ಮುಂದುವರೆದ ಚಿರತೆ ಉಪಟಳ: ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ

KannadaprabhaNewsNetwork |  
Published : May 13, 2026, 12:45 AM IST
 ಚಿರತೆ  | Kannada Prabha

ಸಾರಾಂಶ

ಕುಳಿಯಮ್ಮ ಮತ್ತು ಗೌರಿ ಎಂಬುವವರಿಗೆ ಸೇರಿದ ಎರಡು ಮೇಕೆಗಳನ್ನು ಹೊತ್ತೊಯ್ದಿದ್ದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹನೂರು: ತಾಲೂಕಿನ ಇಂಡಿಗನತ್ತ ಬಳಿ ಬಾಲಕನನ್ನು ಬಲಿ ಪಡೆದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸುತ್ತಿದ್ದು, 30ಕ್ಕೂ ಅಧಿಕ ಮಂದಿ ಈ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ, ಮತ್ತೊಂದೆಡೆ ಚಿರತೆಯೊಂದು ಎರಡು ಮೇಕೆಗಳನ್ನು ಹೊತ್ತೊಯ್ದ ಘಟನೆ ಸೋಮವಾರ ರಾತ್ರಿ ನಾಗಮಲೆ ಗ್ರಾಮದಲ್ಲಿ ನಡೆದಿದೆ. ಕುಳಿಯಮ್ಮ ಮತ್ತು ಗೌರಿ ಎಂಬುವವರಿಗೆ ಸೇರಿದ ಎರಡು ಮೇಕೆಗಳನ್ನು ಹೊತ್ತೊಯ್ದಿದ್ದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿರತೆ ಭೀತಿಯಲ್ಲಿ ಗ್ರಾಮಸ್ಥರು: ಚಿರತೆಯು ದಾಳಿ ಘಟನೆಗಳಿಂದ ಅರಣ್ಯ ಭಾಗದಲ್ಲಿರುವ ಇಂಡಿಗನತ್ತ, ಪಡಸಲನತ್ತ ಹಾಗೂ ನಾಗಮಲೆ, ತುಳಸಿಕೆರೆ ಸೇರಿ ವಿವಿಧ ಗ್ರಾಮಗಳಲ್ಲಿ ನಿವಾಸಿಗಳು ಚಿರತೆ ಭೀತಿಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ಕೊಟ್ಟು ಸೂಕ್ತ ಕ್ರಮ‌ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಕಚರಿಗಳಲ್ಲಿ ಕಡತಗಳ ಪರಿಶೀಲನೆ, ಸಮಗ್ರ ತನಿಖೆ ನಡೆಯಲಿ: ಕಿರಂಗೂರು ಪಾಪು
ನಿಗದಿತ ಅವಧಿಯೊಳಗೆ ಮಾಹಿತಿ ನೀಡದೆ ನಿರ್ಲಕ್ಷ್ಯ: ಪಿಡಿಒಗೆ 25 ಸಾವಿರ ರು. ದಂಡ