ಬಾಳೆಹೊನ್ನೂರುಕಲಿತ ಪಾಠಗಳನ್ನು ಮನುಷ್ಯ ಕೆಲವೊಮ್ಮೆ ಮರೆಯಬಹುದು. ಆದರೆ ಅನುಭವದಿಂದ ಕಲಿತ ಪಾಠ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ 34ನೇ ವರ್ಷದ ಪುಣ್ಯ ಸ್ಮರಣೋತ್ಸವ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಕಲಿತ ಪಾಠಗಳನ್ನು ಮನುಷ್ಯ ಕೆಲವೊಮ್ಮೆ ಮರೆಯಬಹುದು. ಆದರೆ ಅನುಭವದಿಂದ ಕಲಿತ ಪಾಠ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ರಂಭಾಪುರಿ ಪೀಠದಲ್ಲಿ ಗುರುವಾರ ನಡೆದ ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ 34ನೇ ವರ್ಷದ ಪುಣ್ಯ ಸ್ಮರಣೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹೂವಿನ ಪರಿಮಳ ಗಾಳಿ ಬೀಸಿದ ದಿಕ್ಕಿನಲ್ಲಷ್ಟೇ ಹರಡುತ್ತದೆ. ಆದರೆ ಮನುಷ್ಯನ ಒಳ್ಳೆಯತನ ಎಲ್ಲೆಡೆ ವ್ಯಾಪಿಸುತ್ತದೆ. ಸುಳ್ಳು ಹೇಳಿ ಜೀವನಪೂರ್ತಿ ಕಷ್ಟಪಡುವುದಕ್ಕಿಂತ ಸತ್ಯ ಎಷ್ಟೇ ಕಹಿಯಾಗಿದ್ದರೂ ಅದನ್ನೇ ಹೇಳುವುದೊಳ್ಳೆಯದು. ಮನುಷ್ಯ ಮನೆ, ಊರು, ಬಟ್ಟೆ, ಸಂಬಂಧ, ಸ್ನೇಹಿತರನ್ನು ಬದಲಾಯಿಸುತ್ತಾನೆ. ಆದರೂ ಆತನಿಗೆ ನೆಮ್ಮದಿಯಿಲ್ಲ. ಏಕೆಂದರೆ ಅವನು ತನ್ನನ್ನು ತಾನು ಬದಲಾಯಿಸಿಕೊಳ್ಳುವುದಿಲ್ಲ.
ಗಳಿಸಿದ ಹಣ ಇರುವತನಕ, ಜನ ಗಳಿಸಿದರೆ ಕೊನೆಯತನಕ, ತುಂಬಿದ ಜೇಬು ನೂರು ಆಟ ಆಡಿಸುತ್ತದೆ. ಖಾಲಿ ಜೇಬು ನೂರು ಪಾಠ ಕಲಿಸುತ್ತದೆ. ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರು ಕೈಲಾಸಕ್ಕಿಂತ ಕಾಯಕ, ಧರ್ಮ ಕ್ಕಿಂತ ದಯೆ, ಅರಿವಿಗಿಂತ ಆಚಾರ, ಅಧಿಕಾರಕ್ಕಿಂತ ಅಭಿಮಾನ, ಆಸ್ತಿಗಿಂತ ಆರೋಗ್ಯ, ಸನ್ಮಾನಕ್ಕಿಂತ ಸಂಸ್ಕಾರ, ಹಣಕ್ಕಿಂತಲೂ ಗುಣ, ಮನೆಗಿಂತ ಮನಸ್ಸು, ವಿದ್ಯೆಗಿಂತ ಅನುಭವ ದೊಡ್ಡದೆಂದು ತಿಳಿದು ಬಾಳಿ ಭಕ್ತರ ಬಾಳ ದಾರಿಗೆ ಬೆಳಕು ತೋರಿದ ಪರಮಾಚಾರ್ಯರು. 19 ವರ್ಷಗಳ ಕಾಲ ಜಗದ್ಗುರುಗಳಾಗಿ ಮಾನವ ಧರ್ಮದ ಹಿರಿಮೆ ಮತ್ತು ಸಂಸ್ಕಾರ ಸಂಸ್ಕೃತಿ ಬೆಳೆಸಿ ಬಲಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾ ಚಾರ್ಯರು ಮಾತನಾಡಿ, ಪರಿಶ್ರಮವಿಲ್ಲದೇ ಯಶಸ್ಸು ಬಯಸುವುದೆಂದರೆ ಬೀಜ ಬಿತ್ತದೆ ಫಲ ಬಯಸಿದಂತೆ. ಕೆಡುವು ದಕ್ಕಿಂತ ಕಟ್ಟುವುದಕ್ಕೆ ಮುರಿಯುವುದಕ್ಕಿಂತ ಜೋಡಿಸುವುದಕ್ಕೆ ನಿರಂತರ ಶ್ರಮಿಸಿದ ಕೀರ್ತಿ ಲಿಂ. ಶ್ರೀ ರುದ್ರಮುನಿ ಜಗದ್ಗುರುಗಳಿಗೆ ಸಲ್ಲುತ್ತದೆ. ಅವರ ಅಂತಃಕರಣದ ಗುರು ಕಾರುಣ್ಯದಿಂದ ಎಲ್ಲರ ಬಾಳಿನಲ್ಲಿ ಶ್ರೇಯಸ್ಸು, ಶಾಂತಿ ಪ್ರಾಪ್ತವಾಗಲಿ ಎಂದರು.
