ಚಕ್ರಬಾವಿಯಲ್ಲಿ ಚಿರತೆ ಹಾವಳಿ

KannadaprabhaNewsNetwork | Published : Nov 8, 2023 1:00 AM

ಸಾರಾಂಶ

ಮಾಗಡಿ: ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ಚಿರತೆ ಕಾಟದಿಂದ ಗ್ರಾಮಸ್ಥರು ಆತಂಕದಲ್ಲಿದ್ದು, ಕುರಿ ಹಾಗೂ ದನಗಾಹಿಗಳಿಗೆ ಸಾಕಷ್ಟು ತೊಂದರೆ ಆಗಿದೆ.

ಮಾಗಡಿ: ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ಚಿರತೆ ಕಾಟದಿಂದ ಗ್ರಾಮಸ್ಥರು ಆತಂಕದಲ್ಲಿದ್ದು, ಕುರಿ ಹಾಗೂ ದನಗಾಹಿಗಳಿಗೆ ಸಾಕಷ್ಟು ತೊಂದರೆ ಆಗಿದೆ.

ಚಕ್ರಬಾವಿ ಸಮೀಪದ ಚಿಕ್ಕಬೀರಯ್ಯ ದೇವಸ್ಥಾನದ ಸಮೀಪವಿರುವ ಗವಿಮಠ ಸ್ಥಳದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಕುರಿ ಮತ್ತು ದನ ಮೇಯಿಸುವರಿಗೆ ಸಾಕಷ್ಟು ತೊಂದರೆ ಆಗಿದೆ. ಪದೇಪದೇ ಚಿರತೆಗಳು ದಾಳಿ ಮಾಡಿ ಕುರಿಗಳನ್ನು ಕೊಂದು ಸಾಯಿಸುತ್ತಿವೆ. ಕುರಿ ಮೇಯಿಸುವವರು ಪ್ರಾಣದ ಹಂಗು ತೊರೆದು ಕುರಿಗಳನ್ನು ರಕ್ಷಿಸುವಂತಾಗಿದೆ. ಹಗಲಲ್ಲೇ ಚಿರತೆ ದಾಳಿ ಮಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಅರಣ್ಯ ಇಲಾಖೆ ಗವಿಮಠದ ಸುತ್ತಮುತ್ತ ಚಿರತೆ ಸೆರೆಗೆ ಬೋನಿರಿಸಿ ನೆಮ್ಮದಿಯಾಗಿ ಬದುಕಲು ಅನುಕೂಲ ಮಾಡಿಕೊಡಬೇಕು ಎಂದು ಚಕ್ರಬಾವಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚಿರತೆ ಮರಿ ಪ್ರತ್ಯಕ್ಷ: ಗವಿಮಠದ ಹತ್ತಿರ ಚಿರತೆ ಮರಿ ಕಾಣಿಸಿಕೊಂಡಿದ್ದು ಕುರಿ ಮೇಯಿಸುವಾಗ ಚಿರತೆ ಮರಿಯ ಸದ್ದು ಕೇಳಿದ ಗ್ರಾಮಸ್ಥರು ಪೊದೆಗಳಲ್ಲಿ ಹುಡುಕುವಾಗ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Share this article