- ಗಾಂಧಿನಗರ ಬಳಿ ಚಿರತೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
ಚನ್ನಗಿರಿ: ಚನ್ನಗಿರಿ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಮಾವಿನಹೊಳೆ, ಗಾಂಧಿನಗರ, ಗಂಡುಗನಹಂಕಲು, ಹಲುಕನಹಾಳು, ರೊಪ್ಪದಟ್ಟಿ ಈ ಪ್ರದೇಶಗಳಲ್ಲಿ ಚಿರತೆ ಸಂಚಾರ ಕಂಡುಬಂದಿದ್ದು, ಗ್ರಾಮಗಳ ಜನರು ಭಯಗೊಂಡಿದ್ದಾರೆ.
ಗಂಡುಗನ ಹಂಕಲು ಗ್ರಾಮದ ಹಾಲೇಶಪ್ಪ ಎಂಬವರು ಎತ್ತುಗಳನ್ನು ಹಿಡಿದುಕೊಂಡು ಕಾಡಿನಲ್ಲಿ ಮೈಯಿಸಲು ಹೋಗಿದ್ದರು. ಈ ವೇಳೆ ಎತ್ತುಗಳ ಮೇಲೆ ಚಿರತೆ ದಾಳಿ ಮಾಡಲು ಮುಂದಾಗಿತ್ತು. ಆಗ ರೈತ ಹಾಲೇಶಪ್ಪ ಜೋರಾಗಿ ಕಿರುಚಾಡಿ ಚಿರತೆಯನ್ನು ಓಡಿಸಿದ್ದಾಗಿ ಹಾಲೇಶಪ್ಪ ಮಾಧ್ಯಮದವರಿಗೆ ತಿಳಿಸಿದ್ದಾರೆ.ಈ ಭಾಗದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕುರಿ-ಮೇಕೆಗಳ ಸಾಕುತ್ತಿದ್ದಾರೆ. ಕುರಿ-ಮೇಕೆಗಳ ಮೇಲೆ ಚಿರತೆ ಆಗಾಗ್ಗೆ ದಾಳಿ ಮಾಡುತ್ತಿರುತ್ತದೆ. ಈ ಕುರಿತು ಅನೇಕ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ವೇಳೆ ಅವರು ಬಂದು ಪಟಾಕಿಗಳನ್ನು ಸಿಡಿಸಿ, ಹೋಗುತ್ತಾರೆ. ಆದರೆ ಚಿರತೆಯನ್ನು ಮಾತ್ರ ಸೆರೆಹಿಡಿಯುತ್ತಿಲ್ಲ ಎಂದು ಗಂಡುಗನಹಂಕಲು ಗ್ರಾಮದ ವಾಸಿ ನವೀನ್ ಆರೋಪಿಸಿದರು.
ಚಿರತೆ ಇರುವ ಹಿನ್ನೆಲೆ ಈ ಭಾಗದ ಜನರು ಹೊಲ, ಗದ್ದೆ, ತೋಟಗಳಿಗೆ ಒಬ್ಬರೇ ಹೋಗುವುದು, ರಾತ್ರಿಯ ಸಮಯದಲ್ಲಿ ಓಡಾಡುವುದು ಸಲ್ಲದು ಎಂದು ಈಗಾಗಲೇ ಧ್ವನಿವರ್ಧಕಗಳ ಮೂಲಕ ಪ್ರಚುರಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
- - --17ಕೆಸಿಎನ್‌ಜಿ2: ಗಂಡುಗನಹಂಕಲು ಬಳಿ ಚಿರತೆ ಸೆರೆಹಿಡಿಯಲು ಬೋನ್ ಅಳವಡಿಸಲಾಗಿದೆ.
-17ಕೆಸಿಎನ್‌ಜಿ3: ಅರಣ್ಯದಲ್ಲಿ ರಾತ್ರಿ ಗಸ್ತು ತಿರುಗುತ್ತಿರುವ ಇಲಾಖೆಯ ಸಿಬ್ಬಂದಿ.