ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಸೂರನಹಳ್ಳಿ ಗ್ರಾಮದಲ್ಲಿ ಹಲವು ದಿನಗಳಿಂದ ಗ್ರಾಮದ ಹಸು, ಕುರಿ, ಮೇಕೆ ಸೇರಿದಂತೆ ಸಾಕು ಪ್ರಾಣಿಗಳನ್ನು ತಿಂದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಸೂರನಹಳ್ಳಿ ಗ್ರಾಮದ ಪ್ರಸಾದ್ ಜಮೀನಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಸಾತನೂರು ವಲಯ ಅರಣ್ಯಾಧಿಕಾರಿ ಆಶಾ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ಬೋನಿಟ್ಟಿದ್ದರು. ಚಿರತೆ ಬೋನಿಗೆ ಬಿದ್ದ ಕೂಡಲೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿ, ಸಿಬ್ಬಂದಿ ವರ್ಗ ಸುರಕ್ಷಿತವಾಗಿ ಮಲೈ ಮಹದೇಶ್ವರ ಬೆಟ್ಟದ ಅರಣ್ಯ ವಲಯಕ್ಕೆ ಬಿಡುವುದಾಗಿ ತಿಳಿಸಿದ್ದಾರೆ. ಅರಣ್ಯ ಸಿಬ್ಬಂದಿಗಳಾದ ಕಾಂತರಾಜು, ಮುತ್ತುನಾಯ್ಕ್, ರಿಜ್ವಾನ್ ಹಾಗೂ ವಾಹನ ಚಾಲಕ ಮುತ್ತುರಾಜು, ಜಮೀನು ಮಾಲೀಕ ಪ್ರಸಾದ್, ಗ್ರಾಮಸ್ಥರಾದ ಕೆಂಚಪ್ಪ, ಬಸವರಾಜು, ನರೇಂದ್ರ, ಕುಮಾರ್, ಮಾದಶೆಟ್ಟಿ, ಚಂದ್ರು ಉಪಸ್ಥಿತರಿದ್ದರು.