ಅಂಬಾಜೋಗಾಯಿ ಹಿರೇಮಠದ ಶಂಭುಲಿಂಗ ಶಿವಾಚಾರ್ಯರು ಮಾತನಾಡಿ ಪರಿಶ್ರಮ ಮೆಟ್ಟಲಿನಂತೆ. ಅದೃಷ್ಟ ಲಿಫ್ಟಿನಂತೆ. ಅದೃಷ್ಟ ಕೆಲವೊಮ್ಮೆ ಕೈಕೊಡಬಹುದು. ಆದರೆ ಮೆಟ್ಟಿಲು ಎಂದಿಗೂ ಕೈಕೊಡುವುದಿಲ್ಲ. ಮನುಷ್ಯನಾಗಿ ಬಾಳುವುದು ಸುಲಭ. ಆದರೆ ಮನುಷ್ಯ ಮನುಷ್ಯತ್ವ ಮಾನವೀಯತೆಯಿಂದ ಬಾಳುವುದು ಕಷ್ಟ. ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರು ಕಾರುಣ್ಯದ ಕಡಲಾಗಿ ಸಕಲ ಸದ್ಭಕ್ತರಿಗೆ ಅಮೂಲ್ಯ ಮಾರ್ಗದರ್ಶನ ನೀಡಿದ್ದನ್ನು ಮರೆಯಲಾಗದು ಎಂದರು.
ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢ ಶಾಲಾ ಆವರಣದಲ್ಲಿ ಭವ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಮಹಾರಾಷ್ಟ್ರದ ಮಾವನೂರು ಗುರು ವಿರೂಪಾಕ್ಷ ಶಿವಾಚಾರ್ಯರು, ಪಾತ್ರಿ ಕಾಶೀನಾಥ ಶಿವಾ ಚಾರ್ಯರು, ಪರಾಂಡಕರ ಮಠದ ರಾಚಲಿಂಗಾ ಶಿವಾಚಾರ್ಯರು, ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ತೆಂಡೆಕೆರೆ ಗಂಗಾಧರ ಶಿವಾಚಾ ರ್ಯರು, ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು, ಅಷ್ಟಿ ವಿಶ್ವಚೈತನ್ಯ ಶಿವಾಚಾರ್ಯರು, ಕರ್ಜಗಿರಿ ಶಿವಸೋಮನಾಥ ಶಿವಾಚಾರ್ಯರು, ಹುಡುಗಿ ಸೊಮೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಆಲ್ದೂರು ಹೋಬಳಿ ವೀರಶೈವ ಸಮಾಜ ಬಾಂಧವರಿಂದ ಅನ್ನ ದಾಸೋಹ ನೆರವೇರಿತು. ೨೦ಬಿಹೆಚ್‌ಆರ್ ೪: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಲಿಂ. ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ೩೪ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀ ರುದ್ರಮುನಿ ಜಗದ್ಗುರುಗಳ ಗದ್ದುಗೆಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪೂಜೆ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.