ಕುಕನೂರು: ತಾಲೂಕಾಡಳಿತದ ಪ್ರಜಾಸೌಧ ಕಟ್ಟಡ ಗುಣಮಟ್ಟದಿಂದ ಕೂಡಿರಲಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಗುತ್ತಿಗೆದಾರರಿಗೆ ಸೂಚಿಸಿದರು.
ಬರ ಸಮೀಕ್ಷೆ:ಜಿಲ್ಲೆಯಲ್ಲಿ ಬರ ಆವರಿಸಿರುವ ಕುರಿತು ಈಗಾಗಲೇ ಮುನ್ನೆಚ್ಚರಿಗೆ ಕ್ರಮ ತೆಗೆದುಕೊಳ್ಳಲಾಗಿದ್ದು, ₹4 ಕೋಟಿ ಹಣ ಕುಡಿವ ನೀರಿಗಾಗಿ ಹಾಗೂ ನೀರಿನ ಮೂಲಗಳ ರಿಪೇರಿಗಾಗಿ ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ 47% ಮಾತ್ರ ಬಿತ್ತನೆ ಕಾರ್ಯ ಆಗಿದ್ದು, ಬೆಳೆಗಳಿಗೆ ರೈತರು ವಿಮೆ ಭರಿಸಬೇಕು. ವಿಮೆಯಲ್ಲಿ ಮಧ್ಯ ಹಂಗಾಮಿಗೆ ಬೆಳೆ ವಿಮೆಯಾಗಿ 25% ಮಂಜೂರು ಮಾಡಿಸಲಾಗುವುದು. ಮಳೆ ಪ್ರಮಾಣ ಕಡಿಮೆ ಇದ್ದು, ಸೂಪರ್ ಎಲೊನೋ ಪ್ರಯುಕ್ತ ಮುಂದಿನ ಅಗಸ್ಟ್, ಸೆಪ್ಟಂಬರ್, ನವಂಬರ್ ತಿಂಗಳಿನಲ್ಲೂ ಸಹ ಮಳೆಯ ಪ್ರಮಾಣ ಕಡಿಮೆ ಇದೆ ಎಂದರು.
ಪವರ್ ಟ್ರಾನ್ಸಿಮಿಷನ್ ಲೈನ್ ಗೆ ಜಿಲ್ಲಾಧಿಕಾರಿ ಆಗಿ ನಾನು ಭೂಮಿ ಕೊಡಿಸಬೇಕು. ಆದರೆ ಸೋಲಾರ್, ವಿಂಡ್ ಪವರ್ ಅವರಿಗೆ ರೈತರು ಹಾಗೂ ಆಯಾ ಕಂಪನಿಗಳಿಗೆ ಭೂಮಿ ವಿಚಾರ ಮಾತ್ರ ಇರುತ್ತದೆ. ಚಂಡೂರು, ಬೆಣಕಲ್ ಬಳಿ 770 ಕೆವಿ ವಿದ್ಯುತ್ ಸ್ಥಾವರ ಘಟಕಕ್ಕೆ ಸ್ಥಳೀಯ ಶಾಸಕರು ಭೂಮಿ ನೀಡಬೇಡಿ ಎಂದು ಪತ್ರ ಬರೆದಿದ್ದರು. ನಾನು ಸಹ ಅದನ್ನು ಇಂಧನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸದ್ಯ ಈಗ ರೈತರು ನಾವು ಭೂಮಿ ಕೊಡುತ್ತೇವೆ ಎಂದು ಬಂದಿದ್ದಾರೆ. ಸದ್ಯ ಇಂಧನ ಇಲಾಖೆಗೆ ಮೇಲೆ ಭೂಮಿ ಖರೀದಿ ಹೊಣೆಗಾರಿಕೆ ಇದೆ ಎಂದರು.ಪ್ರಜಾಸೌಧ ನಿರ್ಮಾಣ ಆಗುವ ಸ್ಥಳಕ್ಕೆ ಆಗಮಿಸಲು ಸೂಕ್ತ ರಸ್ತೆ ನಿರ್ಮಿಸಿ ಎಂದು ಸೂಚಿಸಿದರು. ಶಾಸಕರು, ಸಂಸದರು ಪ್ರಜಾಸೌಧ ಭೂಮಿ ಪೂಜೆಗೆ ಇಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ನಾನು ಸಹ ಇದೆ ಮೊದಲು ಜನಪ್ರತಿನಿಧಿಗಳು ಇಲ್ಲದೆ ಭೂಮಿ ಪೂಜೆ ಮಾಡಿದ್ದು ಎಂದು ತಿಳಿಸಿದರು. ಗುದ್ನೇಪ್ಪನಮಠದ ಭೂಮಿ ಬಗ್ಗೆ ಕೋರ್ಟಿನಲ್ಲಿ ವಿವಾದ ಇದೆ ಎಂಬ ಪ್ರಶ್ನೆಗೆ ಈಗಾಗಲೇ ಕೋರ್ಟ ಕಟ್ಟಡ ನಿರ್ಮಾಣದ ಪರ ಆದೇಶ ಮಾಡಿದೆ. ಸದ್ಯ ಅರ್ಜಿದಾರರು ನಮ್ಮ ಭೂಮಿ ಎಲ್ಲಿದೆ ಎಂದು ಕೋರ್ಟಿನ ಮೊರೆ ಹೋಗಿದ್ದಾರೆ. ವಿವಾದ ರಹಿತವಾದ ಜಾಗದಲ್ಲಿ ಬಂದು ಭೂಮಿ ಪೂಜೆ ಮಾಡಿದ್ದೇನೆ ಎಂದರು.