ಕನ್ನಡಪ್ರಭ ವಾರ್ತೆ ಹಾಸನ
ಸೇವಂತಿಗೆ ಮಾರಿಗೆ ೧೦೦ರಿಂದ ೧೫೦ ರು.ಗಳಿದ್ದರೆ, ನಿಂಬೆಹಣ್ಣು ಎರಡಕ್ಕೆ ೧೦ರಿಂದ ೨೦ ರು., ಮಾವಿನಕಟ್ಟು ಒಂದಕ್ಕೆ ೨೦ ರು.ಗಳಿತ್ತು. ಸೇಬು ಒಂದು ಕೆಜಿಗೆ ೧೦೦ರಿಂದ ೧೫೦ ರು.ಗಳಿತ್ತು. ಈ ಬಾರಿ ಬೂದಕುಂಬಳಕಾಯಿ ಕೆ.ಜಿಗೆ ೩೦, ೨೦ ಇದ್ದರೆ ಇನ್ನು ಕೆಲ ವ್ಯಾಪಾರಸ್ಥರು ೩೦ ರು.ಗಳಿಗೆ ಚಿಕ್ಕದಾದ ಬೂದಕುಂಬಳಕಾಯಿ ಮಾರಾಟ ಮಾಡುತ್ತಿದ್ದರು. ಕುಂಬಳಕಾಯಿಗಳು ಹೆಚ್ಚಾಗಿ ಮಾರುಕಟ್ಟೆಗೆ ಬಂದು ಈ ಬೆಲೆ ಕುಸಿತ ಕಂಡು ಬೆಳೆಗಾರರು ಆತಂಕದಲ್ಲಿದ್ದರು. ಇನ್ನು ಪುಟ್ಟಬಾಳೆ ಕೆ.ಜಿಗೆ ೧೦೦ ರಿಂದ ೧೫೦ ರು.ಗಳಿತ್ತು. ಬೆಲೆಗಳಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಉಳಿದಂತೆ ಹಬ್ಬದ ವ್ಯಾಪಾರ ಜೋರಾಗಿಯೇ ನಡೆಯಿತು.