ಕನ್ನಡಪ್ರಭ ವಾರ್ತೆ ಚಡಚಣ
ತದ್ದೇವಾಡಿ, ಮಣಕಂಲಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ಬಹುದಿನಗಳಿಂದ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು, ಒಂದರ ಮೇಲೊಂದರಂತೆ ದನ, ಕರು, ಆಡು, ಕುರಿಗಳನ್ನು ಚಿರತೆ, ಕೊಂದು ಹಾಕುತ್ತಿದೆ. ಚಿರತೆ ಹಿಡಿಯಲು ಅರಣ್ಯ ಇಲಾಖೆ, ಹಲಸಂಗಿ ಗೊಲ್ಲ ಸಮುದಾಯ ತಂಡ, ಪೊಲೀಸ್ ಇಲಾಖೆ ಮತ್ತು ಗ್ರಾಮಸ್ಥರ ಸತತ ಪ್ರಯತ್ನ ನಡೆದರೂ ಸಹ ಕಣ್ಣು ತಪ್ಪಿಸಿಕೊಳ್ಳುತ್ತಿದೆ.
ಅರಣ್ಯಾಧಿಕಾರಿಗಳಾದ ಭಾಗ್ಯವಂತ ಮಸೂದಿ, ಎಸ್.ಜಿ. ಸಂಗಾಲಕ, ಮಂಜುನಾಥ ಧುಳೆ, ಕಂದಾಯ ನಿರೀಕ್ಷಕ ಗುರುಶಾಂತ ಬಿರಾದಾರ, ಲೋಣಿ ಗ್ರಾಪಂ ಪಿಡಿಓ ಸತೀಶ ಬಿರಾದಾರ, ಗ್ರಾಮಾಡಳಿತ ಅಧಿಕಾರಿ ಸಿ.ಎಸ್ ದಟ್ಟಿ, ಹಲಸಂಗಿ ಗೋಪಾಲಕ ತಂಡ, ಪಶು ಇಲಾಖೆ ಹಾಗೂ ತದ್ದೇವಾಡಿ, ಮರಗೂರ, ಮಣಕಂಲಗಿ, ಉಮರಾಣಿ, ಟಾಕಳಿ ಗ್ರಾಮಸ್ಥರು ಇದ್ದರು.ಚಿರತೆ ಪತ್ತೆಗೆ ಅರಣ್ಯ ಇಲಾಖೆಯಿಂದ ಸಾಕಷ್ಟು ಪ್ರಯತ್ನ ನಡೆದಿದೆ. ಚಿರತೆ ಕಾಣಿಸಿಕೊಂಡ ಸ್ಥಳದಿಂದ ತಪ್ಪಿಸಿಕೊಂಡು ತಿರುಗುತ್ತಿದೆ. ಇಲಾಖೆಯಿಂದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಕಾರ್ಯಾಚರಣೆ ನಡೆದಿದ್ದು, ಆದಷ್ಟು ಬೇಗನೆ ಪತ್ತೆ ಹಚ್ಚಲಾಗುವುದು. ಗ್ರಾಮಸ್ಥರು ಕಾಣಿಸಿಕೊಂಡಾಗ ತಕ್ಷಣ ನಮ್ಮ ಗಮನಕ್ಕೆ ತರಬೇಕು. ಅಡವಿ ವಸ್ತಿ ಜನ ಮುಂಜಾಗೃತೆಯಿಂದ ಇರಬೇಕು.ಮಲ್ಲಿನಾಥ ಕುಸನಾಳ, ಅರಣ್ಯಾಧಿಕಾರಿ ವಿಜಯಪುರ
ನಾಗನಾಥಗೌಡ ಬಿರದಾರ, ರೈತೋದಯ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