ಮುನಿರಾಬಾದ್: ಮುನಿರಾಬಾದನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಈ ಕುರಿತು ಮಾತನಾಡಿದ ಆರ್‌ಎಫ್‌ಒ ವಲಯ ಅರಣ್ಯಾಧಿಕಾರಿ ಸ್ವಾಮಿ, ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು ನಿಜ, ಆದರೆ ಅದರ ಹೆಜ್ಜೆ ಗುರುತುಗಳು ಸಿಕ್ಕಿದೆ. ಪಂಪಾವಣದಲ್ಲಿ ವಾಯುವಿಹಾರ ಮಾಡುವವರು ನಾಲ್ಕು ದಿನ ವಾಯುವಿಹಾರ ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮುನಿರಾಬಾದಿನಲ್ಲಿ ನಾಯಿಗಳು ಹೆಚ್ಚು ಇದ್ದು, ಚಿರತೆಗೆ ನಾಯಿ ಮೌಂಸ ಅಂದರೆ ಪ್ರಾಣ ಚಿರತೆ ಬರಲು ಇದು ಒಂದು ಕಾರಣವಾಗಿರಬಹುದು ಎಂದರು.ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ರಾತ್ರಿ ವೇಳೆ ಜಂಟಿಯಾಗಿ ಗಸ್ತು ತಿರುಗುತ್ತಿದ್ದಾರೆ. ಚಿರತೆ ಮತ್ತೇ ಪ್ರತ್ಯೇಕ್ಷವಾದರೆ ಅದನ್ನು ಹಿಡಿಯಲು ಬೋನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದುವರೆಗೆ ಮುನಿರಾಬಾದ ಗ್ರಾಪಂ ನಾಯಿಗಳನ್ನು ಹಿಡಿಯುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ, ಪಂಚಾಯಿತಿಯ ಈ ನಿರ್ಲಕ್ಷ್ಯ ಧೋರಣೆಯಿಂದ ಗ್ರಾಮಕ್ಕೆ ಚಿರತೆ ಬರುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.