ಎನ್ನುವುದು ನೂತನ ಸಭಾಧ್ಯಕ್ಷರ ಆಸೆಯಾಗಿತ್ತು. ಅದರಂತೆ ಬಿಡುವಿಲ್ಲದ ಶ್ರಾವಣ ಮಾಸದ ಕಾರ್ಯಕ್ರಮದ ಮಧ್ಯೆಯೂ ಉಭಯ ಶ್ರೀಗಳು ಜಿ.ಎಸ್. ಪಾಟೀಲರನ್ನು ಬಂದು ಹರಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ರಾಮಕೃಷ್ಣ ದೊಡ್ಡಮನಿ ಹಾಗೂ ಎನ್. ಡಬಾಲಿ, ಹುಮಾಯೂನ್ ಮಾಗಡಿ, ವಿಶ್ವನಾಥ ಕಪ್ಪತ್ತನವರ, ಶಿವಪ್ರಕಾಶ ಮಹಾಜನಶೆಟ್ಟರ, ಗುರುನಾಥ ದಾನಪ್ಪನವರ, ಡಿ.ಕೆ. ಹೊನ್ನಪ್ಪನವರ, ಎಲ್.ಡಿ. ಪಾಟೀಲ, ವೀರಣ್ಣ ಅಂಗಡಿ, ಸಿ.ಸಿ. ನೂರಶೆಟ್ಟರ, ಡಾ. ಎಸ್.ಎಂ. ಬುರಬುರೆ, ಪರಮೇಶ ಪರಬ, ಹೊನ್ನಪ್ಪ ಶಿರಹಟ್ಟಿ, ಡಾ. ವಿಜಯದತ್ತ ಮಂಗಸೂಳಿ, ಮಹಾಂತೇಶ ದಶಮನಿ, ವೀರಯ್ಯ ಮಠಪತಿ, ಚಾಂದಸಾಬ ಮುಳಗುಂದ, ಬುಡನಶ್ಯಾ ಮಕಾನದಾರ, ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಪಿಎಸ್‌ಐ ಈರಪ್ಪ ರಿತ್ತಿ, ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಳ್ಳಾರಿಯಲ್ಲಿ ಫುಟ್‌ಪಾತ್‌ಗಳು ಬಾಯಿ ತೆರೆದುಕೊಂಡಿವೆ; ಹುಷಾರು!
ಛಾಯಾಗ್ರಾಹಕರು ಜೀವನದ ಅಮೂಲ್ಯ ಕ್ಷಣಗಳನ್ನು ಸೆರೆಹಿಡಯುವ ಮಾಂತ್ರಿಕರು: ಶಾಸಕಿ ಅನ್ನಪೂರ್ಣ ಈ. ತುಕಾರಾಮ್