ಅಧಿಕಾರಕ್ಕೆ ಆಸೆಪಡದ ಶಿವಶರಣರು

KannadaprabhaNewsNetwork |  
Published : Aug 18, 2025, 12:00 AM IST
ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ಬಸವಚೇತನದ ಮಹಾ ಬೆಳಗಿನಲ್ಲಿ ಬೆಳಗಿದ ಕ್ರಾಂತಿಯ ಗಂಗೋತ್ರಿ ಶರಣೆ ನಾಗಮ್ಮ ನವರ ಸ್ಮರಣೋತ್ಸವ ಹಾಗೂ 874ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡುತ್ತೀರುವ ಪಾಂಡೋಮಟ್ಟಿ ಶ್ರೀಗಳು, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಮಹಿಮಾ ಜೆ.ಪಟೇಲ್ ಇದ್ದಾರೆ | Kannada Prabha

ಸಾರಾಂಶ

ಶರಣರು ಆಸೆ, ಸಂಪತ್ತು, ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಅನುಭವ ಅವರ ನಿತ್ಯ ಬದುಕಿನ ಸಿದ್ಧಾಂತವಾಗಿತ್ತು. ಬಸವತತ್ವ ಮತ್ತು ವಚನ ಸಾಹಿತ್ಯ ಸಂರಕ್ಷಣೆ ಮಾಡಿದ ಕೀರ್ತಿ ಶಿವಶರಣರಾದ ಅಕ್ಕ ನಾಗಮ್ಮ, ಚನ್ನಬಸವಣ್ಣ, ನುಲಿಯ ಚಂದಯ್ಯ, ಕಕ್ಕಯ್ಯ ಅವರಿಗೆ ಸಲ್ಲುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ನುಡಿದಿದ್ದಾರೆ.

- ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಗುರುಬಸವ ಶ್ರೀ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಶರಣರು ಆಸೆ, ಸಂಪತ್ತು, ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಅನುಭವ ಅವರ ನಿತ್ಯ ಬದುಕಿನ ಸಿದ್ಧಾಂತವಾಗಿತ್ತು. ಬಸವತತ್ವ ಮತ್ತು ವಚನ ಸಾಹಿತ್ಯ ಸಂರಕ್ಷಣೆ ಮಾಡಿದ ಕೀರ್ತಿ ಶಿವಶರಣರಾದ ಅಕ್ಕ ನಾಗಮ್ಮ, ಚನ್ನಬಸವಣ್ಣ, ನುಲಿಯ ಚಂದಯ್ಯ, ಕಕ್ಕಯ್ಯ ಅವರಿಗೆ ಸಲ್ಲುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಪಾಂಡೋಮಟ್ಟಿ ವಿರಕ್ತ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಬಸವಚೇತನದ ಮಹಾ ಬೆಳಗಿನಲ್ಲಿ ಬೆಳಗಿದ ಕ್ರಾಂತಿಯ ಗಂಗೋತ್ರಿ ಶರಣೆ ನಾಗಮ್ಮ ಸ್ಮರಣೋತ್ಸವ ಹಾಗೂ 874ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅಕ್ಕ ನಾಗಮ್ಮ ಅವರ ಆಶಯದಂತೆ ಹುತ್ತಕ್ಕೆ ಹಾಲೆರೆಯದೇ ಸಮಾಜದಲ್ಲಿ ನೊಂದವರು, ಅಶಕ್ತರು, ದುರ್ಬಲರಿಗೆ ಹಾಲು ನೀಡುಸಬೇಕು. ಆ ಮೂಲಕ ಸಮಾಜವನ್ನು ಮೌಢ್ಯದಿಂದ ಹೊರತಂದು ವೈಚಾರಿಕತೆಯ ಕಡೆ ಮುನ್ನಡೆಸಬೇಕು ಎಂದರು.

ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಮಾರಂಭ ಉದ್ಘಾಟಿಸಿ, ಪಾಂಡೋಮಟ್ಟಿ ಗ್ರಾಮದ ಈ ವಿರಕ್ತ ಮಠವು ಬಸವ ತತ್ವ ಪ್ರಚಾರ ಜೊತೆಗೆ ಅನುಷ್ಠಾನಗೊಳಿಸುವುದರಲ್ಲಿ ರಾಜ್ಯದಲ್ಲಿಯೇ ಪ್ರಥಮ ಮಠವಾಗಿದೆ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರೇಶ್ ಕುಮಾರ್, ಜೆ.ಆರ್. ಷಣ್ಮುಖಪ್ಪ, ಪಾರ್ವತಮ್ಮ, ಕೆ.ಜಿ.ಶಿವಮೂರ್ತಿ, ಎಂ.ಜಿ. ಧನಂಜಯ್, ಚನ್ನಬಸಪ್ಪ, ಟಿ.ವಿ.ಚಂದ್ರಪ್ಪ ಹಾಜರಿದ್ದರು.

- - -

-17ಕೆಸಿಎನ್‌ಜಿ1.ಜೆಪಿಜಿ:

ಶಿವಾನುಭವ ಕಾರ್ಯಕ್ರಮದಲ್ಲಿ ಪಾಂಡೋಮಟ್ಟಿ ಶ್ರೀಗಳು ಆಶೀವಚನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆಯಿಂದ ಆಹಾರ ಮೇಳ, ವಸ್ತು ಪ್ರದರ್ಶನ
ಚಲುವರಾಯಸ್ವಾಮಿ ಅವರಿಂದಲೇ ಹಿಟ್ ಆಂಡ್ ರನ್ ಕೆಲಸ: ಸಿ.ಎಸ್.ಪುಟ್ಟರಾಜು